Wednesday, January 22, 2025

ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಜಾರಿಗೆ ಬಂದಿದೆ : ಚಕ್ರವರ್ತಿ ಸೂಲಿಬೆಲೆ

ಮೈಸೂರು : ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಜಾರಿಗೆ ಬಂದಿದೆ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ವೀರ್ ಸಾವರ್ಕರ್ ಅವರ 140ನೇ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದಿನ ಕಾರ್ಯಕ್ರಮ ಇಲ್ಲ, ರದ್ದಾಗಲಿದೆ ಎಂದು ನಾವು ತಿಳಿದಿದ್ದೆವು. ಇದಕ್ಕೆ ಹಲವರು ಕಾರಣಗಳು ಇವೆ. ಸಾಹಿತಿ ಎಸ್.ಎಲ್ ಬೈರಪ್ಪ, ನಾನು ಇದ್ದೇವೆ ಎಂದು ರದ್ದು ಪಡಿಸುವ ಕೆಲಸವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ಓದಿ : ದೇಶ ಎಷ್ಟು ಬರ್ಬಾದ್ ಆಗುತ್ತೆ ಅಂತಾ ಲೆಕ್ಕಾಚಾರ ಹಾಕಬೇಕಾಗುತ್ತದೆ : ಶೋಭಾ ಕರಂದ್ಲಾಜೆ

ಸಾವರ್ಕರ್ ಕಾರ್ಯಕ್ರಮ ಬಗ್ಗೆ ಸರ್ಕಾರಕ್ಕೆ ಭಯ ಇರಬಹುದು. ಅಧಿಕಾರಕ್ಕೆ ಬಂದು ಒಂದು ವಾರವಾಗಿಲ್ಲ ಅಷ್ಟರಲ್ಲಿ ಸಾವರ್ಕರ್ ಜಯಂತಿ ರದ್ದು ಮಾಡಲು ಹೊರಟಿದ್ದಾರೆ. ಇದು ಹಿಟ್ಲರ್ ಸರ್ಕಾರ. ಸಾವರ್ಕರ್ ಇವತ್ತಿಗೂ ಪ್ರಸ್ತುತ ಹಾಗೂ ಜೀವಂತ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ದಿನ ಬೆಳಗ್ಗೆ ಏನೇನೋ ಮಾತನಾಡುತ್ತಾರೆ. ಆದರೆ, ಈವರೆಗೆ ಒಬ್ಬರನ್ನು ಜೈಲಿಗೆ ಕಳುಹಿಸಿಲ್ಲ. ಯಾವುದೋ ಒಬ್ಬ ಶಿಕ್ಷಕ ಒಂದು ಪೋಸ್ಟ್ ಮಾಡಿದ ತಕ್ಷಣವೇ ಆತನನ್ನು ವಜಾಗೊಳಿಸುತ್ತಾರೆ. ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಕ್ರಮವಹಿಸುತ್ತಾರೆ. ಆದ್ದರಿಂದಲೇ ಇದು ಹಿಟ್ಲರ್ ಸರ್ಕಾರವಾಗಿದೆ ಎಂದು ಛೇಡಿಸಿದ್ದಾರೆ.

ಮೈಸೂರು ನಗರದ ಘಟಿಕೋತ್ಸವ ಭವನದಲ್ಲಿ ನಡೆದ ಸಾವರ್ಕರ್ 140ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ, ಲೇಖಕ ವಿಕ್ರಂ ಸಂಪತ್ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES