ಮೈಸೂರು : ನಮ್ಮ ಪಕ್ಷದಲ್ಲೇ, ಬಿಜೆಪಿಯವರೇ ತಪ್ಪು ಮಾಡಿದ್ರೆ ಅವರನ್ನು ಹಿಡಿದು ಜೈಲಿಗೆ ಹಾಕಿ. ಈ ಮೂಲಕ ನಮ್ಮ ಪಕ್ಷವನ್ನು ಸ್ವಚ್ಚ ಮಾಡಲು ಅನುವು ಮಾಡಿಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಿಎಸ್ಐ ಹಗರಣ, ಬಿಟ್ ಕಾಯಿನ್ ವಿಚಾರ, 40% ಪರ್ಸೆಂಟ್ ವಿಚಾರ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲರದ ಬಗ್ಗೆ ತನಿಖೆ ಮಾಡಿ. ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನವರು ಹೇಳಿದ್ದೆಲ್ಲಾ ಸತ್ಯ. ನೀವು ಸತ್ಯ ಸಂಧರು ಎಂಬುದನ್ನು ಸಾಬೀತು (ಪ್ರೂವ್) ಮಾಡಿ. ನಮ್ಮ ಪಕ್ಷದಲ್ಲೇ, ಬಿಜೆಪಿಯವರೇ ತಪ್ಪು ಮಾಡಿದರೆ ಅವರನ್ನ ಹಿಡಿದು ಜೈಲಿಗೆ ಹಾಕಿ. ಆ ಮೂಲಕ ನಮ್ಮ ಪಕ್ಷವನ್ನ ಸ್ವಚ್ಚ ಮಾಡಲು ಅನುವು ಮಾಡಿಕೊಡಿ. ನೀವು ಬಿಜೆಪಿ ಸರ್ಕಾರದ ಮೇಲೆ ಏನೇನು ಆರೋಪ ಮಾಡಿದ್ದೀರೊ ಆವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಹೆದ್ದಾರಿ ಉಳಿಸಿಕೊಳ್ಳೋದು ನಿಮ್ಮ ಜವಾಬ್ದಾರಿ
ದಶಪಥ ಹೆದ್ದಾರಿಗೆ ಕಬ್ಬಿಣ ಕಳ್ಳರ ಕಾಟ ಎದುರಾಗಿದೆ. ವಿದ್ಯುತ್ ಕಂಬ, ಗ್ರಿಲ್, ತಡೆಗೋಡೆ ರಾಡ್ ಗಳನ್ನು ಖದೀಮರು ಒತ್ತೋಯುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮದ ಮುಂದೆ ಅವಲತ್ತುಕೊಂಡಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿ ದಕ್ಷಿಣ ಭಾರತದ ಮೊದಲ ನಿರ್ಬಂಧಿತ ಹೆದ್ದಾರಿ. ನಿಮ್ಮದೇ ಹಣದಲ್ಲಿ ಹೆದ್ದಾರಿ ನಿರ್ಮಾಣವಾಗಿದೆ. ಹೆದ್ದಾರಿ ಉಳಿಸಿಕೊಳ್ಳೋದು ನಿಮ್ಮ ಜವಾಬ್ದಾರಿ ಎಂದಿದ್ದಾರೆ.
ಇದನ್ನೂ ಓದಿ : ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಹೆದ್ದಾರಿ ಕಬ್ಬಿಣ ಕದಿಯಬೇಡಿ
ನಿಮ್ಮ ಮನೆಯಲ್ಲಿರುವ ಕಬ್ಬಿಣ ಬೇಕಿದ್ರೆ ಗುಜರಿಗೆ ಹಾಕಿಕೊಳ್ಳಿ. ಅದನ್ನು ಬಿಟ್ಟು ಹೆದ್ದಾರಿ ಕಬ್ಬಿಣ ಕದಿಯಬೇಡಿ. ಪ್ರವೇಶ ಮತ್ತು ನಿರ್ಗಮನ ನಿರ್ಬಂಧಿಸುವ ಸಲುವಾಗಿ ಹೆದ್ದಾರಿ ಎರಡು ಕಡೆ ಗ್ರಿಲ್ ಗಳ ಮೂಲಕ ತಡೆಗೋಡೆ ನಿರ್ಮಿಸಲಾಗಿದೆ. ಆ ಕಬ್ಬಿಣದ ಗ್ರಿಲ್, ರಾಡು, ವಿದ್ಯುತ್ ಕಂಬದ ಕಬ್ಬಿಣಗಳನ್ನು ಕದ್ದು ಗುಜರಿಗೆ ಹಾಕುತ್ತಿದ್ದಾರೆ. ಮೈಸೂರು, ಮಂಡ್ಯ, ರಾಮನಗರ ಜನತೆ ಅಂತವರ ಬಗ್ಗೆ ಮಾಹಿತಿ ನೀಡಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ನೀರು ತುಂಬಿ ಕೊಂಡಿದ್ರೆ ತೆರವು
ಮಳೆ ಬಂದಾಗ ಹೆದ್ದಾರಿಯಲ್ಲಿ ನೀರು ನಿಲ್ಲುವ ವಿಚಾರದ ಬಗ್ಗೆ ಮಾತನಾಡಿ, ಸಮಸ್ಯೆ ಬಂದಾಗ ಮಾತ್ರ ಹುಡುಕಿ ಪರಿಹಾರ ಮಾಡಬಹುದು. ಎಲ್ಲಾ ಸಮಸ್ಯೆಗಳನ್ನ ಊಹೆ ಮಾಡಲು ಸಾಧ್ಯವಿಲ್ಲ. ಮಳೆ ನೀರು ಒಂದು ಬಾಗದಿಂದ ಇನ್ನೊಂದು ಭಾಗಕ್ಕೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ನೀರು ಹರಿದು ಹೋಗುವ ಹೋಲ್ ಗಳಲ್ಲಿ ನೀರು ತುಂಬಿ ಕೊಂಡಿದ್ದರೆ ಅದನ್ನು ತೆರವು ಮಾಡಬೇಕು. ಎಲ್ಲೆಲ್ಲಿ ಸಮಸ್ಯೆ ಆಗಿದೆ ಅದನ್ನು ಪತ್ತೆ ಹಚ್ಚಿ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.