ತುಮಕೂರು : ಬಜರಂಗದಳ ಸಂಘಟನೆ ಬ್ಯಾನ್ ವಿಚಾರದ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದಂತೆಯೇ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಕೈ ಮುಗಿದಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿಗೆ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ಲಿಂಗೈಕ್ಯ ಡಾ.ಶಿವಕುಮಾರ್ ಸ್ವಾಮಿಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಜಮೀರ್ ಅಹಮದ್ ಡಿಸಿಎಂ ಆಕಾಂಕ್ಷಿ ಆಗಿದ್ರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಡಿಸಿಎಂ ಆಕಾಂಕ್ಷಿಯಾಗಿರಲಿಲ್ಲ. ಈಗ ಕೊಟ್ಟಿರುವ ಖಾತೆ ನನಗೆ ತೃಪ್ತಿ ತಂದಿದೆ. ಮುಖ್ಯಮಂತ್ರಿಗಳು ಬಡವರಿಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಹಳ ಖುಷಿ ಇದೆ ನನಗೆ ಎಂದು ಹೇಳಿದ್ದಾರೆ.
ಉಚಿತ ಗ್ಯಾರಂಟಿ ಕಾರ್ಡ್ ಜಾರಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನೀವು ಮಾಧ್ಯಮದವರು ಜಾಸ್ತಿ ಆತುರ ಬಿಳ್ತಿದ್ದೀರಾ. 5 ಉಚಿತ ಗ್ಯಾರಂಟಿ ಯೋಜನೆಗಳನ್ನು ಹೇಳಿದ್ದೇವೆ. ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಪ್ರುವಲ್(ತಾತ್ವಿಕ ಅನುಮೋದನೆ) ಮಾಡಿದ್ದೇವೆ. ಇದನ್ನ್ನನು ಹೇಗೆ ಜಾರಿ ಮಾಡಬೇಕು ಅಂತ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಚರ್ಚೆ ಮಾಡ್ತಿದ್ದಾರೆ ಎಂದು ಸಚಿವ ಜಮೀರ್ ತಿಳಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳು ವಿಳಂಬವಾಗುವುದಿಲ್ಲ ತಾಳ್ಮೆ ಇರಲಿ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಷ್ಟು ಬೇಗ 5 ಗ್ಯಾರಂಟಿಗಳನ್ನು ಇಂಪ್ಲಿಮೆಂಟ್ ಮಾಡೋಕೆ ಪ್ರಯತ್ನ ಮಾಡ್ತಾರೆ. ದಯಮಾಡಿ ಇದು ಇಂಪ್ಲಿಮೆಂಟ್ ಆಗೋವರೆಗೂ ಕಾಯಬೇಕು. ಇನ್ನು ಸರ್ಕಾರ ರಚೆನೆಯಾಗಿ ಒಂದು ವಾರ, 10 ದಿನ ಆಗಿದೆ ಅಷ್ಟೇ. ಅದೆಲ್ಲಾ ಒಂದು ದಿನ, 10 ದಿನಗಳಲ್ಲಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೊದಲನೇ ಕ್ಯಾಬಿನೆಟ್ ನಲ್ಲಿ ಮುಖ್ಯಮಂತ್ರಿಗಳು ಐದು ಗ್ಯಾರಂಟಿಗಳನ್ನು ಅಪ್ರುವ್(ತಾತ್ವಿಕ ಅನುಮೋದನೆ) ಮಾಡಿದ್ದಾರೆ. ಅದನ್ನ ಹೇಗೆ ಮಾಡ್ಬೇಕು ಅಂತ ನಿನ್ನೆಯೂ(ಸೋಮವಾರ) ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು 3 ಗಂಟೆ ಸುಧೀರ್ಘವಾಗಿ ಸಭೆ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಮಾಹಿತಿ ನೀಡಿದ್ದಾರೆ.