Friday, November 22, 2024

‘ಗ್ಯಾರಂಟಿಯಲ್ಲಿ ದೋಖಾ’ ಮಾಡ್ತಿರೋದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಉಚಿತ ಗ್ಯಾರಂಟಿಯಲ್ಲಿ ದೋಖಾ ಮಾಡ್ತಾ ಇದ್ದಾರೆ ಅನ್ನೋದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ.

ಗ್ಯಾರಂಟಿ ಯೋಜನೆ ಜಾರಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಗ್ಯಾರಂಟಿಯಲ್ಲಿ ಮೋಸ ಮಾಡ್ತಿದ್ದಾರೆ ಎಂಬುದನ್ನು ಮೊದಲೇ ಹೇಳಿದ್ದೆ ಎಂದು ತಿಳಿಸಿದ್ದಾರೆ.

ಅನ್ನಭಾಗ್ಯದಲ್ಲಿ ಹೆಚ್ಚುವರಿ ಕೊಡುವುದು ಬರೀ 5 ಕಿಲೋ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯಕ್ಕೆ 5 ಕಿಲೋ ಉಚಿತ ಕೊಡುತ್ತಿದೆ. 5 ಕಿಲೋ ಅಕ್ಕಿ ಜೊತೆಗೆ 1 ಕಿಲೋ ರಾಗಿ, ಜೋಳ ಕೊಡಲಾಗುತ್ತದೆ. 10 ಕಿಲೋನಲ್ಲಿ ಅಕ್ಕಿ ಜೊತೆ ರಾಗಿ, ಜೋಳ ಇದೆಯೋ? ಇಲ್ಲವೋ? ಅನ್ನಭಾಗ್ಯ ಯೋಜನೆ ಬಗ್ಗೆಯೂ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯದ ಸಿಎಂ 13 ಬಜೆಟ್ ಮಂಡಿಸಿರುವ ದಾಖಲೆ ಹೊಂದಿರುವ ವ್ಯಕ್ತಿ : ಹೆಚ್​ಡಿಕೆ

ಸಿದ್ದರಾಮಯ್ಯ ಮಾತಿನಲ್ಲಿ ವ್ಯತ್ಯಾಸವಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲಿ ಹೇಳಿರುವ ಮಾತುಗಳು, ಚುನಾವಣೆ ಬಳಿಕ ಹೇಳಿದ ಮಾತಿಗೂ ವ್ಯತ್ಯಾಸವಿದೆ. ಪ್ರತಿ ಮನೆಗೆ ಉಚಿತ 200 ಯೂನಿಟ್​​ ವಿದ್ಯುತ್​ ಎಂದು ಹೇಳಿದ್ದರು. 200 ಯೂನಿಟ್​​ ಒಳಗೆ ಬಳಸಿದ್ರೆ ಉಚಿತ ವಿದ್ಯುತ್ ನೀಡಬೇಕು. ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್​ ಅಂತಾ ಸಿದ್ದರಾಮಯ್ಯ ಹೇಳ್ತಿದ್ದಾರೆ ಎಂದಿದ್ದಾರೆ.

ಇದರಲ್ಲಿ ಸಾಕಷ್ಟು ಹಿಡನ್ ಅಜೆಂಡಾ ಇದೆ

ಸಾಮಾನ್ಯ ಜನ ಬಳಕೆ ಮಾಡೋದು 70ರಿಂದ 80 ಯೂನಿಟ್ ಅಷ್ಟೇ. ಅದು ಗೊತ್ತಿದ್ದೂ 200 ಯೂನಿಟ್ ಉಚಿತ ಅಂದ್ರು. ಆದ್ರೂ ಅದನ್ನು ಮರೆಮಾಚಿದ್ದಾರೆ. ಇಂದು ಒಬ್ಬ ಬಡವ 70 ಯೂನಿಟ್ ಬಳಕೆ ಮಾಡ್ತಿದ್ದಾನೆ. ನಾಳೆ ಎಲೆಕ್ಟ್ರಿಕ್ ಸ್ಟೌ ತಂದು ಬಳಸಿದಾಗ ಅದು ಜಾಸ್ತಿ ಆಗುತ್ತದೆ. ಇವರು ಮಾಡಿರೋ ಯೂನಿಟ್ ದಾಟಿದರೆ ಏನು ಮಾಡಬೇಕು? ಕಂಡೀಷನ್ ಅಪ್ಲೈ ಅಂತಾಗಲಿದೆ. ಅವರು ಸ್ಪಷ್ಟವಾಗಿ ಹೇಳಬೇಕಿತ್ತು. ಇದರಲ್ಲಿ ಸಾಕಷ್ಟು ಹಿಡನ್ ಅಜೆಂಡಾ ಇದೆ ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES