Wednesday, January 22, 2025

ಆಸ್ಟ್ರೇಲಿಯಾಗೆ ಕಿಂಗ್ ಕೊಹ್ಲಿಯೇ ವಿಲನ್! ಅಂಕಿ ಅಂಶಗಳೇ ಹೇಳುತೈತೆ ‘ವಿರಾಟ್’ ರೂಪ

ಬೆಂಗಳೂರು : ಬಲಿಷ್ಠ ಆಸಿಸ್ ಗೆ ಕಿಂಗ್ ಕೊಹ್ಲಿಯೇ ವಿಲನ್! ರನ್ ಮಷಿನ್ ವಿರಾಟ್ ರೂಪ ಆಸಿಸ್ ಪಾಲಿಗೆ ಕಂಟಕವಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿವೆ ಅಂಕಿ ಅಂಶಗಳು.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಜೂನ್ 7ರಿಂದ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಸೆಣಸಲಿವೆ. ಆಸಿಸ್ ವಿರುದ್ಧದ ಫೈನಲ್​ ಪಂದ್ಯಕ್ಕಾಗಿ ಬ್ಲೂ ಬಾಯ್ಸ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಕಿಂಗ್ ಕೊಹ್ಲಿ ಆಸಿಸ್ ಗಳನ್ನು ಚೆಂಡಾಡಲು ರಣತಂತ್ರ ಹೆಣೆದಿದ್ದಾರೆ.

2019 ರಿಂದ 2021 ರವರೆಗೆ ಮರೆಯಾಗಿದ್ದ ಕೊಹ್ಲಿ ವಿರಾಟ ರೂಪ ಮತ್ತೆ ಪ್ರದರ್ಶನವಾಗುತ್ತಿದೆ. ಅಲ್ಲದೆ, ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಬ್ಯಾಟ್ ಬೀಸಿದ್ದ ಕಿಂಗ್ ಕೊಹ್ಲಿ ಬೊಂಬಾಟ್ ಫಾರ್ಮ್​ ಗೆ ಮರಳಿದ್ದಾರೆ. ಇದು ಅತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ತಲೆಬಿಸಿ ಉಂಟುಮಾಡಿದೆ.

ಶತಕದ ಬರವನ್ನು ನೀಗಿಸಿದ ಕಿಂಗ್

ಕಳೆದ ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ವಿರಾಟ್ ಕೊಹ್ಲಿ 2022ರ ಏಷ್ಯಾಕಪ್​ ಮೂಲಕ ಫಾರ್ಮ್​ ಕಂಡುಕೊಂಡಿದ್ದರು. ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಶತಕ ಬಾರಿಸಿ ಶತಕದ ಬರವನ್ನು ನೀಗಿಸಿದ್ದರು. ಬಳಿಕ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ದಾಖಲೆಗಳ ‘ಚಾಂಪಿಯನ್ ಧೋನಿ’ : ಸಚಿನ್ ದಾಖಲೆಯೂ ಉಡೀಸ್..!

ಒಂದೇ ವರ್ಷದಲ್ಲಿ 7 ಭರ್ಜರಿ ಶತಕ

ವಿರಾಟ್ ಕೊಹ್ಲಿ ಒಟ್ಟು 48 ಪಂದ್ಯಗಳನ್ನಾಡಿದ್ದು, 52 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 53.21 ಸರಾಸರಿಯಲ್ಲಿ ಬರೋಬ್ಬರಿ 2,235 ರನ್​ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ, 14 ಅರ್ಧಶತಕ ಸೇರಿವೆ. ಒಂದೇ ವರ್ಷದಲ್ಲಿ 7 ಭರ್ಜರಿ ಶತಕಗಳನ್ನು ಸಿಡಿಸಿ ಅಬ್ಬರಿಸಿರುವುದು ಆಸಿಸ್ ಗೆ ನಿದ್ದಿಗೆಡಿಸಿದೆ.

ಒಟ್ನಲ್ಲಿ, ಕಿಂಗ್ ಕೊಹ್ಲಿಯ ಬೊಂಬಾಟ್ ಫಾರ್ಮ್​ ಆಸಿಸ್ ಪಾಲಿಗೆ ಕಂಟಕವಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನೂ, ನಿರ್ಣಾಯಕ ಟೂರ್ನಿಯಲ್ಲಿ ಬೊಂಬಾಟ್ ಇನಿಂಗ್ಸ್ ಕಟ್ಟುವ ಚಾಣಕ್ಷತನ ವಿರಾಟ್ ಕೊಹ್ಲಿಗೆ ಕರಗತವಾಗಿದೆ. ಹೀಗಾಗಿ, ಕೊಹ್ಲಿಯನ್ನು ಕಟ್ಟಿಹಾಕಲು ಆಸಿಸ್ ಬೌಲರ್​ಗ ತಾಲೀಮು ಆರಂಭಿಸಿದ್ದಾರೆ.

7 ಶತಕಗಳು, 14 ಅರ್ಧಶತಕಗಳು

ಏಷ್ಯಾಕಪ್-2022ರಿಂದ ವಿರಾಟ್ ಕೊಹ್ಲಿ ಪ್ರದರ್ಶನ ಅದ್ಭುತವಾಗಿದೆ. ‘ವಿರಾಟ್ ವೀರಾವೇಶ’ ಹೇಗಿತ್ತು ಎನ್ನುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಪಂದ್ಯಗಳು : 48

ಇನ್ನಿಂಗ್ಸ್ : 52

ರನ್ : 2,235

ಸರಾಸರಿ : 53.21

ಸ್ಟ್ರೈಕ್ ರೇಟ್ : 103.90

ಅತ್ಯಧಿಕ ರನ್ : 186

ಶತಕ : 07

ಅರ್ಧಶತಕ : 14

RELATED ARTICLES

Related Articles

TRENDING ARTICLES