ಉಡುಪಿ : ಐದು ಗ್ಯಾರಂಟಿ ಜಾರಿಯಿಂದ ದೇಶ ಎಷ್ಟು ಬರ್ಬಾದ್ ಆಗುತ್ತದೆ ಅಂತಾ ಲೆಕ್ಕಾಚಾರ ಹಾಕಬೇಕಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ವಿಚಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಂಧ್ರ ಸರ್ಕಾರ ಹಲವು ಉಚಿತ ಕೊಟ್ಟಿತ್ತು. ಈಗ ಸಂಬಳ ಕೊಡಲು ಅವರಲ್ಲಿ ದುಡ್ಡಿಲ್ಲ. ಆಂಧ್ರಪ್ರದೇಶ ಈಗ ಮುಳುಗುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಪ್ರಭುದ್ಧರು ಹೋಗಿ ಅಲ್ಲಿ ಅಧ್ಯಯನ ಮಾಡಬೇಕು. ಹಣಕಾಸನ್ನು ಎಲ್ಲಿಂದ ಒದಗಿಸುತ್ತಾರೆ ವರದಿ ಕೊಡಬೇಕು. ಕರ್ನಾಟಕ ಆ ಪರಿಸ್ಥಿತಿಗೆ ಹೋಗಬಾರದು. ನಾವೆಲ್ಲ ಈ ಬಗ್ಗೆ ಚಿಂತಿಸಬೇಕಿದೆ. ಈಗಷ್ಟೇ ಆರಂಭವಾಗಿದೆ ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ಕೊಡಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇದನ್ನೂ ಓದಿ : ಮುಸ್ಲಿಮರ ಮನೆಯಲ್ಲಿ 2 ಹೆಂಡ್ತಿ, 3 ಹೆಂಡ್ತಿ ಇದ್ದಾರೆ, ಅವರಲ್ಲಿ ಯಜಮಾನಿ ಯಾರು? : ಪ್ರತಾಪ್ ಸಿಂಹ ಟಕ್ಕರ್
ರಾಹುಲ್ ಗಾಂಧಿಗೆ ಟಾಂಗ್
ಲೋಕಸಭಾ ಚುನಾವಣೆ ಮೇಲೆ ಕಾಂಗ್ರೆಸ್ ಗ್ಯಾರಂಟಿ ಯಾವುದೇ ಎಫೆಕ್ಟ್ ಆಗಲ್ಲ. ನಮ್ಮ ಜನ ವಿದ್ಯಾವಂತ, ಬುದ್ಧಿವಂತರು, ದೇಶಪ್ರೇಮಿಗಳು. ಭಾರತಕ್ಕೆ ವಿಶ್ವ ಮಾನ್ಯತೆ ಸಿಗಲು ಪ್ರಧಾನಿ ನರೇಂದ್ರ ಮೋದಿ ಕಾರಣ. ದೇಶದಲ್ಲಿ ಅಚ್ಚರಿಯ ಫಲಿತಾಂಶ ಎಂದಿರುವ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟ ಶೋಭಾ ಕರಂದ್ಲಾಜೆ, ರಾಹುಲ್ ಗಾಂಧಿ ಅಮೇರಿಕಾದಲ್ಲೇ ಹೇಳಿದ್ದು ಒಳ್ಳೆದಾಯ್ತು ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಅಹಂಕಾರ ತೋರಿಸಿದೆ
ಶೋಭಾ ಕರಂದ್ಲಾಜೆಗೆ ಫ್ರೀ ಸರ್ಕಾರಿ ಬಸ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರುವ ಬಗ್ಗೆ ಮಾತನಾಡಿದ ಅವರು, ಟ್ವೀಟ್ ನಲ್ಲಿ ಕಾಂಗ್ರೆಸ್ ಅಹಂಕಾರ ತೋರಿಸಿದೆ. ಜನ ಅಹಂಕಾರಕ್ಕೆ ಮದ್ದು ಕೊಡುತ್ತಾರೆ ಎಂದು ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.