Wednesday, April 24, 2024

ಮೇ 29ರವರೆಗೂ ‘ಪವರ್’ ಫರ್ನಿಚರ್ ಎಕ್ಸ್ ಪೋ

ಬೆಂಗಳೂರು : ಒಂದು ಕಡೆ ಭರ್ಜರಿಯಾಗಿ ಕಾಣೋ ಸೋಫಾಗಳು. ಮತ್ತೊಂದು ಕಡೆ ಐಷಾರಾಮಿ ಪೀಠೋಪಕರಣಗಳು. ಎಲ್ಲರನ್ನೂ ಅಟ್ರ್ಯಾಕ್ಟ್‌ ಮಾಡೋ ಡೈನಿಂಗ್ ಟೇಬಲ್. ಹೀಗೆ ನೂರಾರು ಬಗೆಯ ವುಡ್ ವರ್ಕ್ ಒಂದೆಡೆಯಾದ್ರೆ. ಮತ್ತೊಂದು ಕಡೆ ಹೋಮ್ ಡೆಕೋರ್, ಕಾರ್ಪೆಟ್, ವಾಲ್ ಪೇಪರ್ ದಿನ ಬಳಕೆ ವಸ್ತುಗಳು ಮತ್ತೊಂದು ಕಡೆ.

ಹೌದು, ಪವರ್ ಟಿವಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ‘ಪವರ್‌’ ಫರ್ನಿಚರ್ ಎಕ್ಸ್​ಪೋಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಜೆ.ಪಿ.ನಗರದಲ್ಲಿರುವ ಬ್ರಿಗೇಡ್ ಮಿಲೇನಿಯಂ ಹತ್ತಿರ ಇರುವ ಶುಭ್ ಕನ್ವೆನ್ಷನ್‌ ಸೆಂಟರ್‌ ನಲ್ಲಿ ಈ ಎಕ್ಸ್ ಪೋ ನಡೆಯುತ್ತಿದ್ದು, ಸೋಮವಾರವೂ ಮುಂದುವರಿಯಲಿದೆ.

ಅಂದ ಹಾಗೆ ವೀಕೆಂಡ್‌ ಆಗಿದ್ದರಿಂದ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಭಾಗಿಯಾದರು. ತಮ್ಮ ಮನೆಗೆ ಹೊಂದಾಣಿಕೆಯಾಗುವಂತಹ ಪೀಠೋಪಕರಣಗಳು ಸೇರಿ ಹಲವು ವಸ್ತುಗಳನ್ನು ಬುಕ್ ಮಾಡಿಕೊಂಡ್ರು. ಕೆಲವು ಸ್ಟಾಲ್‌ಗಳಲ್ಲಿ 40% ಆಫರ್ ಇದ್ರೆ, ಇನ್ನೂ ಕೆಲವು ಕಡೆ 60 ರಿಂದ 70% ಇತ್ತು. ಹೀಗಾಗಿ ಜನ ಈ ಸುವರ್ಣವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಅಂತ ನಾ ಮುಂದು ತಾ ಮುಂದು ಅಂತಾ ಫರ್ನಿಚರ್‌ಗಳನ್ನು ಬುಕ್ ಮಾಡಿದರು.

ಇದನ್ನೂ ಓದಿ : 2ನೇ ದಿನವೂ ‘ಪವರ್ ಫರ್ನಿಚರ್ ಎಕ್ಸ್ ಪೋ’ಗೆ ಸಖತ್ ರೆಸ್ಪಾನ್ಸ್

ವೆರೈಟಿ ವುಡ್‌ನ ಆಕರ್ಷಕ ಪೀಠೋಪಕರಣ

ಈ ಎಕ್ಸ್‌ಪೋದಲ್ಲಿ 5000 ದಿಂದ 15 ಲಕ್ಷದವರೆಗಿನ ವಸ್ತುಗಳು ಸಿಗುತ್ತಿದ್ದವು. ಮತ್ತೊಂದು ಸ್ಪೆಷಾಲಿಟಿ ಎಂದರೆ ಮಲೇಷಿಯಾ, ಸಿಂಗಾಪುರ, ದುಬೈ ಕಡೆಗೆ ಎಕ್ಸ್ಪೋರ್ಟ್ ಆಗುವಂತಹ ವಸ್ತುಗಳನ್ನು ಕೂಡ ಎಕ್ಸ್‌ಪೋದಲ್ಲಿ ಮಾರಾಟ ಮಾಡಲಾಗುತ್ತಿತ್ತು. ವೆರೈಟಿ ವುಡ್‌ನ ಆಕರ್ಷಕ ಪೀಠೋಪಕರಣಗಳನ್ನು ಖರೀದಿಸಿ ಗ್ರಾಹಕರು ಫುಲ್ ಖುಷ್ ಆದರು.

ಒಟ್ಟಾರೆ, ಒಂದೇ ಸೂರಿನಡಿ ತುಂಬಾ ವೆರೈಟಿ ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದು, ಗುಣಮಟ್ಟದ ಫರ್ನಿಚರ್‌ಗಳು ಸಿಕ್ಕಿದ್ದಕ್ಕೆ ಜನ ತುಂಬಾ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೇವಲ ಒಂದೇ ದಿನ ಬಾಕಿ ಇರೋದ್ರಿಂದ ಯಾರೆಲ್ಲಾ ಪವರ್ ಟಿವಿಯ ಫರ್ನಿಚರ್ ಎಕ್ಸ್ ಪೋಗೆ ಭೇಟಿ ಕೊಟ್ಟಿಲ್ಲ ನೀವು ಇಲ್ಲಿ ಬಂದು ನಿಮಗೆ ಇಷ್ಟವಾದ ಫರ್ನಿಚರ್ ಗಳನ್ನು ಖರೀದಿಸಬಹುದು.

RELATED ARTICLES

Related Articles

TRENDING ARTICLES