ಬೆಂಗಳೂರು: ಹಾಲಿನ ಪ್ರೋತ್ಸಾಹ ಧನ ಲೀಟರ್ ಗೆ 1.50 ರೂ. ಕಡಮೆ ಮಾಡಲಾಗುವುದೆಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಆದೇಶ ಹೊರಡಿದೆ.
ಹೌದು, ಜೂನ್ 1 ರಿಂದ ಪರಿಷ್ಕೃತ ಆದೇಶ ಜಾರಿ ಯಾಗಲಿದ್ದು,ಈ ಹಿಂದೆ ಬೇಸಿಗೆಯ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಿಸಿದ್ದ ಆದರೆ ಇದೀಗ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಏ. 1ರಿಂದ ಮೇ. 31 ರವರೆಗೆ ವಿಶೇಷ ಪ್ರೋತ್ಸಾಹ ಧನ ನೀಡಿತ್ತು,
ಇದನ್ನೂ ಓದಿ: ಸಿಎಂಗೆ ಕಾನೂನು ಸಲಹೆಗಾರ, ಇಬ್ಬರು ರಾಜಕೀಯ ಕಾರ್ಯದರ್ಶಿ ನೇಮಕ
ಆದರೆ ಈಗ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆಇದ್ದು,ಮೇವಿನ ಸಮಸ್ಯೆ ಬಗೆಹರಿದಿರುವುದರಿಂದ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ ಇದ್ರಿಂದಾಗಿ ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ 13.50 ಲಕ್ಷ ಲೀಟರ್ ಹಾಲು ಉತ್ಪಾದನೆ ಯಾಗುತ್ತಿದ್ದು ಈಗ 16 ಲಕ್ಷ ಲೀಟರ್ ಗೆ ತಲುಪಿದೆ.
ಒಟ್ಟಾರೆಯಾಗಿ ಹಾಲು ಉತ್ಪಾದನೆಯಲ್ಲಿ 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳ ಕಾರಣ ಲೀಟರ್ ಗೆ 1.50 ರೂಪಾಯಿ ಕಡಿತ ಮಾಡಲಾಗುವುದೆಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಡಳಿತ ಮಂಡಳಿ ಆದೇಶ ಹೊರಹಾಕಿದೆ..