Monday, December 23, 2024

ಇಂದಿನಿಂದ ಪವರ್ ಟಿವಿ ಪ್ರಾಯೋಜಕತ್ವದಲ್ಲಿ ‘ಫರ್ನಿಚರ್ ಎಕ್ಸ್ ಪೋ’

ಬೆಂಗಳೂರು : ಫರ್ನಿಚರ್ ಪ್ರೇಮಿಗಳಿಗೆ ಪವರ್ ಟಿವಿ ಮತ್ತೆ ಶುಭಸುದ್ದಿ ತಂದಿದೆ. ಇಂದಿನಿಂದ ಪವರ್ ಟಿವಿ ಪ್ರಾಯೋಜಕತ್ವದಲ್ಲಿ ಫರ್ನಿಚರ್ ಎಕ್ಸ್​ ಪೋ, ಬಿಗ್ ಸಮ್ಮರ್ ಸೇಲ್ ನಡೆಯಲಿದೆ.

ಹೌದು, ಬೆಂಗಳೂರಿನ ಜೆ.ಪಿ ನಗರದ 7ನೇ ಹಂತದಲ್ಲಿರುವ ಶುಭ್ ಕನ್ವೆನ್​ಷನ್ ಸೆಂಟರ್​ನಲ್ಲಿ ಮೇ 26 ರಿಂದ 29ರವರೆಗೆ 4 ದಿನಗಳ ಕಾಲ ಫರ್ನಿಚರ್ ಎಕ್ಸ್​ ಪೋ ನಡೆಯಲಿದ್ದು, ಬಗೆ ಬಗೆಯ ಪೀಠೋಪಕರಣಗಳು ಲಭ್ಯ ಇರಲಿವೆ.

ಸಾರ್ವಜನಿಕರು ತಮ್ಮ ಮನೆಗಳಿಗೆ ಹೊಂದಾಣಿಕೆ ಆಗುವ ಮಾದರಿ ಮತ್ತು ವಿನ್ಯಾಸಕ್ಕೆ ಸರಿ ಹೊಂದುವ ರೀತಿಯ ಫರ್ನೀಚರ್​ಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಜತೆಗೆ, ಮನೆಯ ಮಂದಿಗೆಲ್ಲ ಹೊಂದಾಣಿಕೆ ಆಗುವ ಅಗತ್ಯತೆಯುಳ್ಳ ಫರ್ನೀಚರ್​ಗಳನ್ನು ಆಯ್ಕೆ ಮಾಡಿಕೊಳ್ಳಲು ಎಕ್ಸ್​ಪೋ ಸೂಕ್ತ ವೇದಿಕೆಯಾಗಲಿದೆ.

ಫರ್ನಿಚರ್​ ಎಕ್ಸ್​ ಪೋಗೆ ಭೇಟಿ ನೀಡಿ ಗ್ರಾಹಕರು ತಮಗಿಷ್ಟದ ಫರ್ನಿಚರ್ ಕೊಂಡುಕೊಳ್ಳಬಹುದು. ಇನ್ನೂ ಸೋಫಾ, ಡೈನಿಂಗ್ ಟೇಬಲ್ ಸೇರಿದಂತೆ ನೂರಾರು ಬಗೆಯ ನವ ನವೀನ ಮಾದರಿಯ ಪೀಠೋಪಕರಣಗಳು ಆಕರ್ಷಕ ಬೆಲೆಗೆ ಸಿಗಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸ್ಥಳ : ಶುಭ್ ಕನ್ವೆನ್​ಷನ್ ಸೆಂಟರ್​, ಬ್ರಿಗೇಡ್ ಮಿಲೆನಿಯಂ ಹತ್ತಿರ, ಜೆ.ಪಿ.ನಗರ, 7ನೇ ಹಂತ, ಬೆಂಗಳೂರು

RELATED ARTICLES

Related Articles

TRENDING ARTICLES