ತುಮಕೂರು : ಈಗ ನಾಲ್ಕುವರೆ ವರ್ಷ ಗೇಮ್ ನಮ್ಮದು.. ನಾವು ಆಡ್ತೀವಿ, ನೀವು ಆಡಿಸಿಕೊಳ್ಳಿ ಎಂದು ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಅವರು ಶಾಸಕ ಬಿ. ಸುರೇಶ್ ಗೌಡ ಅವರಿಗೆ ಟಕ್ಕರ್ ಕೊಟ್ಟಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳಗೆರೆ ನಿವಾಸದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಕೆಲಸದ ಮೇಲೆ ಹೊರಗಡೆ ಹೋಗಿದ್ದೆ. ನಿಮಗೆ ಬೇಸರ ಆಗಿದೆ, ನನಗೆ ಗೊತ್ತು. ಸೋಲು, ಗೆಲುವು ಎರಡು ಸಹಜ. ನಾನು ಯಾವಾಗಲೂ ನಿಮ್ಮೊಂದಿಗೆ ಇರ್ತೇನೆ. ನಾನು ಎಲ್ಲಿಗೂ ಹೋಗೋಲ್ಲ ಎಂದು ಕಾರ್ಯಕರ್ತರಿಗೆ ಡಿ.ಸಿ ಗೌರಿಶಂಕರ್ ಉತ್ಸಾಹ ತುಂಬುವ ಮಾತುಗಳನ್ನಾಡಿದ್ದಾರೆ.
ಕಾಂಗ್ರೆಸ್ ಗೆ ಹೋಗೋಣ ಅಂದ್ರು
ಇಲ್ಲೇ ಹುಟ್ಟು ಬೇಕು, ಇಲ್ಲೇ ಬೆಳೆಯಬೇಕು. ಇಲ್ಲೇ ಅಧಿಕಾರ ಪಡೆಯಬೇಕು. ಕೆಲವರು ಕಾಂಗ್ರೆಸ್ ಗೆ ಹೋಗೋಣ ಅಂದ್ರು. ಆದ್ರೆ, ಕೆಲವರು ನೀವೇ ಕುಮಾರಣ್ಣನ ಶಕ್ತಿ ಅಂದ್ರು. ಅಧಿಕಾರ ಸಿಕ್ಕಿದೆ ಅಂತಾ ಪಕ್ಷ ಬದಲಾವಣೆ ಮಾಡೋದು ಬೇಡ. ಅಲ್ಲಿ ಉಪಯೋಗ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಉಚಿತ ಗ್ಯಾರಂಟಿ ಜಾರಿಯಾಗದಿದ್ರೆ ಹೋರಾಟ ಮಾಡುತ್ತೇವೆ : ನಳಿನ್ ಕುಮಾರ್ ಕಟೀಲ್
ನಾವು ಆಡ್ತೀವಿ, ನೀವು ಆಡಿಸಿಕೊಳ್ಳಿ
ನಾಲ್ಕು ಮುಕ್ಕಾಲು ವರ್ಷ ಶಾಸಕ ಬಿ.ಸುರೇಶ್ ಗೌಡ ನನಗೆ ಯಾವ ರೀತಿ ಚಿತ್ರ ಹಿಂಸೆ ಕೊಟ್ರಲ್ಲಾ.. ಅಭಿವೃದ್ಧಿ ಮಾಡೋಕೆ ಹೋದಾಗ ತಡೆ ಇಡಿದ್ರಿ. ಕೋರ್ಟ್ ವಿಚಾರದಲ್ಲಿ ಬಹಳಷ್ಟು ಆಟ ಆಡಿದ್ರಿ, ಅಧಿಕಾರಿಗಳು, ಪೊಲೀಸ್ ಇಟ್ಟುಕೊಂಡು ಆಟ ಆಡಿದ್ರಿ. ನನ್ನ ಕಾರ್ಯಕರ್ತರ ಮೇಲೆ ಎಲ್ಲಾ ತರದ ಆಟ ಆಡಿದ್ರಿ. ಈಗ ನಾಲ್ಕುವರೆ ವರ್ಷ ಗೇಮ್ ನಮ್ಮದು.. ನಾವು ಆಡ್ತೀವಿ, ನೀವು ಆಡಿಸಿಕೊಳ್ಳಿ ಎಂದು ಟಕ್ಕರ್ ಕೊಟ್ಟಿದ್ದಾರೆ.
ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ
ನನಗೆ ನಿಮ್ಮೆಲ್ಲರ ಸಹಕಾರ ಬೇಕು. ಈ ನೋವು ದುಃಖ ಎಲ್ಲಾ ತೆಗೆದುಹಾಕಿ ಬಿಡಿ. ನಿಮ್ಮ ಜೊತೆ ನಾನು ಇರ್ತೀನಿ. ಆಡಿದ್ದೀವಿ, ಸೋತಿದ್ದೀವಿ. ಮತ್ತೆ ಆಡೋಣ ಬಿಡಿ. ಈಗಾಗಲೇ ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ ನವರಲ್ಲೇ ಅಸಮಾಧಾನ ಉಂಟಾಗ್ತಿದೆ. ಇನ್ನೂ ಮೂರು ತಿಂಗಳಲ್ಲಿ ಏನೇನು ಆಗುತ್ತೆ ಅಂತಾ ನೋಡೋಣ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಡಾ.ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.