Monday, December 23, 2024

24 ನೂತನ ಸಚಿವರ ಅಧಿಕೃತ ಪಟ್ಟಿ ಬಿಡುಗಡೆ : ಯಾರಿಗೆಲ್ಲಾ ಸಚಿವ ಸ್ಥಾನ?

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ನೂತನ ಸಚಿವರ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ.

ಸಿಎಂ ಸಿದ್ದರಾಮಯ್ಯ ಬಣದ 9 ಶಾಸಕರಿಗೆ ಮಂತ್ರಿಗಿರಿ ಲಭಿಸಿದೆ. ಚಲುವರಾಯಸ್ವಾಮಿ, ಡಾ.ಹೆಚ್​.ಸಿ ಮಹದೇವಪ್ಪ, ಬೈರತಿ ಸುರೇಶ್​, ಕೃಷ್ಣಬೈರೇಗೌಡ, ಹೆಚ್​.ಕೆ ಪಾಟೀಲ್​, ಸಂತೋಷ್​ ಲಾಡ್, ಶಿವರಾಜ ತಂಗಡಗಿ, ದಿನೇಶ್ ​ಗುಂಡೂರಾವ್​, ಕೆ.ಎನ್ ರಾಜಣ್ಣಗೆ ಸಚಿವ ಸ್ಥಾನ ಒಲಿದಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಹಲವು ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಎನ್‌.ಎ.ಹ್ಯಾರಿಸ್, ಕುಣಿಗಲ್ ಶಾಸಕ ರಂಗನಾಥ್‌ ಅವರಿಗೆ ಮಂತ್ರಿಗಿರಿ ಮಿಸ್ ಆಗಿದೆ. ಮಾಗಡಿ ಬಾಲಕೃಷ್ಣಗೂ ಮಿನಿಸ್ಟರ್ ಭಾಗ್ಯ ಕೈತಪ್ಪಿದೆ. ಸಚಿವರ ಪಟ್ಟಿಯಲ್ಲಿ ಅಚ್ಚರಿಯ ಹೆಸರೊಂದು ಘೋಷಣೆಯಾಗಿದ್ದು, ರಾಯಚೂರು ಭಾಗದ ಬೋಸರಾಜುಗೆ ಮಂತ್ರಿಗಿರಿ ಲಭಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬೆಂಬಲಿಗರಿಗೆ ಮಂತ್ರಿಗಿರಿ ಕೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಶಾಸಕ ಡಾ.ಶರಣಪ್ರಕಾಶ್ ಪಾಟೀಲ್, ರಹೀಂ ಖಾನ್‌ ಗೆ ಸಚಿವ ಸ್ಥಾನ ಕೊಡಿಸುವ ಮೂಲಕ ತಮ್ಮ ಆಪ್ತರಿಗೆ ಖರ್ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ : ದಯವಿಟ್ಟು RSS ಬ್ಯಾನ್ ಮಾಡಲಿ, ಆಮೇಲೆ ನೋಡಲಿ : ಬೊಮ್ಮಯಿ ಸವಾಲ್

ಇವರಿಗೆಲ್ಲ ಮಂತ್ರಿಗಿರಿ ಮಿಸ್

ಸಚಿವ ಸ್ಥಾನದ ಕನಸು ಕಾಣುತಿದ್ದ ಹಿರಿಯ ನಾಯಕರು ಸೇರಿದಂತೆ ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ನಡೆಸುತ್ತಿದ್ದ ಹಲವರಿಗೆ ಬಿಗ್ ಶಾಕ್​ ನೀಡಲಾಗಿದೆ. ಟಿ.ಬಿ.ಜಯಚಂದ್ರ, ಆರ್​.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ, ವಿಜಯನಗರ ಶಾಸಕ ಕೃಷ್ಣಪ್ಪ, ಅಜಯ್​ ಸಿಂಗ್, ರಾಘವೇಂದ್ರ ಹಿಟ್ನಾಳ್​, ತುಕಾರಾಂ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ ಮಿಸ್ ಆಗಿದೆ.

ಜಾತಿವಾರು ಮಂತ್ರಿಗಿರಿ

ಲಿಂಗಾಯತ ಸಮುದಾಯ : 09 ಸಚಿವರು

ಎಸ್ಸಿ, ಎಸ್ಟಿ ಸಮುದಾಯ : 09 ಸಚಿವರು

ಹಿಂದುಳಿದ ವರ್ಗ (OBC) :06

ಒಕ್ಕಲಿಗ ಸಮುದಾಯ : 04

ಅಲ್ಪಸಂಖ್ಯಾತ ಸಮುದಾಯ : 04

ಬ್ರಾಹ್ಮಣ ಸಮುದಾಯ : 01

ಜೈನ ಸಮುದಾಯ : 01

ಸಿದ್ದು ಸಂಪುಟದ ಹೊಸ ಸಚಿವರು

ಹೆಚ್​.ಕೆ ಪಾಟೀಲ್​ : ಗದಗ

ಕೃಷ್ಣಬೈರೇಗೌಡ : ಬ್ಯಾಟರಾಯನಪುರ

ಎನ್​. ಚಲುವರಾಯಸ್ವಾಮಿ :  ನಾಗಮಂಗಲ

ಕೆ.ವೆಂಕಟೇಶ್ : ಪಿರಿಯಾಪಟ್ಟಣ

ಡಾ.ಹೆಚ್​ ಸಿ.ಮಹದೇವಪ್ಪ : ಟೀ.ನರಸೀಪುರ

ಈಶ್ವರ್ ಖಂಡ್ರೆ : ಭಾಲ್ಕಿ

ಕೆ.ಎನ್​ ರಾಜಣ್ಣ : ಮಧುಗಿರಿ

ದಿನೇಶ್​ ಗುಂಡೂರಾವ್ : ಗಾಂಧಿನಗರ

ಶರಣ ಬಸಪ್ಪ ದರ್ಶನಾಪುರ : ಶಹಾಪುರ

ಶಿವಾನಂದ್ ಪಾಟೀಲ್​ : ಬಸವನ ಬಾಗೇವಾಡಿ

ಎಸ್​.ಎಸ್​ ಮಲ್ಲಿಕಾರ್ಜುನ್​ : ದಾವಣಗೆರೆ ಉತ್ತರ

ಆರ್​.ಬಿ ತಿಮ್ಮಾಪುರ್ : ಮುಧೋಳ

ಶಿವರಾಜ ತಂಗಡಗಿ : ಕನಕಗಿರಿ

ಡಾ.ಶರಣ ಪ್ರಕಾಶ್​ ಪಾಟೀಲ್ : ಸೇಡಂ

ಮಂಕಾಳು ವೈದ್ಯ : ಭಟ್ಕಳ

ಲಕ್ಷ್ಮಿ ಹೆಬ್ಬಾಳ್ಕರ್​ : ಬೆಳಗಾವಿ ಗ್ರಾಮಾಂತರ

ರಹೀಂಖಾನ್​ : ಬೀದರ್​

ಡಿ.ಸುಧಾಕರ್ : ಹಿರಿಯೂರು

ಸಂತೋಷ್​ ಲಾಡ್​ : ಕಲಘಟಗಿ

ಎನ್​.ಎಸ್​ ಬೋಸರಾಜು : ಮಾನ್ವಿ ಮಾಜಿ ಶಾಸಕ

ಬೈರತಿ ಸುರೇಶ್ : ಹೆಬ್ಬಾಳ

ಮಧು ಬಂಗಾರಪ್ಪ : ಸೊರಬ

ಡಾ.ಎಂ.ಸಿ ಸುಧಾಕರ್ : ​ಚಿಂತಾಮಣಿ

ಬಿ.ನಾಗೇಂದ್ರ : ಬಳ್ಳಾರಿ ಗ್ರಾಮಾಂತರ

ಯಾವ ಜಾತಿಗೆ ಎಷ್ಟು ಸಚಿವ ಸ್ಥಾನ

ಲಿಂಗಾಯತ 6, ಒಕ್ಕಲಿಗ 4, ಪರಿಶಿಷ್ಟ ಪಂಗಡ 2, ಪರಿಶಿಷ್ಟ ಜಾತಿ 1, ಕುರುಬ 1, ಈಡಿಗ 1, ಜೈನ್ 1, ಮರಾಠ 1, ಮುಸ್ಲಿಂ 1, ಬ್ರಾಹ್ಮಣ 1, ಮೊಗೇರ 1, ಬೋವಿ 1, ರಾಜು ಸಮುದಾಯ 1, ನಾಮಧಾರಿ ರೆಡ್ಡಿ 1 ಸಮುದಾಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಭಾಗ್ಯ ನೀಡಿದೆ.

RELATED ARTICLES

Related Articles

TRENDING ARTICLES