Saturday, November 2, 2024

ಚೆನ್ನೈಗೆ ಬಿಗ್ ಶಾಕ್ : ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು

ಬೆಂಗಳೂರು : ಚೆನ್ನೈ ಹಾಗೂ ಗುಜರಾತ್ ಫೈನಲ್ ಪಂದ್ಯಕ್ಕೂ ಮುನ್ನವೇ ಚೆನ್ನೈ ಅಭಿಮಾನಿಗಳಿಗೆ ಅಂಬಟಿ ರಾಯುಡು ಬಿಗ್ ಶಾಕ್ ನೀಡಿದ್ದಾರೆ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಅಂಬಟಿ ರಾಯುಡು ಐಪಿಎಲ್ ನಿಂದ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಗುಜರಾತ್ ಟೈಟಾನ್ಸ್ ವಿರುದ್ಧದ ಇಂದಿನ ಐಪಿಎಲ್ ಪಂದ್ಯವೇ ನನ್ನ ಕೊನೆ ಪಂದ್ಯ ಎಂದು ಖಚಿತಪಡಿಸಿದ್ದಾರೆ. ಎಲ್ಲರಿಗೂ ಧನ್ಯವಾದ. ನೋ ಯು ಟರ್ನ್ ಎಂದು ಅಂಬಟಿ ರಾಯುಡು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

204 ಪಂದ್ಯ, 11 ಪ್ಲೇಆಫ್‌, 8 ಫೈನಲ್‌, 5 ಟ್ರೋಫಿ

ಐಪಿಎಲ್ ನಲ್ಲಿ ಚೆನ್ನೈ ಹಾಗೂ ಮುಂಬೈ ತಂಡವನ್ನು ಪ್ರತಿನಿಧಿಸಿದ್ದೇನೆ. ಈವರೆಗೆ 204 ಪಂದ್ಯಗಳು, 14 ಸೀಸನ್‌ಗಳನ್ನು ಆಡಿದ್ದು 11 ಪ್ಲೇಆಫ್‌ ಪಂದ್ಯ ಆಡಿದ್ದೇನೆ. 8 ಫೈನಲ್‌ ಗಳು, 5 ಟ್ರೋಫಿಗಳು. ಇದೀಗ ಕೊನೆಯ ಐಪಿಎಲ್ ಫೈನಲ್ ಪಂದ್ಯ ಆಡುತ್ತಿದ್ದೇನೆ. ಗುಜರಾತ್ ವಿರುದ್ಧದ ಫೈನಲ್ ಐಪಿಎಲ್‌ ನಲ್ಲಿ ನನ್ನ ಕೊನೆಯ ಪಂದ್ಯವಾಗಲಿದೆ ಎಂದು ಹೇಳಿದ್ದಾರೆ.

ನಿವೃತ್ತಿ ಘೋಷಿಸಿದ ತಮಗೆ ಅಭಿನಂದನೆ

ಅಂಬಟಿ ರಾಯುಡು ಐಪಿಎಲ್ ಗೆ ನಿವೃತ್ತಿ ಘೋಷಿಸಿರುವುದಕ್ಕೆ ಚೆನ್ನೈ ತಂಡ ಪ್ರತಿಕ್ರಿಯಿಸಿದೆ. ನಿಮ್ಮ ವೇಗದ ಬ್ಯಾಟಿಂಗ್ ನಮಗೆ ಖುಷಿ ನೀಡಿದೆ. ನಿಮಗೆ ಧನ್ಯವಾದಗಳು. ಇಂದು ನಿವೃತ್ತಿ ಘೋಷಿಸಿದ ತಮಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದೆ.

ಇನ್ನೂ, ಅಭಿಮಾನಿಗಳು ‘ಹಳದಿ ಡ್ರೆಸ್ ನಲ್ಲಿ ನಿಮ್ಮ ಆಟವನ್ನು ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಜೀವನ ಸುಖಕರವಾಗಿರಲಿ’ ಎಂದು ಕಾಮೆಂಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES