ಬೆಂಗಳೂರು : ರಾಮನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಜಿಲ್ಲೆಯ ರೌಡಿ ಶೀಟರ್ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ತಡರಾತ್ರಿ ದಾಳಿ ನಡೆಸಿದ ಪೊಲೀಸರು ರೌಡಿಶೀಟರ್ಗಳ ಮನೆಗಳನ್ನ ತಪಾಸಣೆ ನಡೆಸಿದ್ದಾರೆ. ಪೊಲೀಸರು ಮನೆಯಲ್ಲಿ ಇಂಚಿಂಚು ಸರ್ಚ್ ಮಾಡಿದ್ದಾರೆ. ಬೆಂಗಳೂರು ಪಕ್ಕದಲ್ಲಿರುವ ತಾವರೆಕೆರೆ, ಕುಂಬಳಗೂಡು, ಕಗ್ಗಲೀಪುರ, ಹಾರೋಹಳ್ಳಿ, ಬಿಡದಿ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿ ರೌಡಿಗಳಿಗೆ ಚಳಿ ಬಿಡಿಸಿದ್ದಾರೆ.
ರೌಡಿಶೀಟರ್ಗಳ ಸಂಪೂರ್ಣ ಮಾಹಿತಿ ಕಲೆಹಾಕಿದ ಪೊಲೀಸರು, ಅಕ್ರಮ ಹಣ, ಮಾರಕಾಸ್ತ್ರಗಳನ್ನು ಸಂಗ್ರಹಿಸಿದ್ದಾರಾ ಎಂದು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಕೆಲ ರೌಡಿಗಳ ಸಂಪರ್ಕದಲ್ಲಿರುವ ಜಿಲ್ಲೆಯ ರೌಡಿಶೀಟರ್ಗಳಿಗೆ ಪೊಲೀಸರು ವಾರ್ನ್ ಮಾಡಿದ್ದಾರೆ. ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಪೊಲೀಸ್ ಕಮಿಷನರ್ ಯಾರಾಗ್ತಾರೆ? : ರೇಸ್ ನಲ್ಲಿ ಯಾರೆಲ್ಲಾ ಇದಾರೆ ಗೊತ್ತಾ?
ಬೆಂಗಳೂರು ಪೊಲೀಸರಿಗೆ ಹೊಸ ಟಾಸ್ಕ್
ರಾಜ್ಯ ರಾಜಧಾನಿ ಪೊಲೀಸರಿಗೆ ನೂತನ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್ ಅವರು ಹೊಸ ಟಾಸ್ಕ್ ಕೊಟ್ಟಿದ್ದಾರೆ. ಬೆಂಗಳೂರು ಸಿಟಿಗೆ ರಿವ್ಯೂ ಮಾಡಿದ್ದೇವೆ. ರೌಡಿ ಆಕ್ಟವಿಟಿ ಝೀರೋ ಟೋಲೋರೆಂಟ್ ಆಗಬೇಕು. ಡ್ರಗ್ಸ್ ಬಗ್ಗೆ ಹೊಸ ಸ್ಟ್ರಾಟರ್ಜಿ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಜನಸ್ನೇಹಿ ಪೊಲೀಸಿಂಗದ ಆಗಬೇಕು. ಜನರ ಜೊತೆ ಬಿಹೇವಿಯರ್ ಸರಿ ಮಾಡಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.