Wednesday, January 22, 2025

ಕುಣಿಗಲ್ ಶಾಸಕ ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ‘ಕೈ’ : ವಿಧಾನಪರಿಷತ್ ಸದಸ್ಯ ನವೀನ್

ತುಮಕೂರು : ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ಹೆಚ್.ಡಿ ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ‘ಕೈ’ ಎಂದು ವಿಧಾನಪರಿಷತ್ ಸದಸ್ಯ ನವೀನ್ ಆರೋಪ ಮಾಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಡಾ.ಹೆಚ್.ಡಿ ರಂಗನಾಥ್ ಹಾಗೂ ಸಂಸದ ಡಿ.ಕೆ ಸುರೇಶ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಸೇರಿ ಅಕ್ರಮ‌ ಮಾಡಿದ್ದಾರೆ. ಮತದಾನಕ್ಕೂ ಮುನ್ನ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ್ದಾರೆ. ಕಾರ್ಡ್ ನಲ್ಲಿ ಅಭ್ಯರ್ಥಿ ಕ್ರಮ ಸಂಖ್ಯೆ, ಸಿಂಬಲ್ ಹಾಗೂ ಬಾರ್ ಕೋಡ್ ಇದೆ. 60 ಸಾವಿರ ಕಾರ್ಡ್ ಗಳನ್ನು ಮನೆ ಮನೆಗೆ ಹೋಗಿ ವಿತರಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕಾರ್ಡ್​ ಅನ್ನು ಎಟಿಎಂ ರೀತಿ ಬಳಸಬಹುದು. ಗಿಫ್ಟ್​ ಅನ್ನು ಖರೀದಿ ಮಾಡಬಹುದು ಎಂದು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಮತದಾನ ಬಳಿಕ ಕಾರ್ಡ್ ಬಳಸಬಹುದು ಅಂತಾ ಸುಳ್ಳು ಭರವಸೆ ನೀಡಿದ್ದಾರೆ. ಇದರಿಂದ ಚುನಾವಣೆಯಲ್ಲಿ ವ್ಯತ್ಯಾಸ ಆಗಿದೆ. ಮತಕ್ಕೆ ಪ್ರಚಾರ ಆಗಿದ್ದರೇ ಬಾರ್ ಕೋಡ್ ಯಾಕೆ ಪ್ರಿಂಟ್ ಮಾಡಿದ್ರು ಮತದಾರರಿಗೆ ದಾರಿತಪ್ಪಿಸುವ ಕೆಲಸ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ‘ಗಂಡ-ಹೆಂಡತಿ ಮಧ್ಯೆ ನಡೆದ ಮಾತುಕತೆ’ ಹೊರಗೆ ಹೇಳೋಕೆ ಆಗಲ್ಲ : ಗುಟ್ಟು ಬಿಟ್ಟು ಕೊಡದ ಸವದಿ

ಅಕ್ರಮ ಮಾಡಿ ಕುಣಿಗಲ್ ಶಾಸಕ ಗೆದ್ದಿದ್ದಾರೆ. ನಾವು ಕಾನೂನು ಹೋರಾಟ ಮಾಡ್ತಿವಿ. ಹೈ ಕೋರ್ಟ್ ನಲ್ಲಿ ಈ ಬಗ್ಗೆ ಕೇಸ್ ದಾಖಲು ಮಾಡುತ್ತೇವೆ. ಮತದಾರರ ಮೂಲಕ ಕೇಸ್ ದಾಖಲಿಸಲು ನಿರ್ಧಾರ ಮಾಡಲಾಗಿದೆ. ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಿದ್ದಾರೆಂಬ ಕೇಳುವ ನೈತಿಕತೆ ಇಲ್ಲ‌. ಅಕ್ರಮವಾಗಿ ಮತ ಪಡೆದಿದ್ದಾರೆ. ಕಾನೂನಿನ ವಿರುದ್ಧ ಪ್ರಜಾಪ್ರಭುತ್ವದ ವಿರುದ್ಧ ಚುನಾವಣೆ ಮಾಡಿ ಕಾಂಗ್ರೆಸ್ ಗೆದ್ದಿದ್ದೆ ಎಂದು ಕಿಡಿಕಾರಿದ್ದಾರೆ.

ಶಾಸಕ ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ. ಕುಕ್ಕರ್ ಗಳನ್ನ ಮನೆ ಮನೆಗೂ ಹಂಚಿದ್ದಾರೆ. ನಾಲ್ಕೈದು ತಿಂಗಳುಗಳಿಂದ ಹಂಚಿದ್ದಾರೆ. ಕೇಸ್ ದಾಖಲಿಸಿದರೂ ಕೂಡ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೇಗೆ ಹೋರಾಟ ಮಾಡಿದ್ವೋ ಹಾಗೆಯೇ ಕುಣಿಗಲ್ ಕ್ಷೇತ್ರದಲ್ಲೂ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಅಕ್ರಮ‌ ನಡೆದಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಂಚೆಯಿಂದಲೂ ಇದೆ ಮಾಡಿದೆ. ಕಾನೂನು ಹೋರಾಟ ಮಾಡಲು ಕುಣಿಗಲ್ ಬಿಜೆಪಿ ಮುಖಂಡರು ನಿರ್ಧಾರ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ನವೀನ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES