Friday, November 22, 2024

ಕ್ವಾರಿ ನೀರಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು

ಬೆಂಗಳೂರು : ಕ್ವಾರಿಯಲ್ಲಿ ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಆನೆಕಲ್ ನಲ್ಲಿ ನಡೆದಿದೆ.

ಹಾಸನ ಮೂಲದ ತೀರ್ತೇಶ್‌ (12) ಹಾಗೂ ಮಾರಗೊಂಡನಹಳ್ಳಿಯ ಫೈಸಲ್‌ ಖಾನ್‌ (14)ಮೃತ ಬಾಲಕರಾಗಿದ್ದಾರೆ. ಆನೇಕಲ್‌ ತಾಲೂಕಿನ ಹುಲಿಮಂಗಲದ ಕ್ವಾರಿಯಲ್ಲಿ ಘಟನೆ ಸಂಭವಿಸಿದೆ.

ಮೃತರು ಎಲೆಕ್ಟ್ರಾನಿಕ್‌ ಸಿಟಿಯ ಮಾರಗೊಂಡನಹಳ್ಳಿಯ ನಿವಾಸಿಗಳಾಗಿದ್ದು, ಇವರಿಬ್ಬರೂ ನಿನ್ನೆ ಸಂಜೆ ಕ್ವಾರಿಯಲ್ಲಿ ಈಜಲು ಹೋಗಿದ್ದಾರೆ. ಬಾಲಕರು ನೀರಿನಲ್ಲಿ ಮುಳುಗಿದ್ದರಿಂದ ರಾತ್ರಿ ವೇಳೆ ಮನೆಗೆ ಬಂದಿಲ್ಲ.

ಬಳಿಕ, ಬಾಲಕರು ಆಟವಾಡಲು ಹೋಗುತ್ತಿದ್ದ ಸ್ಥಳಕ್ಕೆ ಹುಡುಕಿಕೊಂಡು ಹೋದಾಗ ಮಕ್ಕಳ ಬಟ್ಟೆ ಮತ್ತು ಚಪ್ಪಲಿಗಳು ಕ್ವಾರಿಯ ಬಳಿ ಪತ್ತೆಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸೇರಿ ಬಾಲಕರ ಮೃತದೇಹವನ್ನು ಇಂದು ಸಂಜೆ ಹೊರತೆಗೆದಿದ್ದಾರೆ.ಈ  ಘಟನೆ ಕುರಿತಂತೆ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ಲಕ್ಷ ರೂ. ಮಂಜೂರು

ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಹನುಮಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಮಂಜೂರು ಮಾಡಲಾಗಿದೆ. ರಾಯಚೂರು ಜಿಲ್ಲಾಧಿಕಾರಿಗಳ ಖಾತೆಗೆ ಸಿಎಂ ಪರಿಹಾರ ಹಣ ಬಿಡುಗಡೆ ಮಾಡಲಾಗಿದ್ದು. ಮೃತ ಬಾಲಕ‌ನ ವಾರಸುದಾರರಿಗೆ ಪರಿಹಾರ ನೀಡುವಂತೆ ಸಿಎಂ ಆದೇಶಿಸಿದ್ದಾರೆ.

RELATED ARTICLES

Related Articles

TRENDING ARTICLES