Monday, December 23, 2024

ಬಿಜೆಪಿಯವ್ರು 15 ಲಕ್ಷ ಅಕೌಂಟ್​ಗೆ ಹಾಕ್ತೀವಿ ಅಂದಿದ್ರು ಈ ಬಗ್ಗೆ ಕುಮಾರಣ್ಣ ಮಾತಾಡ್ತಿಲ್ಲ : DKS

ಬೆಂಗಳೂರು : ಹಿಂದೆ ಬಿಜೆಪಿಯವರು 15 ಲಕ್ಷ ರೂ. ಅಕೌಂಟ್ ಗೆ ಹಾಕ್ತೀವಿ ಅಂದ್ರು, ಅದ್ರ ಬಗ್ಗೆ ಕುಮಾರಣ್ಣ ಮಾತಾಡ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಳಪತಿಗೆ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಗ್ಯಾರೆಂಟಿಗಳ ಬಗ್ಗೆ ಬದ್ಧರಿದ್ದೀವಿ, ತಕರಾರಿಲ್ಲ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಏನೇನು ವರ್ಕೌಟ್ ಮಾಡಿದ್ದಾರೆ ಅಂತಾ ಮಾಹಿತಿ ಪಡೆದಿದ್ದಾರೆ. ಕೆಲವೊಂದು ಆಪ್ಷನ್ ಕೊಟ್ಟಿದ್ದಾರೆ. ನಮ್ಮ ಗ್ಯಾರೆಂಟಿಗಳ ಬಗ್ಗೆ ತಕರಾರಿಲ್ಲ. ಹಣಕಾಸು ಬಗ್ಗೆ ಹೇಳಿ ನಮ್ಮ ಗಮನ ಸೆಳೆದಿದ್ದಾರೆ. ರೀ ವರ್ಕ್ ಮಾಡಿ ಕ್ಯಾಬಿನೆಟ್ ಗೆ ತೆಗೆದುಕೊಂಡು ಬನ್ನಿ ಅಂತಾ ಹೇಳಿದ್ದೀವಿ ಎಂದು ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಕ್ಯಾಬಿನೆಟ್ ಸೇರಿ ವ್ಯಾಪಕವಾಗಿ ಚರ್ಚೆ ಮಾಡ್ತೀವಿ. ಯಾರೂ ಕೂಡ ಅದಂತೆ ಇದಂತೆ ಅಂತಾ ಗಾಸಿಪ್ ಗೆ ಅವಕಾಶ ಕೊಡಬೇಡಿ. ಹಣಕಾಸು ಸ್ಥಿತಿ ಬಗ್ಗೆ ನಮಗೆ ಅರಿವಿದೆ. ತೀರ್ಮಾನ ಮಾಡೋದು ಸರ್ಕಾರ, ಶುಕ್ರವಾರ ತೀರ್ಮಾನ ಆಗುತ್ತೆ. ನೀವು ಸ್ಪೀಡ್ ನಲ್ಲಿರಬಹುದು, ನಾವು ಆ ಸ್ಪೀಡ್ ನಲ್ಲಿಲ್ಲ. ಹೇಗೆ ಅಂತಾ ನಾವು ಚರ್ಚೆ ಮಾಡ್ತೀವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕೆಲ ಸಚಿವರು, ಶಾಸಕರನ್ನು ‘ನನ್ನ ಮೇಲೆ ಛೂ ಬಿಟ್ಟರೆ ಪ್ರಯೋಜನವಿಲ್ಲ’ : ಹೆಚ್.ಡಿ ಕುಮಾರಸ್ವಾಮಿ 

ಕಂಡೀಶನ್ ಪಂಡೀಶನ್ ಮುಖ್ಯವಲ್ಲ

ವಿಪಕ್ಷದವ್ರು ಏನ್ ಬೇಕಾದ್ರೂ ಮಾಡಲಿ, ಹೋರಾಟ ಮಾಡಲಿ. ಹಿಂದೆ 15 ಲಕ್ಷ ರೂ. ಅಕೌಂಟ್ ಗೆ ಹಾಕ್ತೀವಿ ಅಂದ್ರು, ಅದ್ರ ಬಗ್ಗೆ ಕುಮಾರಣ್ಣ ಮಾತಾಡ್ತಿಲ್ಲ. ನಾವು ಕೊಟ್ಟಿರೋ ಮಾತನ್ನು ಉಳಿಸಿಕೊಳ್ಳಲು ಕ್ರಮಬದ್ಧವಾಗಿ ಮಾಡ್ತೀವಿ. ಕಂಡೀಶನ್ ಪಂಡೀಶನ್ ಮುಖ್ಯವಲ್ಲ, ಅಲ್ಲಿ ಸಿಸ್ಟಮ್ ಇರಬೇಕು ಎಂದು ಡಿ.ಕೆ ಶಿವಕುಮಾರ್ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಅಧಿಕಾರಿಗಳಿಗೆ ಟೈಮ್ ಸಾಕಾಗಿಲ್ಲ, ಕೊಟ್ಟಿದ್ದೀವಿ

ಬಸ್ ವಿಚಾರದಲ್ಲಿ ಎಲ್ಲಿವರೆಗೆ, ಯಾರಿಗೆ ಅಂತಾ ಅಂತಾ ಲೆಕ್ಕಾಚಾರ. ನಾಲ್ಕೈದು ಆಪ್ಷನ್ಸ್ ಕೊಟ್ಟಿದ್ದಾರೆ, ಅದನ್ನು ಸ್ಟಡಿ ಮಾಡ್ತೀವಿ. ಅಧಿಕಾರಿಗಳಿಗೆ ಟೈಮ್ ಸಾಕಾಗಿಲ್ಲ, ಕೊಟ್ಟಿದ್ದೀವಿ. ನಾಳೆ ಕ್ಯಾಬಿನೆಟ್ ಇತ್ತು ಶುಕ್ರವಾರಕ್ಕೆ ಹೋಗಿದೆ. ಮಾತು ಕೊಟ್ಟಿರೋದನ್ನು ಇಂಪ್ಲಿಮೆಂಟ್ ಮಾಡಬೇಕಲ್ಲಾ ಎಂದು ಡಿಕೆಶಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES