Monday, December 23, 2024

ಫ್ರೀ ವಿದ್ಯುತ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ : ಒಂದು RR ಸಂಖ್ಯೆಗೆ ಮಾತ್ರ ಕರೆಂಟ್ ಉಚಿತ!

ಬೆಂಗಳೂರು : ಒಂದು ಆರ್.ಆರ್(RR) ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್! ಯೆಸ್, 200 ಯೂನಿಟ್​ ಉಚಿತ ವಿದ್ಯುತ್​ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್​ ನೀಡಿದೆ.

ಹೌದು, ರಾಜ್ಯ ಸರ್ಕಾರದ ತೀರ್ಮಾನದಿಂದ ಬಾಡಿಗೆ ಮನೆಗಳಲ್ಲಿ ಇರುವವರಿಗೆ ‘ಗೃಹಜ್ಯೋತಿ’ ಸಿಗಲ್ವಾ? ಎಂಬ ಗೊಂದಲ ಸೃಷ್ಟಿಯಾಗಿದೆ.

ಒಂದು ಆರ್.ಆರ್(RR) ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಬಾಡಿಗೆದಾರರಿಗೆ ಗೃಹಜ್ಯೋತಿ ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ : ಉಚಿತ ಬಸ್ ಪ್ರಯಾಣ : ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್

ಇಂಧನ ಸಚಿವ ಕೆ.ಜೆ ಜಾರ್ಜ್​ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ ಜಾರ್ಜ್​ ಸ್ಪಷ್ಟನೆ ನೀಡಿದ್ದಾರೆ. ಒಂದು ಆರ್.ಆರ್ ಸಂಖ್ಯೆಗೆ ಮಾತ್ರ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸರ್ಕಾರದ ನಿಲುವನ್ನು ಪುನರುಚ್ಚರಿಸಿದ್ದಾರೆ.

ಒಂದು RR ಸಂಖ್ಯೆಗೆ ಮಾತ್ರ ‘ಗೃಹಜ್ಯೋತಿ

ಬಾಡಿಗೆದಾರರು ಹಾಗೂ ಮಾಲೀಕರು ಎಂದು ನಾವು ತಾರತಮ್ಯ(ವ್ಯತ್ಯಾಸ) ಮಾಡುತ್ತಿಲ್ಲ. ಸ್ಥಾವರ ಎಂಬುದರ ಅರ್ಥ ಒಂದು ಆರ್.ಆರ್ ನಂಬರ್. ಯಾರು ಎಷ್ಟೇ ಆರ್.ಆರ್ ನಂಬರ್ ಹೊಂದಿರಬಹುದು. ಆದರೆ, ಒಂದು ಆರ್.ಆರ್ ನಂಬರ್ ಗೆ ಮಾತ್ರ ‘ಗೃಹಜ್ಯೋತಿ’ ಯೋಜನೆಯಡಿ ಬರುತ್ತದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES