Wednesday, January 22, 2025

ದಾಖಲೆಗಳ ‘ಚಾಂಪಿಯನ್ ಧೋನಿ’ : ಸಚಿನ್ ದಾಖಲೆಯೂ ಉಡೀಸ್..!

ಬೆಂಗಳೂರು : ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸಿ ಚಾಂಪಿಯನ್ ಕೀರಿಟ ತೊಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ಹೊಸ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಹೌದು, ವರ್ಣರಂಜಿತ ಐಪಿಎಲ್ 16ನೇ ಆವೃತ್ತಿಗೆ ತೆರೆಬಿದ್ದಿದೆ. ಚೆನ್ನೈ 5 ಬಾರಿ ಪ್ರಶಸ್ತಿ ಗೆದ್ದು ದಾಖಲೆಯನ್ನು ನಿರ್ಮಿಸಿದೆ. ಇದಲ್ಲದೆ, ತಲಾ ಧೋನಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ.

ಐಪಿಎಲ್ ಟ್ರೋಫಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಕೂಲ್ ಕ್ಯಾಪ್ಟನ್ ಮಾಹಿ ಪಾಲಾಗಿದೆ. ಎಂ.ಎಸ್ ಧೋನಿ 41 ವರ್ಷ 327 ದಿನ, ಸಚಿನ್ ತೆಂಡುಲ್ಕರ್ 40 ವರ್ಷ 33 ದಿನ, ಚೆನ್ನೈ ಮಾಜಿ ಆಟಗಾರ ಇಮ್ರಾನ್ ತಾಹಿರ್ 39 ವರ್ಷ 61 ದಿನ, ಶೇನ್ ವಾರ್ನ್ 38 ವರ್ಷ 262 ದಿನ ಹಾಗೂ ಮ್ಯಾಥ್ಯೂ ಹೇಡನ್ 38 ವರ್ಷ 178 ದಿನ. ಇವರು ಐಪಿಎಲ್ ಟ್ರೋಫಿ ಎತ್ತಿಹಿಡಿದ ಹಿರಿಯ ಆಟಗಾರರಾಗಿದ್ದಾರೆ.

5 ಬಾರಿ ಫೈನಲ್ ಗೆದ್ದ ಧೋನಿ

ಐಪಿಎಲ್ ಫೈನಲ್ ನಲ್ಲಿ ಹೆಚ್ಚು ಗೆಲುವು ಸಾಧಿಸಿದ ಆಟಗಾರರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ. ಮುಂಬೈ ನಾಯಕ ರೋಹಿತ್ ಶರ್ಮಾ ಹಾಗೂ ಚೆನ್ನೈ ಆಟಗಾರ ಅಂಬಟಿ ರಾಯುಡು 6 ಬಾರಿ ಫೈನಲ್ ಗೆದ್ದು ಮೊದಲೆರಡು ಸ್ಥಾನದಲ್ಲಿದ್ದಾರೆ. ಧೋನಿ, ಹಾರ್ದಿಕ್ ಪಾಂಡ್ಯ ಹಾಗೂ ಕಿರನ್ ಪೊಲಾರ್ಡ್ 5 ಬಾರಿ ಫೈನಲ್ ನಲ್ಲಿ ಗೆಲವು ಸಾಧಿಸಿದ ಆಟಗಾರರು ಎನಿಸಿಕೊಂಡಿದ್ದಾರೆ.

ಚಾಂಪಿಯನ್ ಕ್ಯಾಪ್ಟನ್ ಧೋನಿ

2007 : ಟಿ20 ವಿಶ್ವಕಪ್ ಗೆಲುವು

2010 : ಐಪಿಎಲ್ ಚಾಂಪಿಯನ್

2010 : ಚಾಂಪಿಯನ್ಸ್ ಲೀಗ್ ಟಿ20 ಗೆಲುವು

2011 : ಏಕದಿನ ವಿಶ್ವಕಪ್ ಗೆಲುವು

2011 : ಐಪಿಎಲ್ ಚಾಂಪಿಯನ್

2013 : ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವು

2014 : ಚಾಂಪಿಯನ್ಸ್ ಲೀಗ್ ಟಿ20 ಗೆಲುವು

2016 : ಏಷ್ಯಾ ಕಪ್ ಗೆಲುವು

2018 : ಐಪಿಎಲ್ ಚಾಂಪಿಯನ್

2021 : ಐಪಿಎಲ್ ಚಾಂಪಿಯನ್

2023 : ಐಪಿಎಲ್ ಚಾಂಪಿಯನ್

RELATED ARTICLES

Related Articles

TRENDING ARTICLES