ಬೆಂಗಳೂರು : ರಾಜ್ಯದ ಸಿಎಂ 13 ಬಜೆಟ್ ಮಂಡಿಸಿರುವ ದಾಖಲೆ ಹೊಂದಿರುವ ವ್ಯಕ್ತಿ. ಅದೆಲ್ಲವೂ ಲೆಕ್ಕಾಚಾರ ಮಾಡದೆ ತೀರ್ಮಾನ ಮಾಡ್ತಾರಾ ಮುಂದೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ಕಡೆ ಬೊಟ್ಟು ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉಚಿತ ಗ್ಯಾರಂಟಿ ಜಾರಿಯಿಂದ ಆರ್ಥಿಕ ಹೊರೆ, ತೆರಿಗೆ ಹೆಚ್ಚಳ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೊಸ ಸರ್ಕಾರ ಈಗಾಗಲೇ ಅಧಿಕಾರಿಗಳು, ಮಂತ್ರಿಗಳ ಜೊತೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಹಲವಾರು ಸುತ್ತಿನ ಚರ್ಚೆ ಮಾಡಿದೆ. ಜನತೆ ಮುಂದೆ ಕೊಟ್ಟಿರುವ ಗ್ಯಾರಂಟಿ ಕಾರ್ಡ್ ಏನಿದೆ? ಯಾವ ರೀತಿಯ ನಿಬಂಧನೆಗಳು ಇಲ್ಲದೆ ಎಲ್ಲರಿಗೂ ಗ್ಯಾರಂಟಿ ಕಾರ್ಡ್ ಕೊಡ್ತೀವಿ ಅಂತ ಅವರೇ ಹೇಳಿಕೊಂಡಿದ್ದಾರೆ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಆರ್ಥಿಕ ಇಲಾಖೆಯ ಸಲಹೆಗಳ ಮೇಲೆ ಮೇರೆಗೆ ಯಾವ ರೀತಿ ಗ್ಯಾರಂಟಿ ಘೋಷಣೆ ಮಾಡ್ತಾರೆ ನೋಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಗ್ಯಾರಂಟಿ ಜಾರಿಯ ಬಗ್ಗೆ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಸಭೆ
ಗ್ಯಾರಂಟಿ ವಿಚಾರವಾಗಿ ಜೆಡಿಎಸ್ ಹೋರಾಟ ಕುರಿತು ಮಾತನಾಡಿದ ಅವರು, ಯಾವ ರೀತಿ ಘೋಷಣೆ ಮಾಡ್ತಾರೆ ನೋಡೋಣ. ಈಗಲೇ ಯಾಕೆ ಊಹೆ ಮಾಡಿಕೊಳ್ಳಬೇಕು. ಚುನಾವಣಾ ಪೂರ್ವದಲ್ಲಿ ಜನತೆ ಮುಂದೆ ಅವರು ಕೊಟ್ಟ ಭರವಸೆಗಳು. ನಾವು ಕೊಟ್ಟ ಮಾತು ತಪ್ಪಲ್ಲ ಅಂತ ಅವರೇ ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಈಗ ಯಾವ ರೀತಿ ಷರತ್ತುಗಳನ್ನು ಎಂಬ ಅಂಶ ಚರ್ಚೆ ಆಗ್ತಾ ಇದೆ. ಕಾರ್ಯರೂಪಕ್ಕೆ ಬಂದ ಮೇಲೆ ನೋಡೋಣ. ಜನರ ಭಾವನೆ ಯಾವ ರೀತಿ ಇದೆ ನಂಗೆ ಗೊತ್ತಿಲ್ಲ. ಕೆಲವರು ಬೇಕು ಅಂತಾರೆ, ಕೆಲವರು ಬೇಡ ಅಂತಾರೆ. ಜನರಲ್ಲೇ ಭಿನ್ನಾಭಿಪ್ರಾಯ ಇದ್ದಾಗ ನಾನು ಈಗಲೇ ಅದನ್ನು ಪ್ರಾರಂಭಿಕ ಹಂತದಲ್ಲಿ ಚರ್ಚೆ ಮಾಡಲಿ. ಸರ್ಕಾರ ನಡವಳಿಕೆ ಬಗ್ಗೆ ಜನರನ್ನು ನೋಡಿಕೊಂಡು ತೀರ್ಮಾನ ಮಾಡೋಣ ಎಂದು ಕುಮಾರಸ್ವಾಮಿ ಕಾದುನೋಡುವ ತಂತ್ರದ ಮೊರೆ ಹೋಗಿದ್ದಾರೆ.