ಬೆಂಗಳೂರು : ಐಪಿಎಲ್ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಬಲಿಷ್ಠ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಈ ಹೈವೋಲ್ಟೇಜ್ ಕಾಳಗಕ್ಕೆ ಸಾಕ್ಷಿಯಾಗಲಿದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಉಭಯ ತಂಡಗಳು ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿವೆ.
10ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಎಂ.ಎಸ್ ಧೋನಿ ಸೈನ್ಯ 5ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ. ಇನ್ನೂ ಕಳೆದ ಬಾರಿಗೆ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿರುವ ಹಾರ್ದಿಕ್ ಪಾಂಡ್ಯ ಪಡೆ, ಸತತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಉತ್ಸಾಹದಲ್ಲಿದೆ.
ಚೆನ್ನೈ ಸ್ಟ್ರೆಂಥ್ ಏನು?
ಚೆನ್ನೈ ತಂಡಕ್ಕೆ ಧೋನಿ ಅನುಭವ ಹಾಗೂ ನಾಯಕತ್ವ ದೊಡ್ಡ ಪ್ಲಸ್ ಪಾಯಿಂಟ್. ಇದರ ಜೊತೆಗೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಚೆನ್ನೈ ಬಲಿಷ್ಠವಾಗಿದೆ. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ನಾಯಕ ಧೋನಿ ಹಾಗೂ ರವೀಂದ್ರ ಜಡೇಜಾ ಕೊನೆಯ ಓವರ್ ಗಳಲ್ಲಿ ಅಬ್ಬರಿಸುವ ಮೂಲಕ ಮ್ಯಾಚ್ ಫಿನಿಶ್ ಮಾಡುತ್ತಿದ್ದಾರೆ.
One step away 🎢
Chennai Super Kings and Gujarat Titans have had an eventful journey to #TATAIPL 2023 #Final 💯
As they get ready for the summit clash 🏆, take a look at the Road to the Final of the two teams 👌🏻👌🏻#CSKvGT | @ChennaiIPL | @gujarat_titans pic.twitter.com/Eq6YtwOpZY
— IndianPremierLeague (@IPL) May 27, 2023
ಗುಜರಾತ್ ಸ್ಟ್ರೆಂಥ್ ಏನು?
ಹಾಲಿ ಚಾಂಪಿಯನ್ ಗುಜರಾತ್ ಈ ಆವೃತ್ತಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡಿದೆ. ಲೀಗ್ ಹಂತದಲ್ಲಿ 14 ಪಂದ್ಯ ಆಡಿರುವ ಗುಜರಾತ್ ಕೇವಲ ನಾಲ್ಕು ಪಂದ್ಯ ಸೋತು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಪಾಂಡ್ಯ ಪಡೆ ಬಲಿಷ್ಠವಾಗಿದೆ. ಆರಂಭಿಕ ಬ್ಯಾಟರ್ ಸಾಹ, ಶುಭಮನ್ ಗಿಲ್ ಸ್ಫೋಟಕ ಪ್ರದರ್ಶನ ಗುಜರಾತ್ ಪ್ಲಸ್ ಪಾಯಿಂಟ್. ನಾಯಕ ಪಾಂಡ್ಯ, ಮಿಲ್ಲರ್, ವಿಜಯ್ ಶಂಕರ್, ತೇವಾಟಿಯ, ರಶೀದ್ ಖಾನ್ ಆರ್ಭಟಿಸಿದರೆ ಗುಜರಾತ್ ಗೆಲುವು ಪಕ್ಕಾ. ಬೌಲಿಂಗ್ ನಲ್ಲಿ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ಕಮಾಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ : ರೆಕಾರ್ಡ್ ಲೈಕ್ಸ್ ಮೀ.. : IPLನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ತಲಾ ಧೋನಿ!
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಎಂ.ಎಸ್ ಧೋನಿ(ನಾಯಕ/ವಿ.ಕೀ), ಋತುರಾಜ್ ಗಾಯಕ್ವಾಡ್, ಕಾನ್ವೆ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಗುಜರಾತ್ ಟೈಟಾನ್ಸ್ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ(ವಿ.ಕೀ), ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ವಿಜಯ್ ಶಂಕರ್