ಬೆಂಗಳೂರು : ಪವರ್ ಟಿವಿ ಪ್ರಾಯೋಜಕತ್ವದಲ್ಲಿ ಫರ್ನಿಚರ್ಸ್ ಎಕ್ಸ್ಪೋ ಆಯೋಜಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಾಲ್ಕು ದಿನಗಳ ನಡೆಯಲಿರೋ ಈ ಮೇಳದಲ್ಲಿ ಸಾಕಷ್ಟು ಜನ ಭೇಟಿಕೊಟ್ಟು ತಮ್ಮಿಷ್ಟದ ಫರ್ನಿಚರ್ಸ್ ಕೊಂಡುಕೊಂಡರು. ಹಲವು ಅಥಿತಿಗಳು ಈ ಮೇಳಕ್ಕೆ ಆಗಮಿಸಿದ ಶುಭ ಹಾರೈಸಿದರು.
ರಿಲ್ಯಾಕ್ಸ್ ಆಗಿ ಕುಳಿತುಕೊಳ್ಳಲು ಮಹಾರಾಜ ಸೋಫಾ, ಹಳೆ ಕಾಲದ ಆಂಟಿಕ್ ಟಚ್ನೊಂದಿಗೆ ಗ್ರಾಹಕರನ್ನು ಸೆಳೆಯುವ ಡೈನಿಂಗ್ ಸೆಟ್ಸ್, ಮನೆಗೆ ಒಂದು ರಾಯಲ್ ಲುಕ್ ಕೊಡಲು ಮರದ ತೂಗು ಉಯ್ಯಾಲೆಗಳು. ಇದೇನಪ್ಪ ಅಂದು ಕೊಂಡ್ರಾ? ಇದೇ ಪವರ್ ಟಿವಿ ಆಯೋಜಿಸಿರುವ ಫರ್ನಿಚರ್ & ಹೋಮ್ ಡೆಕೋರ್ ಎಕ್ಸ್ ಪೋ.
ಬೆಂಗಳೂರಿನ ಜೆ.ಪಿ ನಗರದ ಏಳನೇ ಹಂತದ ಬ್ರಿಗೇಡ್ ಮಿಲೇನಿಯಂ ಬಳಿಯ ಶುಭ್ ಕನ್ವೆನ್ಷನ್ ನಲ್ಲಿ ಅತಿದೊಡ್ಡ ಫರ್ನಿಚರ್ ಎಕ್ಸ್ ಪೋವನ್ನು ಪವರ್ ಟಿವಿ ಆಯೋಜಿಸಿದೆ. ಈಎಕ್ಸ್ ಪೋದಲ್ಲಿ ಪ್ರಮುಖ ಆಕರ್ಷಣೆಯನ್ನು ನೋಡೋದಾದ್ರೆ ಮಹಾರಾಜ ಸೋಫಾ, ಟೀಕ್ ವುಡ್ ಸೋಫಾ, ರೋಸ್ ವುಡ್ & ಲಕ್ಸುರಿ ಸೋಫಾ, ಡಿಸೈನರ್ ಸೋಫಾ, ಕಾಟ್ಸ್, ಉಯ್ಯಾಲೆ, ಡೈನಿಂಗ್ ಟೇಬಲ್, ಸೆಂಟರ್ ಟೇಬಲ್ಸ್, ಕಾರ್ಪೆಟ್ಸ್, ಕನ್ಸುಮರ್ ಐಟಮ್ಸ್ ಮುಂತಾದವುಗಳು ಗ್ರಾಹಕರನ್ನ ಸೆಳೆದವು.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಗೆ ಹೊಸ ಲುಕ್ ನೀಡಲಾಗುತ್ತದೆ : ಸಚಿವ ರಾಮಲಿಂಗ ರೆಡ್ಡಿ
50% ರಿಂದ 70% ಡಿಸ್ಕೌಂಟ್
ಗ್ರಾಹಕರನ್ನು ಆಕರ್ಷಿಸುವ ಬಗೆ ಬಗೆಯ ಫರ್ನಿಚರ್ಗಳನ್ನು ಕೊಂಡರೇ 50% ರಿಂದ 70% ಡಿಸ್ಕೌಂಟ್ ಕೂಡ ಸಿಗಲಿದೆ. ಹಾಗೆಯೇ ಮನೆಗೆ ಬೇಕಾದ ಮಾರ್ಬಲ್ ಕಲಾಕೃತಿಗಳು, ಮಸಾಜ್ ಚೇರ್ಸ್, ಫೋಟೋ ಫ್ರೇಮ್ಸ್, ಹ್ಯಾಂಡ್ ಮೇಡ್ ಕಲಾಕೃತಿಗಳು, ಗಿಫ್ಟ್ಸ್ ಸೇರಿ ಬಗೆ ಬಗೆಯ ವಸ್ತುಗಳು ಕೂಡ ಮೇಳದಲ್ಲಿ ಕೊಂಡುಕೊಳ್ಳಬಹುದಾಗಿದೆ.
ಸಚಿವ ರಾಮಲಿಂಗಾ ರೆಡ್ಡಿ ಚಾಲನೆ
ಪವರ್ ಟಿವಿ ಆಯೋಜಿಸಿರೋ ಫರ್ನಿಚರ್ಸ್ ಎಕ್ಸ್ ಪೋವನ್ನು ಸಚಿವ ರಾಮಲಿಂಗಾ ರೆಡ್ಡಿ ದೀಪ ಬೆಳಗಿ ಉದ್ಘಾಟನೆ ಮಾಡಿದರು. ಹಲವು ಮಳಿಗೆಗೆ ಭೇಟಿ ನೀಡಿ ಫರ್ನಿಚರ್ಸ್ ಮತ್ತು ಹೋಮ್ ಡೆಕೋರ್ಗಳನ್ನು ವೀಕ್ಷಿಸಿದರು. ಪವರ್ ಟಿವಿ ಆಯೋಜಿಸಿರೋ ಎಕ್ಸ್ ಪೋಗೆ ಶುಭ ಹಾರೈಸಿದರು. ಕಾಂಗ್ರೆಸ್ ಮುಖಂಡ ಉಮಾಪತಿಗೌಡ ಅವರು ಕೂಡ ಫರ್ನಿಚರ್ ಎಕ್ಸ್ ಪೋಗೆ ಭೇಟಿ ನೀಡಿ, ಫರ್ನಿಚರ್ಸ್ ಕಲೆಕ್ಷನ್ ಬಗೆಗಿನ ಪ್ರೀತಿಯನ್ನು ಹಂಚಿಕೊಂಡರು.
ಒಟ್ಟಿನಲ್ಲಿ ಇಂದಿನಿಂದ ಸೋಮವಾರದವರೆಗೆ ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ. ಜನರು ಅತಿದೊಡ್ಡ ಫರ್ನಿಚರ್ ಮೇಳಕ್ಕೆ ಭೇಟಿ ನೀಡಿ ಹೋಲ್ ಸೇಲ್ ದರದಲ್ಲಿ ನಿಮ್ಮ ಮನೆಗೆ ನಿಮ್ಮಿಷ್ಟದ ಪೀಠೋಪಕರಣಗಳನ್ನ ಕೊಂಡೊಯ್ಯಬಹುದು. ನಿಮ್ಮಿಷ್ಟದ ಫರ್ನಿಚರ್ಸ್ ನೀವು ಕೊಂಡುಕೊಳ್ಳಲು ನೀವು ಪವರ್ ಎಕ್ಸ್ ಪೋಗೆ ಭೇಟಿ ನೀಡಿ.