Wednesday, January 22, 2025

ಸಿಡಿಲು ಬಡಿದು ಯುವಕ, ಮಹಿಳೆ ಸಾವು

ಬೆಂಗಳೂರು : ಸಿಡಿಲು ಬಡಿದು ಯುವಕ ಹಾಗೂ ಮಹಿಳೆ ಸಾವನ್ನಪ್ಪಿರುವ ಎರಡು ಘಟನೆ ರಾಜ್ಯದಲ್ಲಿ ನಡೆದಿದೆ. ಸಿಡಿಲಿಗೆ ಯುವಕ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಿಶ್ಯಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದ್ಯಾಮಣ್ಣ ಸಿದ್ದಪ್ಪ ಸೆರೆಕಾರ ಮೃತಪಟ್ಟ ಯುವ ರೈತರಾಗಿದ್ದಾರೆ. ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ದ್ಯಾಮಣ್ಣನಿಗೆ ಸಿಡಿಲು ಬಡಿದು ಸಾವನಪ್ಪಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನೂ ಸಿಡಿಲು ಬಡಿದು ಮಹಿಳೆ ಸಾವನಪ್ಪಿರುವ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ‌ ಬಡಾವಣೆಯಲ್ಲಿ ನಡೆದಿದೆ. ಲಕ್ಷ್ಮೀಬಾಯಿ ಮೃತ ದುರ್ದೈವಿಯಾಗಿದ್ದಾರೆ. ಕುರಿಗಳಿಗೆ ಮೇವು ತರಲು ಹೋದಾಗ ಘಟನೆ ಸಂಭವಿಸಿದೆ.

ಮರದಡಿ ಮೇವು ಆರಿಸುತ್ತಿದ್ದ ವೇಳೆ ಸಿಡಿಲು ಬಡಿದಿದೆ. ವಿನೋಬ ನಗರ ಪೊಲೀಸರಿಂದ ಪ್ರಕರಣ ದಾಖಲಾಗಿದೆ. ಇನ್ನು ಶಿವಮೊಗ್ಗದಲ್ಲಿ ರಾಜಕಾಲುವೆಗೆ ಎಮ್ಮೆ ಬಿದ್ದಿದೆ. ವಿನೋಬ ನಗರದಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ದಳದಿಂದ ಎಮ್ಮೆ ರಕ್ಷಣೆ ಮಾಡಲಾಗಿದೆ. ರಾಜಕಾಲುವೆಯಿಂದ ಸುರಕ್ಷಿತವಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ.

ಇದನ್ನೂ ಓದಿ : ಮೈಸೂರಿನಲ್ಲಿ ಭೀಕರ ಅಪಘಾತ, 10 ಮಂದಿ ದುರ್ಮರಣ

ಹಾಸನದ ವಿವಿಧೆಡೆ ವರುಣನ ಅಬ್ಬರ

ಹಾಸನ ಜಿಲ್ಲೆಯ ವಿವಿಧೆಡೆ ವರುಣ ಅಬ್ಬರಿಸಿದ್ಧಾನೆ. ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಹಾಸನ ನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಭಾರಿಗೆ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು ಹಾಗೂ ವಿದ್ಯಾರ್ಥಿಗಳ ಪರದಾಡುವಂತಾಗಿತ್ತು. ಕಳೆದ ಅರ್ಧ ಗಂಟೆಯಿಂದ ಮಳೆ ಸುರಿದಿದ್ದು, ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ವರುಣ ತಂಪೆರದಿದ್ದಾನೆ. ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

RELATED ARTICLES

Related Articles

TRENDING ARTICLES