Monday, October 7, 2024

ನಾಳೆ ಗಾಯಕ್ವಾಡ್ ಮದುವೆ : ಗೆಳತಿ ‘ಉತ್ಕರ್ಷ ಜೊತೆ ಋತು’ ಸೆಕೆಂಡ್ ಇನಿಂಗ್ಸ್

ಬೆಂಗಳೂರು : ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್‌ ಅವರ ಮದುವೆ ನಾಳೆ (ಜೂನ್ 3) ನಡೆಯಲಿದೆ.

ಋತುರಾಜ್ ಗಾಯಕ್ವಾಡ್‌ ಪ್ರತಿನಿಧಿಸುವ ಚೆನ್ನೈ ತಂಡ ಸೋಮವಾರವಷ್ಟೇ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು. ಪ್ರಶಸ್ತಿ ಗೆದ್ದ ಖುಷಿಯಲ್ಲಿಯೇ ಇದೀಗ ಗಾಯಕ್ವಾಡ್ ಜೀವನದ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆ.

ಗಾಯಕ್ವಾಡ್ ಅವರು ತಮ್ಮ ದೀರ್ಘಾವಧಿ ಗೆಳತಿ ಉತ್ಕರ್ಷ ಪವಾರ್ ಅವರನ್ನು ವಿವಾಹವಾಗುತ್ತಿದ್ದಾರೆ. ಉತ್ಕರ್ಷ ಅವರು ಮಹಾರಾಷ್ಟ್ರದ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಇವರು 11 ವಯಸ್ಸಿನಿಂದ ಕ್ರಿಕೆಟ್‌ ಆಡುತ್ತಿದ್ದಾರೆ. ಇವರ ಮದುವೆಗೆ ಕೆಲವೇ ಕೆಲವು ಆತ್ಮೀಯರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಗೆ ಋತುರಾಜ್ ಗಾಯಕ್ವಾಡ್ ಅವರು ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಆದರೆ, ಮದುವೆ ಹಿನ್ನೆಲೆಯಲ್ಲಿ ಯುವ ಓಪನರ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಗಾಯಕ್ವಾಡ್‌ ಅವರ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ : ದಾಖಲೆಗಳ ‘ಚಾಂಪಿಯನ್ ಧೋನಿ’ : ಸಚಿನ್ ದಾಖಲೆಯೂ ಉಡೀಸ್..!

ಫೈನಲ್‌ ವೇಳೆ ಕಾಣಿಸಿಕೊಂಡಿದ್ದ ಉತ್ಕರ್ಷ

ಕಳೆದ ಸೋಮವಾರ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್‌ ಟೈಟನ್ಸ್ ಫೈನಲ್ ಪಂದ್ಯದ ವೇಳೆ ಋತುರಾಜ್‌ ಗಾಯಕ್ವಾಡ್‌ ಅವರ ಜೊತೆ ಉತ್ಕರ್ಷ ಪವಾರ್‌ ಕಾಣಿಸಿಕೊಂಡಿದ್ದರು. ಚೆನ್ನೈ ನಾಯಕ ಎಂ.ಎಸ್ ಧೋನಿ ಹಾಗೂ ಸಹ ಆಟಗಾರರ ಜೊತೆ ಟ್ರೋಫಿಯೊಂದಿಗೆ ನವ ಜೋಡಿ ಕಾಣಿಸಿಕೊಂಡಿತ್ತು. ಈ ಫೋಟೋಗಳನ್ನು ಚೆನ್ನೈ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು.

ಯಾರು ಉತ್ಕರ್ಷ ಪವಾರ್?

ಋತುರಾಜ್‌ ಗಾಯಕ್ವಾಡ್‌ ವರಿಸುತ್ತಿರುವ ಉತ್ಕರ್ಷಾ ಪವಾರ್ ಯಾರು? ಎಂದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಉತ್ಕರ್ಷ ಪವಾರ್ 1998ರ ಅಕ್ಟೋಬರ್‌ 13 ರಂದು ಜನಿಸಿದ್ದರು. ಇವರು 11 ವಯಸ್ಸಿನಿಂದ ಕ್ರಿಕೆಟ್‌ ಆಡುತ್ತಿದ್ದಾರೆ. ಪ್ರಸ್ತುತ ಮಹಾರಾಷ್ಟ್ರ ತಂಡವನ್ನು (ದೇಶಿ ಕ್ರಿಕೆಟ್‌) ಪ್ರತಿನಿಧಿಸಿದ್ದಾರೆ. ಫಾಸ್ಟ್ ಬೌಲರ್ ಆಗಿರುವ ಇವರು ಬ್ಯಾಟಿಂಗ್‌ ನಲ್ಲೂ ಮಿಂಚುತ್ತಿದ್ದಾರೆ. 2021 ನವೆಂಬರ್‌ ನಲ್ಲಿ ಪಂಜಾಬ್‌ ವಿರುದ್ಧ ಮಹಿಳಾ ಏಕದಿನ ಟ್ರೋಫಿ ಪಂದ್ಯದಲ್ಲಿ ಕೊನೆಯ ಬಾರಿ ಮಹಾರಾಷ್ಟ್ರ ತಂಡದಲ್ಲಿ ಕಾಣಿಸಿಕೊಂಡಿದ್ದರು.

RELATED ARTICLES

Related Articles

TRENDING ARTICLES