Wednesday, January 22, 2025

ಅನೇಕ ಔಷಧೀಯ ಗುಣ ಹೊಂದಿರೋ ಸಂಜೀವಿನಿ “ತುಳಸಿ”

ನಮ್ಮ ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ತುಳಸಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ತುಳಸಿ ಆರೋಗ್ಯಕ್ಕೆ ರಾಮಬಾಣ  ದೇವರ ಸ್ವರೂಪಿಯಾದ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿವೆ.

ಇಂತಹ ತುಳುಸಿಯನ್ನುಆಯುರ್ವೇದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಹಾಗಾದ್ರೆ ತುಳಸಿ ಸೇವನೆಯಿಂದ ನಮ್ಮಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುವುದನ್ನೂ ತಿಳಿಯೋಣ ಬನ್ನಿ.

ಇದನ್ನೂ ಓದಿ: ಉತ್ತಮ ಜೀವನಕ್ಕೆ ನಿಮ್ಮ ಆಹಾರ ಪದ್ಧತಿ, ಜೀವನ ಶೈಲಿ ಹೇಗಿರಬೇಕು ಗೊತ್ತಾ?

ಹೌದು, ಇತ್ತೀಚಿಗೆ ತುಳಸಿ ಕಟ್ಟೆಗಳು ಹೊಂದಿಲ್ಲದ ಮನೆಗಳೇ ಇಲ್ಲ. ಎಲ್ಲರಿಗೂ ಸಿಗುವ ತುಳುಸಿ ತನ್ನಲ್ಲಿ ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ರೋಗ ನಿರೋಧಕ ಶಕ್ತಿ ಸೇರಿದಂತೆ ಅನೇಕ ಅಂಶಗಳು ಇದರಲ್ಲಿ ಅಡಗಿದೆ. ಇನ್ನೂ ಬಹುಉಪಯೋಗಿ ಔಷಧಗಳ ಗುಚ್ಚವಾಗಿರುವ ತುಳಸಿಯ ಪ್ರಯೋಜನಗಳ ಬಗ್ಗೆ ಕೆಲವೊಂದಿಷ್ಟು ಮಾಹಿತಿ ಇಲ್ಲಿದೆ.

  1. ಪ್ರತಿದಿನ ತುಳಸಿ ಸೇವನೆಯಿಂದ ವ್ಯಕ್ತಿಯ ದೇಹದ ಶುದ್ಧತೆಯನ್ನು ಪಡೆಯುತ್ತದೆ. ಇದು ದೈಹಿಕ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಸಹಕಾರಿ.
  2. ಪ್ರತಿದಿನ ನಾವು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವಿಸಿದ್ರೆ ಜೀರ್ಣಕ್ರಿಯೆ ಕೂಡ ಸುಗಮಗೊಳ್ಳುತ್ತದೆ.
  3. ತುಳಸಿಯಲ್ಲಿ ಸತು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.ಇದು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಈ ಸಸ್ಯದ ಕೆಲವು ಎಲೆಗಳನ್ನು ತೆಗೆದುಕೊಂಡು ಅದನ್ನು ಕುದಿಸುವುದರಿಂದ ತ್ವರಿತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
  4. ಬಾಗಿಲು ಮತ್ತು ಕಿಟಕಿಗಳ ಬಳಿ ತುಳಸಿಯನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಗಾಳಿಯನ್ನು ಶುದ್ಧೀಕರಿಸಬಹುದು ಮತ್ತು ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್ನಂತಹ ಹಾನಿಕಾರಕ ವಿಷಗಳು ಮತ್ತು ಅನಿಲಗಳನ್ನು ತೆಗೆದು ಆಗಲು ಸಹಕಾರಿಯಾಗುತ್ತದೆ.
  5. ತುಳಸಿ ಸಸ್ಯವು ಅತ್ಯುತ್ತಮ ಕೀಟ ನಿವಾರಕವಾಗಿದೆ. ಇದು ಸೊಳ್ಳೆ ಲಾರ್ವಾಗಳನ್ನು ಪೂರ್ಣವಾಗಿ ಬೆಳೆದ ಸೊಳ್ಳೆಗಳಾಗುವ ಮೊದಲು ಕೊಲ್ಲುತ್ತದೆ. ಹೀಗಾಗಿ, ಇದು ಕೀಟಗಳನ್ನು ದೂರವಿರಿಸಲು ಸಹಾಯಕವಾಗುತ್ತದೆ.
  6. ತುಳಸಿ ಎಲೆಗಳಲ್ಲಿರುವ ಉರ್ಸೋಲಿಕ್ ಆಮ್ಲವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸುಕ್ಕುಗಳು ಮತ್ತು ಗುರುತುಗಳನ್ನು ತೆಗೆದುಹಾಕುತ್ತದೆ. ತುಳಸಿಯ ಶಿಲೀಂಧ್ರ ವಿರೋಧಿ ಗುಣವು ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.
  7. ತುಳಸಿ ಹಲ್ಲು ಹಾಗೂ ಒಸಡುಗಳನ್ನು ಬಲಪಡಿಸುತ್ತದೆ. ಇದು ಬಾಯಿಯಲ್ಲಿ ಹುಣ್ಣುಗಳನ್ನು ಶಮನಗೊಳಿಸಲು ಸಹ ಸಹಾಯ ಮಾಡುತ್ತದೆ.
  8. ಬಾಯಿ ದುರ್ವಾಸನೆಯಿಂದ ಕೂಡಿದ್ರೆ ತುಳಸಿ ಎಲೆ ಅತ್ಯುತ್ತಮ ಮನೆಮದ್ದು. ಏಕೆಂದರೆ ಇದರ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಈ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ಕೆಟ್ಟ ವಾಸನೆಯನ್ನು ದೂರ ಮಾಡಬಹುದು.

ಹೀಗೆ ತುಳಸಿಯ ಒಂದು ಎಲೆ ಎಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿದ್ದ,ಅನೇಕ ಕಾಯಿಲೆಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಸಾಕಷ್ಟು ಆರೋಗ್ಯಕರ ಅಂಶವನ್ನು ತುಳಸಿ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಈ ಸಸ್ಯ ಔಷಧೀಯ ಗುಣ ಆಗರವಾಗಿದ್ದು, ನಿಮ್ಮ ದಿನನಿತ್ಯದ ಆಹಾರದಲ್ಲಿ ಮಿತವಾಗಿ ತುಳಸಿ ಬಳಸಿ, ಆರೋಗ್ಯವನ್ನು ಕಾಯ್ದುಕೊಳ್ಳಿ.

  • ಲೀನಶ್ರೀ ಪೂಜಾರಿ

RELATED ARTICLES

Related Articles

TRENDING ARTICLES