Sunday, December 22, 2024

ಮುಂದಿನ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಈಡೇರಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಂದಿನ ಕ್ಯಾಬಿನೆಟ್ ನಲ್ಲಿ ನಾವು ಘೋಷಿಸಿದ್ದ ಐದು ಉಚಿತ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನ ನಮಗೆ ಬೆಂಬಲ ನೀಡಿದ್ದಾರೆ. ನಾವು ಕೊಟ್ಟಿರುವ ಭರವಸೆ ಈಡೇರಿಸಬೇಕು ಎಂದು ಹೇಳಿದ್ದಾರೆ.

ಉಚಿತ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ವಿಪಕ್ಷಗಳು ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಆದರೆ, ನಾವು ಎಲ್ಲ ಭರವಸೆ ಈಡೇಸುತ್ತೇವೆ. ಎಲ್ಲ ಅಂಕಿ ಅಂಶ ಪಡೆಯುತ್ತಿದ್ದೇವೆ. ಮುಂದಿನ ಕ್ಯಾಬಿನೆಟ್ ನಲ್ಲಿ ಐದು ಭರವಸೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಉಚಿತ ಗ್ಯಾರಂಟಿ ಜಾರಿಯಾಗದಿದ್ರೆ ಹೋರಾಟ ಮಾಡುತ್ತೇವೆ : ನಳಿನ್ ಕುಮಾರ್ ಕಟೀಲ್

ಮೊದಲ ಬಾರಿ ಗೆದ್ದವರಿಗೆ ಮಂತ್ರಿ ಮಾಡಿಲ್ಲ

ಇವತ್ತು ಅಥವಾ ನಾಳೆ ಖಾತೆ ಹಂಚಿಕೆ ಮಾಡ್ತೀವಿ. ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ್ದೇವೆ. ಮುಖ್ಯಮಂತ್ರಿ ಬಿಟ್ಟು 33 ಮಂದಿ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದ್ದೇವೆ. ಮೊದಲ ಬಾರಿ ಗೆದ್ದವರಿಗೆ ಮಂತ್ರಿ ಮಾಡಿಲ್ಲ. ಮೂರು ಬಾರಿ, ನಾಲ್ಕನೇ ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಮಾಧಾನ, ಅಸಮಾಧಾನ ಇರೋದೆ

ಕೆಲವು ಮಾನದಂಡದ ಮೇಲೆ ಸಂಪುಟ ರಚಿಸಿದ್ದೇವೆ. ಹೊಸ ಮುಖ, ಹಿರಿಯರು ಎಲ್ಲರನ್ನೂ ಸೇರಿಸಿ ಸಚಿವ ಸಂಪುಟ ಮಾಡಿದ್ದೇವೆ. ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಕೊಟ್ಟಿಲ್ಲ, ಹಾಸನಕ್ಕೂ ಕೊಟ್ಟಿಲ್ಲ, ಚಿಕ್ಕಮಗಳೂರಿಗೆ ಕೊಟ್ಟಿಲ್ಲ, ಹಾವೇರಿಗೂ ಕೊಟ್ಟಿಲ್ಲ. ಹೊಸಬರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಸಮಾಧಾನ, ಅಸಮಾಧಾನ ಇರೋದೆ. ಅಸಮಾಧಾನದ ಜೊತೆ ಸಮಾಧಾನ ಇದೆ. ಎಲ್ಲರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES