ಬೆಂಗಳೂರು : ಟೀಂ ಇಂಡಿಯಾ ಹಾಗೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ನಿನ್ನೆ ಕೊನೆಯ ಐಪಿಎಲ್ ಪಂದ್ಯ ಆಡಿದ್ದ ಸ್ಟಾರ್ ಬ್ಯಾಟರ್ ಅಂಬಟಿ ರಾಯುಡು ಎಲ್ಲಾ ಮಾದರಿಯೆ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಈ ಕುರಿತು ರಾಯುಡು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಗುಜರಾತ್ ವಿರುದ್ಧ ನಡೆದ ಐಪಿಎಲ್ ಫೈನಲ್ ಪಂದ್ಯದ ಗೆಲುವಿನಲ್ಲಿ ಅಂತ್ಯಗೊಂಡ ಭಾವನಾತ್ಮಕ ರಾತ್ರಿಯಾಗಿದೆ. ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನಾನು ಈವರೆಗೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದೇನೆ. ಈ ಎರಡೂ ತಂಡಗಳಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಆರು ಬಾರಿ ಐಪಿಎಲ್ ವಿಜೇತನಾಗಿ ನನ್ನ ವೃತ್ತಿಜೀವನವನ್ನು ಮುಗಿಸಲು ನನಗೆ ಹೆಮ್ಮೆ ಇದೆ ಎಂದು ಭಾವುಕ ಪತ್ರ ಬರೆದಿದ್ದಾರೆ.
ಧೋನಿ ನಾಯಕತ್ವದಲ್ಲಿ ಆಡಿರುವುದೇ ನನ್ನ ಸೌಭಾಗ್ಯ
ಚೆನ್ನೈ ಹಾಗೂ ಟೀಂ ಇಂಡಿಯಾ ತಂಡದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಆಡಿರುವುದು ನನ್ನ ಸೌಭಾಗ್ಯ. ನಾನು ಕಳೆದ ಎರಡು ದಶಕಗಳಲ್ಲಿ ಮೈದಾನದ ಒಳಗೆ ಹಾಗೂ ಹೊರಗಿನ ಹಲವು ಉತ್ತಮ ನೆನಪುಗಳನ್ನು ನೆನಪುಗಳನ್ನು ಹೊಂದಿದ್ದೇನೆ. ಅದು ನನ್ನ ಹೃದಯದಲ್ಲಿ ಸದಾ ಶಾಶ್ವತವಾಗಿ ಉಳಿಯಲಿದೆ ಎಂದು ರಾಯುಡು ಹೇಳಿದ್ದಾರೆ.
— ATR (@RayuduAmbati) May 30, 2023
ಬಿಸಿಸಿಐ(BCCI), ಆಂಧ್ರ ಕ್ರಿಕೆಟ್ ಸಂಸ್ಥೆ (ACA), ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA), ವಿದರ್ಭ ಕ್ರಿಕೆಟ್ ಸಂಸ್ಥೆ (VCA) ಹಾಗೂ ಬರೋಡಾ ಕ್ರಿಕೆಟ್ ಅಸೋಸಿಯೇಷನ್ (BCA) ನನ್ನ ಬಗ್ಗೆ ನಂಬಿಕೆಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನನ್ನ ಕುಟುಂಬ, ಅತೀ ಮುಖ್ಯವಾಗಿ ನನ್ನ ತಂದೆ ಸಾಂಬಶಿವ ರಾವ್ ಅವರ ಬೆಂಬಲವಿಲ್ಲದಿದ್ದರೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಆರಂಭಿಕ ದಿನಗಳಲ್ಲಿನ ತಂಡದ ಸಹ ಆಟಗಾರರು, ಸಹಾಯಕ ಸಿಬ್ಬಂದಿ, ಅಭಿಮಾನಿಗಳು ಹಾಗೂ ತರಬೇತುದಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.