Sunday, December 22, 2024

ಸಚಿವ ಜಮೀರ್, ಮನೆಯಲ್ಲಿ 7 ಜನ ಇದ್ರೆ, 70 ಕೆ.ಜಿ ಅಕ್ಕಿ ಸಿಗುತ್ತೆ ಅಂದಿದ್ರು : ಸಿ.ಟಿ ರವಿ

ಬೆಂಗಳೂರು : ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಮನೆಯಲ್ಲಿ 7 ಜನ ಇದ್ರೆ, 70 ಕಿಲೋ ಅಕ್ಕಿ ಸಿಗುತ್ತದೆ ಅಂತಾ ಹೇಳಿದ್ರು. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ ರವಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಜಾರಿ ಕುರಿತು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿಮಾತನಾಡಿದ ಅವರು, ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಕೊಡುತ್ತೇವೆ ಅಂತಾ ಹೇಳಿತ್ತು. ಆದರೆ, ಈಗ ಒಂದು ಕುಟುಂಬಕ್ಕೆ 10 ಕಿಲೋ ಅಕ್ಕಿ ಅಂತಾ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಹಲವು ಯೋಜನೆಗಳು ಜಾರಿಯಾಗಿವೆ. ರೈತರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯಿದೆ. ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 6 ಸಾವಿರ ರೂ. ಸೇರಿಸಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯದ ಸಿಎಂ 13 ಬಜೆಟ್ ಮಂಡಿಸಿರುವ ದಾಖಲೆ ಹೊಂದಿರುವ ವ್ಯಕ್ತಿ : ಹೆಚ್​ಡಿಕೆ

ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಿ

ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ನೀವು ಶ್ವೇತ ಪತ್ರ ಹೊರಡಿಸುವುದರ ಬಗ್ಗೆ  ಮುಂದಿನ ಯೋಜನೆಗಳ ಬಗ್ಗೆ ಸ್ಪಷ್ಟ ನಿಲುವಿಗೆ ಬರಲು ಸಾಧ್ಯ. ಚಾಲ್ತಿಯಲ್ಲಿರುವ ಯೋಜನೆಗಳಿಗೆ ತಗುಲುವ ವೆಚ್ಚದ ಬಗ್ಗೆ ತಿಳಿಸಿ. ಹಾಲಿ ಯೋಜನೆ ಮುಂದುವರಿಸುತ್ತೀರಾ? ಇಲ್ವಾ? ತಿಳಿಸಿ ಎಂದು ಒತ್ತಾಯಿಸಿದ್ದಾರೆ.

ಗ್ಯಾರಂಟಿ ಮುಂದುವರಿಸಲು ಸಾಧ್ಯವೇ?

ರಾಜ್ಯದ ಸಾಲ ಎಷ್ಟು? ಮೂಲ ಸೌಲಭ್ಯದ ಮೇಲೆ ಹೂಡಿಕೆ ಎಷ್ಟು? ರಾಜ್ಯದ ಸಂಪನ್ಮೂಲ ಎಷ್ಟು? ಎಂಬ ಬಗ್ಗೆ ಮಾಹಿತಿ ನೀಡಲಿ. ಆದಾಯ ಇಲ್ಲದೇ ಈ ಯೋಜನೆಗಳನ್ನು ಮುಂದುವರಿಸಲು ಸಾಧ್ಯವಿಲ್ಲ. ಮೂಲ ಸೌಕರ್ಯಗಳಿಗೆ ಹೂಡಿಕೆ ಎಷ್ಟು? ಸಾಲದ ಮೇಲಿನ ಬಡ್ಡಿ ಎಷ್ಟು? ರಾಜ್ಯ ಸರ್ಕಾರಿ ನೌಕರರ ವೇತನ, ನಿವೃತ್ತಿ ವೇತನಕ್ಕೆ ಎಷ್ಟು ಹಣ? ಎಂಬ ಬಗ್ಗೆ ರಾಜ್ಯ ಸರ್ಕಾರ ತಿಳಿಸಲಿ ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES