ಶಿವಮೊಗ್ಗ : ಮಧು ಬಂಗಾರಪ್ಪ ಗೆದ್ದ ಬಳಿಕ ನಾನು ಹಾಡು ಹೇಳ್ತಿನಿ ಅಂತಾ ಶಿವರಾಜ್ ಕುಮಾರ್ ಹೇಳಿದ್ರು. ಅದರಂತೆ ಸೊರಬದಲ್ಲಿ ಮ್ಯೂಸಿಕಲ್ ನೈಟ್ ನಡೆಸಿಕೊಡಲಿದ್ದಾರೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಮಾತನಾಡಿರುವ ಗೀತಾ ಶಿವರಾಜ್ ಕುಮಾರ್, ಇಂದು ಬೆಳಗ್ಗೆ ಈ ಬಗ್ಗೆ ನನ್ನ ಬಳಿ ಮಾತನಾಡಿದ್ದಾರೆ. ಸೊರಬದ ಜನರಿಗೆ ತಿಳಿಸಲು ಶಿವರಾಜ್ ಕುಮಾರ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಸಹೋದರ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾರೆ. ಅವನ ಮೇಲೆ ಜವಬ್ದಾರಿ ಹೆಚ್ಚಾಗಿದೆ. ನಾನು ಅವರ ಜೊತೆ ನಿಂತು ಕೆಲಸ ಮಾಡುತ್ತೇನೆ. ನನ್ನ ಸಹೋದರ ಮಧು ಬಂಗಾರಪ್ಪ ಸಚಿವನಾಗಿ ಒಳ್ಳೆಯ ಕೆಲಸ ಮಾಡ್ತಾನೆ ಎಂದು ಸಹೋದರನನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ : ಶಿಕ್ಷಕರ ವರ್ಗಾವಣೆಗೆ 87 ಸಾವಿರ ಜನ ಅರ್ಜಿ ಹಾಕಿದ್ರು, ಎಲ್ಲಾ ಪ್ರಕ್ರಿಯೆ ಮುಗಿದಿದೆ : ಸಚಿವ ಮಧು ಬಂಗಾರಪ್ಪ
ಮಧು ಮುಖ್ಯಮಂತ್ರಿ ಆಗಬೇಕು
ಮಧು ಬಂಗಾರಪ್ಪ ಸಹೋದರಿ ಸುಜಾತಾ ಮಾತನಾಡಿ, ಮಧು ಬಂಗಾರಪ್ಪ ಶಾಸಕರಾಗಿ ಸಚಿವರಾಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಬೇಕು. ಆದು ಒಂದೆರಡು ದಿನದಲ್ಲಿ ಆಗೋದಲ್ಲ, ಸಮಯ ಬೇಕು. ಅವರೀಗ ಸಚಿವರಾಗಿ ಜನರ ಕೆಲಸ ಮಾಡಬೇಕು. ಕ್ಷೇತ್ರದ ಜನರು ಅವರಿಂದ ಕೆಲಸ ಮಾಡಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ರಾಜ್ಯದ ಮಂತ್ರಿಯಾಗುವುದು ಸುಲಭದ ಮಾತಲ್ಲ. ಮಂತ್ರಿಯಾದ ಮೇಲೆ ಎಲ್ಲರೂ ಕೆಲ ಮಾಡಬೇಕು. ಮಂತ್ರಿಯಾದ ಮಧು ಬಂಗಾರಪ್ಪರಿಂದ ಜನರು ಚೆನ್ನಾಗಿ ಕೆಲಸ ಮಾಡಿಸಿಕೊಳ್ಳಲಿ. ಭವಿಷ್ಯದಲ್ಲಿ ಮಧು ಮುಖ್ಯಮಂತ್ರಿ ಆಗಲಿ ಎಂದು ಸುಜಾತಾ ಅಭಿಪ್ರಾಯಪಟ್ಟಿದ್ದಾರೆ.


