Thursday, January 23, 2025

ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

ಬೆಂಗಳೂರು: ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಪವಿತ್ರಾ ಲೋಕೇಶ್ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ (Phd) ಪ್ರವೇಶ ಪರೀಕ್ಷೆ ಬರೆದಿದ್ದಾರೆ.

ಹೌದು, ಇತ್ತೀಚಿಗೆ ವೈಯತ್ತಿಕ ಜೀವನಕ್ಕೆ ಸಂಬಂಧಪಟ್ಟಂತೆಹೆಚ್ಚಿನ ಸುದ್ದಿಯಲ್ಲಿರುವ ಪವಿತ್ರಾ ಲೋಕೇಶ್ ಇದೀಗ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ್ದು ಮತ್ತೆ ಸುದ್ದಿಯಾಲಿದ್ದಾರೆ.

ಕನ್ನಡದಲ್ಲಿ ಎಂಎ ಮಾಡಿರುವ ಪವಿತ್ರಾ ಲೋಕೇಶ್‌

ನಟಿ ಪವಿತ್ರಾ ಲೋಕೇಶ್ ಅವರು ಕನ್ನಡದಲ್ಲಿ ಎಂಎ ಮಾಡಿದ್ದಾರೆ. ಕನ್ನಡ ಸಾಹಿತ್ಯ ವಿಷಯದಲ್ಲಿ ಪಿಎಚ್‍ಡಿ ಪದವಿ ಮಾಡಲು ಬಯಸಿರುವ ಅವರು ಇದೀಗ ಪಿಎಚ್‍ಡಿ ಪದವಿಗಾಗಿ ಪ್ರವೇಶ ಪರೀಕ್ಷೆ ಎದುರಿಸಿದ್ದಾರೆ. ವಿವಿಯ ನುಡಿಕಟ್ಟಡದಲ್ಲಿ ಅವರು ಪ್ರವೇಶ ಪರೀಕ್ಷೆ ಬರೆದರು. ಕನ್ನಡ ವಿಶ್ವವಿದ್ಯಾಲಯದ ಬೆಳಗಾವಿ ಸಂಶೋಧನಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿದ್ದ ಅವರು ಕನ್ನಡ ಸಾಹಿತ್ಯ ವಿಭಾಗದಲ್ಲಿ ಸಂಶೋಧನೆಗೆ ಪ್ರವೇಶ ಪರೀಕ್ಷೆ ಬರೆದಿದ್ದಾರೆ.

 

 

 

RELATED ARTICLES

Related Articles

TRENDING ARTICLES