Wednesday, January 22, 2025

ಇಂದಿರಾ ಕ್ಯಾಂಟೀನ್ ಗೆ ಹೊಸ ಲುಕ್ ನೀಡಲಾಗುತ್ತದೆ : ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು : ಇಂದಿರಾ ಕ್ಯಾಂಟೀನ್ ಗಳು ಇನ್ನೇನು ಮುಚ್ಚೇ ಹೋದ್ವು ಅನ್ನೋ ಹಂತಕ್ಕೆ ಬಂದಿದ್ದವು. ಅಲ್ಲೋ, ಇಲ್ಲೋ ಒಂದೆರಡು ಕ್ಯಾಂಟೀನ್ ಗಳು ನಡೆಯುತ್ತಿದ್ದವು. ಆದ್ರೆ, ಇದೀಗ ಇಂದಿರಾ ಕ್ಯಾಂಟೀನ್ ಗೆ ಮರುಜೀವ ಬಂದಿದ್ದು ಸಚಿವ ರಾಮಲಿಂಗ ರೆಡ್ಡಿ ಇಂದಿರಾ ಕ್ಯಾಂಟೀನ್ ಪರಿಶೀಲನೆ ನಡೆಸಿದರು.

ಹೌದು, ಇಂದಿರಾ ಕ್ಯಾಂಟೀನ್ ಯೋಜನೆ.‌ ಇದು ಸಿಎಂ ಸಿದ್ದರಾಮಯ್ಯನವರ ಕನಸಿನ ಕೂಸು. ಆದ್ರೆ, ಕಳೆದ ನಾಲ್ಕು ವರ್ಷಗಳಿಂದ ಈ ಇಂದಿರಾ ಕ್ಯಾಂಟೀನ್ ಕಳೆಗುಂದಿತ್ತು. ಜನ ಬರ್ತಿಲ್ಲ, ಊಟಕ್ಕೆ ಬೇಡಿಕೆ ಇಲ್ಲ ಅನ್ನೋ ಕಾರಣ ನೀಡಿ ಬಿಜೆಪಿ ಸರ್ಕಾರ ಹಲವು ಇಂದಿರಾ ಕ್ಯಾಂಟೀನ್ ಮುಚ್ಚಿತ್ತು. ಆದ್ರೆ, ಈಗ ‌ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದು, ಇಂದಿರಾ ಕ್ಯಾಂಟಿನ್​ಗಳು ರೀಓಪನ್ ಆಗಿವೆ.‌

ಈ ಹಿನ್ನೆಲೆ ಇಂದಿರಾ ಕ್ಯಾಂಟೀನ್​ಗಳ  ಕಾರ್ಯ ನಿರ್ವಹಣೆ ಹಾಗೂ ಆಹಾರ ವ್ಯವಸ್ಥೆ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಪರಿಶೀಲನೆ ನಡೆಸಿದರು.‌ ನಗರದ ಬನ್ನಪ್ಪ ಪಾರ್ಕ್ ಹಡ್ಸನ್ ವೃತ್ತದ ಬಳಿಯ ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡಿ ಕ್ಯಾಂಟೀನ್ ಕಾರ್ಯವೈಖರಿ ವೀಕ್ಷಿಸಿದರು.

ನಿರ್ವಹಣೆ ಮಾಡದೇ ಮುಚ್ಚಿ ಹೋಗಿದ್ದವು

ಬಳಿಕ‌ ಪವರ್ ಟಿವಿಯೊಂದಿಗೆ ಮಾತನಾಡಿದ ರಾಮಲಿಂಗ ರೆಡ್ಡಿ, ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಆರಂಭ ಮಾಡಿದ್ದೆವು. ಬಿಜೆಪಿ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡದೇ ಮುಚ್ಚಿ ಹೋಗಿದ್ದವು. ಈಗ ಮತ್ತೆ ಆರಂಭವಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಗೆ ಸಂಕಷ್ಟ

ಮೆನು‌ ಕೂಡ ಅಪ್ಡೇಟ್ ಆಗಲಿದೆ

ಸಿಎಂ ಸೂಚನೆಯಂತೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​ಗಳು ಮತ್ತೆ ಆರಂಭವಾಗಿದ್ದು, ಕೆಲ ದಿನಗಳ ಬಳಿಕ ಹೊಸ ಲುಕ್​ನಲ್ಲಿ ಕಂಗೊಳಿಸಲಿವೆ.‌ ಸದ್ಯ ಐದು ರೂಪಾಯಿಗೆ ತಿಂಡಿ ಹಾಗೂ ಹತ್ತು ರೂಪಾಯಿಗೆ ಊಟ ಸಿಗ್ತಾಯಿದ್ದು, ಮೆನು‌ ಕೂಡ ಅಪ್ಡೇಟ್ ಆಗಲಿದೆ. ನೀರಿನ ಸಮಸ್ಯೆ ಎದುರಾಗಿದ್ದು, ರೀ ಓಪನ್ ಬಳಿಕ ಅದನ್ನ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ವಚ್ಚತೆ, ಊಟ, ಟೋಕನ್ ಎಲ್ಲವನ್ನೂ ನಿರ್ವಹಣೆ ಮಾಡಲು ಸರ್ಕಾರ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದ್ರೆ ಒಳ್ಳೆಯದು ಎಂದು ತಿಳಿಸಿದರು.

ಸಚಿವ ರಾಮಲಿಂಗ ರೆಡ್ಡಿ ತಪಾಸಣೆಗೆ ಮಾಜಿ ಮೇಯರ್ ಪದ್ಮಾವತಿ ಕೂಡ ಸಾಥ್​ ನೀಡಿ ಬಿಜೆಪಿ ವಿರುದ್ದ ಅಸಮಾಧಾನ ಹೊರ ಹಾಕಿದರು. ಒಟ್ಟಿನಲ್ಲಿ ಮುಚ್ಚಿ ಹೋಗಿದ್ದ ಇಂದಿರಾ ಕ್ಯಾಂಟೀನ್​ಗಳು ಮತ್ತೆ ಓಪನ್ ಆಗಿದ್ದು ಬಡವರ ಹಸಿವು ನೀಗಿಸುತ್ತಿವೆ.‌ ಈ ಇಂದಿರಾ ಕ್ಯಾಂಟೀನ್ ಯೋಜನೆ ಹೀಗೆ ಮುಂದುವರೆಯಲಿ ಎಂಬುದೇ ಲಕ್ಷಾಂತರ ಬಡವರ, ಶ್ರಮಿಕ‌ ವರ್ಗದವರ ಬೇಡಿಕೆಯಾಗಿದೆ.

RELATED ARTICLES

Related Articles

TRENDING ARTICLES