Friday, March 29, 2024

ನಿಮಗೆಲ್ಲ ನಾನು ಸಿಎಂ ಆಗಬೇಕು ಅಂತಾ ಆಸೆ ಇತ್ತು.. ಆದ್ರೆ, ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗಿದ್ದೇನೆ : ಡಿ.ಕೆ ಶಿವಕುಮಾರ್

ರಾಮನಗರ : ನಿಮಗೆಲ್ಲ ನಾನು ಸಿಎಂ ಆಗಬೇಕು ಎಂಬ ಆಸೆ ಇತ್ತು. ಆದರೆ, ಹೈಕಮಾಂಡ್ ತೀರ್ಮಾನಕ್ಕೆ ನಾನು ತಲೆಬಾಗಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರಾಮನಗರ ಜಿಲ್ಲೆ ಕನಕಪುರದ ಹುಟ್ಟೂರು ದೊಡ್ಡಾಲನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತೆ. ಮುಂದೆ ಅವಕಾಶ ಸಿಗುತ್ತೆ. ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗಿದ್ದೇನೆ. ನನ್ನ ಅಧ್ಯಕ್ಷತೆಯಲ್ಲಿ ಪಕ್ಷಕ್ಕೆ ಬಹುಮತ ಬಂದಿರೋದು ಖುಷಿ ಕೊಟ್ಟಿದೆ. ನಾನು ಜವಾಬ್ದಾರಿ ವಹಿಸಿಕೊಂಡ ಮೇಲೆ ಸರಿಯಾಗಿ ನಿದ್ದೆ ಮಾಡಿಲ್ಲ. ಊಟ, ತಿಂಡಿ ಬಿಟ್ಟು ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸರ್ಕಾರದ ಅಕ್ಕಿಗೆ ‘ಕಾಂಗ್ರೆಸ್ ತನ್ನ ಲೆಬಲ್ ಹಚ್ಚುತ್ತಿದೆ’ ಎಂದ ಬಿಜೆಪಿ

ದೇವೇಗೌಡರ ವಿರುದ್ಧ ಸೋತೆ, ಬಳಿಕ ಗೆದ್ದೆ

ದೊಡ್ಡ ಸಂಖ್ಯೆಯಲ್ಲಿ ನೀವು ಬಂದು ಆಶೀರ್ವಾದ ಮಾಡಿದ್ದೀರಿ. ನಿಮಗೆ ಅಭಿನಂದನೆ ಸಲ್ಲಿಸಬೇಕು ಅಂತ ಬಂದಿದ್ದೇನೆ. ಕಳೆದ 10ನೇ ತಾರೀಖು ನಡೆದ ಚುನಾವಣೆಯಲ್ಲಿ ನನನ್ನ ದಾಖಲೆಯ ಅಂತರದಲ್ಲಿ ಗೆಲ್ಲಿಸಿದ್ದೀರಿ. ಅಧಿಕಾರ ನಶ್ವರ, ನಾವು ಮಾಡುವ ಕೆಲಸ ಅಜರಾಮರ. ನೀವು ನನ್ನನ್ನು ರಾಜಕೀಯವಾಗಿ ಬೆಳಸಿ, ಸಾಕಿದ್ದೀರಿ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧ ಸೋತೆ, ಬಳಿಕ ಎಲ್ಲಾ ಚುನಾವಣೆಯಲ್ಲೂ ಗೆದ್ದಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿಯವ್ರು ಕೊಡಬಾರದ ಕಿರುಕುಳ ಕೊಟ್ರು

ನನ್ನನ್ನ ಕಟ್ಟುಹಾಕಲು ಬಿಜೆಪಿಯವ್ರು ಕೊಡಬಾರದ ಕಿರುಕುಳ ಕೊಟ್ರು. ಎಲ್ಲವನ್ನೂ ಎದುರಿಸಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನಮ್ಮ ಕೆಲವು ಆಸ್ತಿಗಳನ್ನು ವಿದ್ಯಾಭ್ಯಾಸಕ್ಕೆ ದಾನ ಮಾಡಿದ್ದೇನೆ. ಈ ಭಾಗದ ಯಾರೂ ನಿಮ್ಮ ಆಸ್ತಿ ಮಾರಿಕೊಳ್ಳ ಬೇಡಿ. ಮುಂದೆ ಈ‌ ಭಾಗದ ಜಮೀನಿಗೆ ಒಳ್ಳೆಯ ಬೆಲೆ ಬರುತ್ತೆ. ಈ ಭಾಗದಲ್ಲಿ ಆಸ್ತಿ ಮೌಲ್ಯಗಳನ್ನು ಜಾಸ್ತಿ ಮಾಡಿದ್ದೇನೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಅನ್ನುವುದು ನಮ್ಮ ಉದ್ದೇಶ. ನಿಮ್ಮ ಆರ್ಥಿಕತೆ ಬಲಪಡಿಸಲು ನಾವು ಬದ್ದ ಎಂದು ಡಿಕೆಶಿ ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES