Sunday, December 22, 2024

ಉತ್ತಮ ಜೀವನಕ್ಕೆ ನಿಮ್ಮ ಆಹಾರ ಪದ್ಧತಿ, ಜೀವನ ಶೈಲಿ ಹೇಗಿರಬೇಕು ಗೊತ್ತಾ?

ಬೆಂಗಳೂರು : ಆಹಾರ ಪದ್ಧತಿ, ಕೆಲಸದ ಒತ್ತಡ, ಆಧುನಿಕ ಶೈಲಿ, ಆರೋಗ್ಯ ಸಮಸ್ಯೆ.. ಇವು ಇತ್ತೀಚೆಗೆ ಎಲ್ಲರ ಜೀವನದಲ್ಲಿ ಅತೀ ಹೆಚ್ಚು ಕಾಡುತ್ತಿರುವ ಸರ್ವೇ ಸಾಮಾನ್ಯ ಪ್ರಾಬ್ಲಂಗಳು.

ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ನಡೆಸಬೇಕಾದರೆ ಮನೆಯಲ್ಲಿ ಎಲ್ಲರೂ ದುಡಿಯಲೇಬೇಕು ಎನ್ನುವ ಸ್ಥಿತಿಯಿದೆ. ನಮ್ಮ ಇಚ್ಛೆಗನುಸಾರವಾಗಿ ನಮ್ಮ ಜೀವನವನ್ನು ಸುಂದರವಾಗಿ ನಡೆಸಲೇಬೇಕು ಎಂದರೆ ದುಡಿಯುವುದು ಅನಿವಾರ್ಯ.

ಈ ಬ್ಯೂಸಿ ಶೆಡ್ಯೂಲ್ ನಲ್ಲಿ ನಮ್ಮ ಆಹಾರ ಪದ್ಧತಿ ಸಂಪೂರ್ಣವಾಗಿ ಬದಲಾಗಿದೆ. ಹಿಂದಿನ ಕಾಲದಲ್ಲಿನ ನಮ್ಮ ಹಿರಿಯರು ಆರೋಗ್ಯವಾಗಿರುತ್ತಿದ್ದರು. ಆದರೆ, ಈಗ ನಾವು ದುಡಿಯುವುದೆಲ್ಲಾ ಆಸ್ವತ್ರೆಗೆ ಖರ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ ಮತ್ತು ಜೀವನ ಕ್ರಮ.

ಹೊರಗಿನ ಆಹಾರದ ಮೇಲೆ ಅವಲಂಬನೆ ಬೇಡ

ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ ಮಾಡುತ್ತಿದ್ದರು. ಹಣ್ಣುಗಳು ತರಕಾರಿ ಸೊಪ್ಪು ಮತ್ತು ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುತ್ತಿದ್ದರು. ಆದರೆ ಈಗ ಕಾಲಘಟ್ಟ ಬದಲಾಗಿದೆ. ನಾವು ಹೆಚ್ಚು ಹೊರಗಿನ ಆಹಾರದ ಮೇಲೆ ಅವಲಂಬಿತವಾಗಿದ್ದೇವೆ.

ಇದನ್ನೂ ಓದಿ : ಮಾವಿನ ಹಣ್ಣು ತಿಂದರೆ, ಎಷ್ಟೆಲ್ಲಾ ಲಾಭಗಳಿವೆ ನೋಡಿ.. 

ಆಹಾರ ಕ್ರಮದಲ್ಲಾದರೂ ಇರಲಿ ಬದಲಾವಣೆ

ಹೋಟೆಲ್ ಆಹಾರ ಮತ್ತಿತರ ಪ್ರೋಟಿನ್ ಡ್ರಿಂಕ್ಸ್ ಬದಲಿಗೆ ಹಣ್ಣುಗಳು, ತರಕಾರಿ, ಸೊಪ್ಪು ಅದಷ್ಟು ಪೌಷ್ಠಿಕ ಆಹಾರ ಸೇವನೆ ಮಾಡುವುದು ಉತ್ತಮ. ಇದರಿಂದ ನಿಮ್ಮ ಚರ್ಮ, ಆರೋಗ್ಯ ಎಲ್ಲವೂ ಸರಿಯಾಗಿರುತ್ತದೆ. ನಾವು ಇಂದಿನ ಜೀವನ ಶೈಲಿಗೆ ಹೊಂದುಕೊಂಡಿದ್ದೇವೆ. ಸಂಪೂರ್ಣ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳದೇ ಇದ್ದರೂ ಆಹಾರ ಕ್ರಮದಲ್ಲಾದರೂ ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳಬಹುದು.

ಒಟ್ನಲ್ಲಿ, ಇತ್ತೀಚಿನ ದಿನಗಳಲ್ಲಿನ ಆಹಾರ ಪದ್ಧತಿ, ಜೀವನ ಶೈಲಿಯಿಂದ ಜನರು ಬೇಗನೇ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ, ಫಾಸ್ಟ್ ಫುಡ್, ಹೋಟೆಲ್ ಆಹಾರ, ಪ್ರೋಟಿನ್ ಡ್ರಿಂಕ್ಸ್ ಗಳಿಗೆ ಬಾಯ್ ಹೇಳಿ ತಾಜಾ ಆಹಾರ ಹಾಗೂ ಸರಳ ಆಹಾರ ಪದ್ಧತಿ ಅನುಸರಿಸಿ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವುದು ಸೂಕ್ತ.

 

RELATED ARTICLES

Related Articles

TRENDING ARTICLES