Sunday, December 22, 2024

ನಾನು ಕಿವಿಯಲ್ಲಿ ಕೇಳಿದ್ರೂ, ಕಣ್ಣಲ್ಲಿ ನೋಡಬೇಕು : ಡಿ.ಕೆ ಶಿವಕುಮಾರ್ ಟಕ್ಕರ್

ಬೆಂಗಳೂರು : ನಾನು ಕಿವಿಯಲ್ಲಿ ಕೇಳಿದ್ರೂ, ಕಣ್ಣಲ್ಲಿ ನೋಡಬೇಕು. ಆ ಮುತ್ತು-ರತ್ನಗಳ ಬಗ್ಗೆ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯಲ್ಲಿ ಉದ್ಯೋಗ ಸೃಷ್ಟಿಗೆ ಗಮನ ನೀಡಲಾಗುತ್ತದೆ. ಹೊರ ಗುತ್ತಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಾವು ಮಾಡುವ ಕೆಲಸಕ್ಕೆ ಲೆಕ್ಕಾಚಾರ ಇಡಬೇಕಿದೆ. ಮೇಕೆದಾಟು ಯೋಜನೆಗೆ ಹಣ ಇಟ್ಟಿದ್ರು ಅದು ಕಾಣ್ತಿಲ್ಲ. ಕೇಂದ್ರ ಸಚಿವರನ್ನ್ನನು ಭೇಟಿ ಮಾಡ್ತೇವೆ. ಯಾವ ರಾಜ್ಯಕ್ಕೂ ಅನ್ಯಾಯ ಮಾಡುವ ವಿಚಾರ ಇಲ್ಲ. ಹಿಂದಿನ ಸರ್ಕಾರದಲ್ಲಿ ಏನಿತ್ತು ಅದೆಲ್ಲ ಬೇಡ ಎಂದು ಡಿಸಿಎಂ ಡಿಕೆಶಿ ಖಡಕ್ ಆಗಿಯೇ ತಿಳಿಸಿದ್ದಾರೆ.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ವಿಶ್ವನಾಥ್ ಅವರ ಮಾತು ಕಿವಿಯಲ್ಲಿ ಇದೆ. ಅಕ್ಬಲ್ ಬೀರಬಲ್ ಕಥೆ ಹೇಳಿದ ಶಿವಕುಮಾರ್, ಖಾಲಿ ಮಾತಾಡಲು ಬಯಸಲ್ಲ. ಮುತ್ತು-ರತ್ನಗಳು ನೆನಪಿದೆ ಎಂದು ಹಿಂದಿನ ಸರ್ಕಾರದ ಹಗರಣಗಳ ನೆನಪಿದೆ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ : ಮಾಜಿ ಸಚಿವ ಅಶ್ವತ್ಥನಾರಾಯಣ ಬಿಗ್ ರಿಲೀಸ್ ನೀಡಿದ ಹೈಕೋರ್ಟ್

ನೀರಾವರಿ ಇಲಾಖೆಯ ಭ್ರಷ್ಟಾಚಾರ ಕುರಿತು ಹಿಂದಿನ ಆಡಳಿತ ಪಕ್ಷದ ಶಾಸಕರು ಆಡಿರುವ ಮಾತುಗಳು ನನ್ನ ಕಿವಿಯಲ್ಲಿದೆ. ಗೂಳಿಹಟ್ಟಿ ಶೇಖರ್ ಮತ್ತು ಹೆಚ್. ವಿಶ್ವನಾಥ ಆಡಿರುವ ಮಾತು ಸಹ ಒಂದೊಂದು ಕಿವಿಯಲ್ಲಿದೆ. ನಾನು ಕಿವಿಯಲ್ಲಿ ಕೇಳಿದ್ರೂ, ಕಣ್ಣಲ್ಲಿ ನೋಡಬೇಕು. ಆ ಮುತ್ತು ರತ್ನ ಗಳ ಬಗ್ಗೆ ಗೊತ್ತಿದೆ. ನಾನು ತನಿಖೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ನಂತರ ಮಾತಾಡ್ತೇನೆ ಎಂದು ಪರೋಕ್ಷವಾಗಿ ನೀರಾವರಿ ಇಲಾಖೆಯ ಅಕ್ರಮಗಳ ಕುರಿತು ತನಿಖೆಯ ಸುಳಿವು ಕೊಟ್ಟದ್ದಾರೆ.

ಜಲಸಂಪನ್ಮೂಲ ಇಲಾಖೆಯ ಮೊದಲ ಸಭೆ ನಡೆಸಲಾಗಿದೆ. ಇಲಾಖೆಯ ಬಗ್ಗೆ ಸ್ವಲ್ಪ ಅನುಭವ ಇದೆ. ಹಿಂದೆಯೂ ಈ ಇಲಾಖೆಯಲ್ಲಿ ಕೆಲಸ ಮಾಡಿದ್ದೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಅರಿವಿದೆ. ಸಂಸದರ ಜವಾಬ್ದಾರಿ ‌ಇದೆ. ಎಷ್ಟು ಯೋಜನೆಗಳು ಕೇಂದ್ರದ ಯೋಜನೆಯನ್ನಾಗಿ ಮಾಡಲು ಸಾಧ್ಯವಿದೆ ನೋಡಬೇಕಿದೆ. ತುಂಗಭದ್ರಾ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದಾರೆ ಸ್ವಾಗತ. ಯೋಜನೆಗಳ ಗುಣಮಟ್ಟದ ಬಗ್ಗೆ ರಾಜಿ ಇಲ್ಲ. ಭೂಸ್ವಾದೀನದ ಬಗ್ಗೆ ಸೂಚನೆ ನೀಡಲಾಗಿದೆ. ಭ್ರಷ್ಟಾಚಾರ ಹತೋಟಿಗೆ ಬಂದಿದೆ ಎಂದು ಜನರು ಹಾಗೂ ಮತದಾರರ ಭಾವನೆಗೆ ಬರಬೇಕು ಎಂದು ಡಿಕೆಶಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES