ಹುಬ್ಬಳ್ಳಿ : ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಹಾಗೂ ಗುಬ್ಬಿ ಶ್ರೀನಿವಾಸ್ ಅವರಿಂದ ನಮಗೆ ಶಕ್ತಿ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀವು ಸಮಾಜಕ್ಕೆ ಸತ್ಯ ಸಂಗತಿ, ಎಲ್ಲ ವರ್ಗದ ಜನರನ್ನು ರಕ್ಷಣೆ ಮಾಡಿದ್ದೀರಿ ಎಂದು ತಿಳಿಸಿದ್ದಾರೆ.
ನಾನು ಜಗದೀಶ್ ಶೆಟ್ಟರ್, ಸವದಿ ಭೇಟಿ ಕಾರ್ಯಕ್ರಮ ಮಾತ್ರ ಹಾಕಿಕೊಂಡಿದ್ದೆ. ಬಿ ಫಾರಂ ಕೊಟ್ಟ ಮೇಲೆ ಜಗದೀಶ್ ಶೆಟ್ಟರ್ ಜೊತೆ ಮಾತನಾಡಿರಲಿಲ್ಲ. ನಾನು ಪ್ರಚಾರದಲ್ಲಿ ಬ್ಯೂಸಿ ಆಗಿದ್ದೆ. ಶೆಟ್ಟರ್, ಸವದಿ, ಗುಬ್ಬಿ ಶ್ರೀನಿವಾಸ ಅವರಿಂದ ನಮಗೆ ಶಕ್ತಿ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಯಲ್ಲಿ ಸೋಲು, ಗೆಲವು ಸಾಮಾನ್ಯ. ಶೆಟ್ಟರ್ ಅವರು ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಅವರಿಂದ ಬದಲಾಗಣೆ ಆಯ್ತು. ನಾವು ಪ್ರತಿಯೊಂದು ಹಂತದಲ್ಲೂ ಸರ್ಕಾರದ ತಪ್ಪು ಮುಂದಿಟ್ಟಿದ್ದೇವೆ.
ಇವತ್ತು ನಮಗೆ ದೊಡ್ಡ ಅವಕಾಶ ನಮಗೆ ಸಿಕ್ಕಿದೆ. ದೇವರೂ ವರನೂ ಕೊಡಲ್ಲ ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡ್ತಾನೆ. ನಾವು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಜರಂಗದಳ ಬ್ಯಾನ್ ಬಗ್ಗೆ ಕೇಳಿದ್ದಕ್ಕೆ ‘ಕೈ’ ಮುಗಿದ ಸಚಿವ ಜಮೀರ್
ಶೆಟ್ಟರ್ಗೆ ಸಂದೇಶ ತಲುಪಿಸಿದ್ದೇವೆ
ಇಂದು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇತ್ತು. ಅದು ಮುಂದಕ್ಕೆ ಹೋಗಿದೆ. ನಾವು ನುಡಿದಂತೆ ನಡೆಯುತ್ತೇವೆ. ಜಗದೀಶ್ ಶೆಟ್ಟರ್ ಜೊತೆ ನಾವು ಇರ್ತೀವಿ. ನಮಗೆ ವರಿಷ್ಠರ ಆದೇಶ ಇದೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇಲೆ ಕೆಲ ಸಂದೆಶ ಹೇಳಬೇಕಿತ್ತು. ಶೆಟ್ಟರ್ಗೆ ಸಂದೇಶ ತಲುಪಿಸಿದ್ದೇವೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.
— Jagadish Shettar (@JagadishShettar) May 31, 2023
ಜಗದೀಶ್ ಶೆಟ್ಟರ್ಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಕೊಡುವ ವಿಚಾರ ಕುರಿತು ಮಾತನಾಡಿದ ಅವರು, ನಾನು ಒಂದೇ ಮಾತಿನಲ್ಲಿ ಹೇಳ್ತೀನಿ. ಕಾಂಗ್ರೆಸ್ ಪಕ್ಷ ಅವರ ಜೊತೆ ಇದೆ. ನಾವೇನು ಗೌಪ್ಯವಾಗಿ ಇಡಲ್ಲ, ನಿಮಗೆ ಹೇಳ್ತೀವಿ ಎಂದು ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.