Wednesday, January 22, 2025

ರಾಹುಲ್ ಗಾಂಧಿಗೆ ಎರಡು ಕಡೆ ಸಿಟಿಜನ್ ಶಿಪ್ ಇದೆ, ಮುಟ್ಟುಗೋಲು ಹಾಕಿಕೊಂಡು ಗಡಿಪಾರು ಮಾಡಬೇಕು : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 18 ಮುಸ್ಲಿಂ ಸಂಘಟನೆಯ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಪ್ಲಾನ್ ಇದೆ ಎಂಬ ವರದಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗ್ಯಾರಂಟಿ ಏನ್ ಆಯ್ತು ಅಂತ ಕೇಳೋಕೆ ಬಂದಿಲ್ಲ. ನಾನು ಗ್ಯಾರಂಟಿ ವಿರೋಧಿಸಿ, ನಾನು ಹಾಗೂ ನನ್ನ ಕುಟುಂಬ ಯಾವುದೇ ಗ್ಯಾರಂಟಿ ತೆಗೆದುಕೊಳ್ಳಲ್ಲ. ಕಾಂಗ್ರೆಸ್ ಸರ್ಕಾರ ಜನರ ಆಶ್ವಾಸನೆ ಈಡೇರಿಸಿದ್ರೆ ಸಾಕು ಎಂದಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಅಮೆರಿಕಾಗೆ ಹೋಗಿದ್ದಾರೆ. ದೇಶದಲ್ಲಿ ಅಭದ್ರತ್ರೆ ಸೃಷ್ಟಿ ಮಾಡುವ ರೀತಿಯಲ್ಲಿ ಹೇಳಿಕೆ‌ ಕೊಡ್ತಿದ್ದಾರೆ. ಇದರಿಂದ ರಾಹುಲ್ ಗಾಂಧಿಗೆ ಭಾರತದ ಪರವಾದ ಧೋರಣೆ ಇಲ್ಲ ಅನಿಸುತ್ತದೆ. 18 ಮುಸ್ಲಿಂ ಸಂಘಟನೆಯ ಮುಖ್ಯಸ್ಥರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಪ್ಲಾನ್ ಇದೆ ಎಂಬ ವರದಿ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕರುನಾಡಲ್ಲಿ ‘ಶಾಂತಿ, ಸಾಮರಸ್ಯ, ಪ್ರಗತಿ’ ಸಾಧಿಸಲು ಕಾಂಗ್ರೆಸ್ ಬದ್ಧ : ಸೋನಿಯಾ ಗಾಂಧಿ

ದೇಶದಲ್ಲಿ ಅಭದ್ರತೆ ಸೃಷ್ಟಿಸುತ್ತಿದ್ದಾರೆ

ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಈ ರೀತಿಯಲ್ಲಿ ಮಾಡ್ತಿದ್ದಾರೆ ಎಂಬುದು ನನಗೆ ಅನುಮಾನ ಕಾಡ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಇಷ್ಟೊಂದು ಮನಸ್ಥಿತಿ ಬದಲಾವಣೆ ಆಗಲು ಕಾರಣ ಏನು? ಇನ್ನೂ ಹೊಸ ಸಂಸತ್ ಭವನ ಉದ್ಘಾಟನೆಗೆ ವಿರೋಧ ಪಕ್ಷ ಬಂದಿಲ್ಲ. ಅವರ ಮನಸ್ಥಿತಿ ತೋರಿಸುತ್ತದೆ. ಅದನ್ನು ಹೊರ ದೇಶದಲ್ಲಿ ಹೋಗಿ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಬಗ್ಗೆ ವಿರೋಧಿ ಧೋರಣೆ

ಸಂಸತ್ ಉದ್ಘಾಟನೆ ವೇಳೆ ಸೆಂಗೋಲ್ ಕೊಟ್ಟಿದ್ರು. ಇದು ಚರಿತ್ರೆಯಲ್ಲಿ ಮುಚ್ಚಿ ಹೋಗಿತ್ತು. ಅದನ್ನು ಬೆಳಕಿಗೆ ಬಂದಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಅಮಿತ್ ಶಾ ಹಾಗೂ ಮೋದಿಗೆ ಪತ್ರ ಬರೆಯುತ್ತೇನೆ. ರಾಹುಲ್ ಗಾಂಧಿಗೆ ಎರಡು ಕಡೆ ಸಿಟಿಜನ್ ಶಿಪ್ ಇದೆ ಎಂಬ ಮಾಹಿತಿ ಇದೆ. ಇದನ್ನು ಹಿರಿಯ ವಕೀಲ ಸುಬ್ರಹ್ಮಣ್ಯ ಸ್ವಾಮಿ ಕೂಡ ಹೇಳಿದ್ರು. ನನಗೆ ಅನುಮಾನ ಇರೋದು ಇವರು ಭಾರತದ ಬಗ್ಗೆ ವಿರೋಧಿ ಧೋರಣೆ ತೋರಿ ಮಾತನಾಡುತ್ತಾರೆ. ಹೀಗಾಗಿ, ಎರಡು ಕಡೆ ಸಿಟಿಜನ್ ಶಿಪ್‌ ಇದ್ದರೆ ಮುಟ್ಟುಗೋಲು ಹಾಕಿಕೊಂಡು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES