Sunday, December 22, 2024

ದಯವಿಟ್ಟು RSS ಬ್ಯಾನ್ ಮಾಡಲಿ, ಆಮೇಲೆ ನೋಡಲಿ : ಬೊಮ್ಮಯಿ ಸವಾಲ್

ಬೆಂಗಳೂರು : ಕಾಂಗ್ರೆಸ್ ನವರು ಆರ್.ಎಸ್.ಎಸ್ ಬ್ಯಾನ್ ಮಾಡಿ ಆಮೇಲೆ ನೋಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲ್ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಆರ್.ಎಸ್.ಎಸ್ ಬ್ಯಾನ್ ಮಾಡುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇವರು ಬ್ಯಾನ್ ಮಾಡ್ತೀವಿ ಅಂತ ಯಾರಿಗೆ ಹೇಳ್ತಿದ್ದಾರೆ. ದಯವಿಟ್ಟು ಅವರು ಆರ್.ಎಸ್.ಎಸ್ ಬ್ಯಾನ್ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಅವರಿಗೆ ಸವಾಲ್ ಹಾಕುವೆ. ದಯವಿಟ್ಟು ಬ್ಯಾನ್ ಮಾಡ್ಲಿ, ಆಮೇಲೆ ನೋಡಲಿ. ಇದು ತೃಷ್ಟಿಕರಣ ರಾಜಕೀಯ. ಆದ್ರೆ ಅವರಿಗೂ ಇವರು ಯಾಮರಿಸುಯತ್ತಿದ್ದಾರೆ. ಸಿದ್ದರಾಮಣ್ಣನಿಗೆ ನಾನು ಒಂದು ಮಾತನ್ನು ಕೇಳ್ತಿನಿ. ನೀವು ಮೊದಲು ಇದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ಡಬಲ್ ಸ್ಟೇರಿಂಗ್ ಸರ್ಕಾರದಲ್ಲಿ ಸಿಎಂ ಸೈಲೆಂಟ್ ಡಿಸಿಎಂ ವೈಲೆಂಟ್ ; ಆರ್. ಅಶೋಕ್ ಕಿಡಿ

ಜನವಿರೋಧಿ ಸರ್ಕಾರ ಆಗಲಿದೆ

ಮಾಜಿ ಸಚಿವ ಅಶ್ವತ್ಥನಾರಾಯಣ ಹಾಗೂ ಹರೀಶ್ ಪೂಂಜಾ ಮೇಲೆ ಕೇಸ್ ಹಾಕಿದ್ದಾರೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ಇದೆ. ರಾಜಕೀಯ ಟೀಕೆ ಮಾಡಿದ್ದಕ್ಕೂ ಕೇಸ್, ಕಾಂಗ್ರೆಸ್ ಕೆಲಸ ಮಾಡಿಲ್ಲ ಅಂದ್ರೆ ಕೇಸ್. ಇದು ದುರಹಂಕಾರದ ಆಡಳಿತ. ಧಮನಕಾರಿ ಆಡಳಿತ. ಜನರನ್ನು ಭಯಪಡಿಸಿ ಆಡಳಿತ ಮಾಡ್ತೇವೆ ಎನ್ನುವ ಭ್ರಮೆ. ಹೀಗೆ ಆದ್ರೆ, ಜನವಿರೋಧಿ ಸರ್ಕಾರ ಆಗಲಿದೆ ಎಂದು ಕಿಡಿಕಾರಿದ್ದಾರೆ.

ನೂತನವಾಗಿ ಸರ್ಕಾರ ರಚನೆ ಆಗಿದೆ. ಈ ಸಚಿವರು ಮಾತಾಡೋದು ನೋಡಿದ್ರೆ ರಾಜ್ಯದ ಹಿತದೃಷ್ಟಿ, ಜನರಿಗೆ ಏನು ಮಾಡ್ತಿವಿ ಅಂತ ಹೇಳಿದ್ರೋ ಅದನ್ನು ಬಿಟ್ಟು ದ್ವೇಷದ ಸೇಡಿನ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಅವರು ಏನೇ ಮಾಡಿದ್ರು ನಾವು ಸಿದ್ದರಿದ್ದೇವೆ. ತನಿಖೆ ಮಾಡಿದ್ರು ಎದುರಿಸಲು ಸಿದ್ದರಿದ್ದೇವೆ. ಇದನ್ನು ಸಮರ್ಥವಾಗಿ ಎದುರಿಸುತ್ತೇವೆ. ಈ ಕಾರ್ಯವನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES