Monday, December 23, 2024

‘ಅಕ್ಕಿ ನಿಮ್ದು, ಚೀಲ ನಮ್ದು’ : ಬಿಜೆಪಿ ಸರ್ಕಾರದ ಅಕ್ಕಿಗೆ ‘ಕಾಂಗ್ರೆಸ್ ತನ್ನ ಲೆಬಲ್ ಹಚ್ಚುತ್ತಿದೆ’ ಎಂದ ಬಿಜೆಪಿ

ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರದ ಅಕ್ಕಿಗೆ ಕಾಂಗ್ರೆಸ್ ಪಕ್ಷ ತನ್ನ ಲೆಬಲ್ ಹಚ್ಚುತ್ತಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಟಕ್ಕರ್ ಕೊಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪ್ರಮಾಣ ಮಾಡಿದ 10 ಕಿಲೋ ಅಕ್ಕಿಯಲ್ಲಿ, ಕನಿಷ್ಠ 1 ಕಿಲೋ ಅಕ್ಕಿಯನ್ನೂ ರಾಜ್ಯದಿಂದ ಭರಿಸಲು ಸಿದ್ಧವಿಲ್ಲದ ಕಾಂಗ್ರೆಸ್ ಸರ್ಕಾರ, ‘ನೀಡುವ ಅಕ್ಕಿಯ ಪ್ರಮಾಣವನ್ನು ಹೆಚ್ಚಳ ಮಾಡಿ’ ಎಂದು ಕೇಂದ್ರ ಸರ್ಕಾರವನ್ನು ಗೋಗರೆಯಲು ಈಗಾಗಲೇ ಶುರು ಮಾಡಿದೆ ಎಂದು ಛೇಡಿಸಿದೆ.

ಕೇಂದ್ರ ಸರ್ಕಾರದಿಂದ ಬರುವ ಅಕ್ಕಿಯನ್ನು ತಮ್ಮ ಹೆಸರಿನೊಂದಿಗೆ ಚೀಲದಲ್ಲಿ ಹಾಕಿ ವಿತರಿಸುವುದರಲ್ಲಿ ಮುಖ್ಯಮಂತ್ರಿ ‌ಸಿದ್ದರಾಮಯ್ಯನವರಿಗೆ ಐದು ವರ್ಷಗಳ ಅನುಭವವಿದೆ. ಇದು ‘ಅಕ್ಕಿ ನಿಮ್ದು, ಚೀಲ ನಮ್ದು’ ಎಂಬ ಮತ್ತೊಂದು ವಂಚನೆಯಷ್ಟೇ, ರಾಜ್ಯದ ಜನತೆಯ ಹಿತ ಕಾಯುವ ಉದ್ದೇಶದ ಲವಲೇಶವೂ ಇಲ್ಲ ಎಂದು ಕುಟುಕಿದೆ.

ಇದನ್ನೂ ಓದಿ : ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ : ಬಜೆಪಿ ಕಾಲೆಳೆದ ಕಾಂಗ್ರೆಸ್

ಕಾಂಗ್ರೆಸ್ ಬಣ್ಣ ಬದಲಿಸಿದೆ

ಮುಂದುವರಿದು, ಹೇಳುವುದು ಒಂದು, ಮಾಡುವುದು ಮತ್ತೊಂದು’ ಎಂಬ ಮಾತನ್ನು  ಕಾಂಗ್ರೆಸ್ ಚಾಲ್ತಿಯಲ್ಲಿಟ್ಟಿದೆ. ಚುನಾವಣೆಯ ಮುನ್ನ ‘ಎಲ್ಲಾ ಪದವೀಧರರಿಗೆ’ 3,000 ರೂ. ಎಂದು ಬೊಬ್ಬಿರಿದು, ಇದೀಗ ತನ್ನ ಬಣ್ಣ ಬದಲಿಸಿದೆ ಎಂದು ಕಾಲೆಳೆದಿದೆ.

ಪ್ರತಿ ಮನೆಗೂ 200 ಯುನಿಟ್‌ ವಿದ್ಯುತ್‌ ಉಚಿತ ಎಂದು, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿಗಳು ಮನೆಮನೆಗೆ ಹೋಗಿ ಕೂಗಿದರು. ಈಗ ಒಂದು ವರ್ಷದ ಸರಾಸರಿ ವಿದ್ಯುತ್‌ ಬಳಕೆ ಎಷ್ಟಿತ್ತೋ, ಅದರ ಮೇಲೆ 10% ಅಷ್ಟು ಮಾತ್ರ ಉಚಿತ ಎಂದು ಜನರಿಗೆ ಶಾಕ್‌ ನೀಡುತ್ತಿದ್ದಾರೆ. ಎರಡು ನಾಲಗೆಯ ಇಬ್ಬಂದಿ ಪಕ್ಷ ಕಾಂಗ್ರೆಸ್ ಎಂದು ಛೇಡಿಸಿದೆ.

RELATED ARTICLES

Related Articles

TRENDING ARTICLES