Friday, May 17, 2024

2024ರಲ್ಲಿ ಮೋದಿ ಸರ್ಕಾರವನ್ನು ಜನ ಕಿತ್ತೆಸೆಯುವುದು ನಿಶ್ಚಿತ : ಕಾಂಗ್ರೆಸ್ ಭವಿಷ್ಯ

ಬೆಂಗಳೂರು : ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ನರೇಂದ್ರ ಮೋದಿಯವರ ಸರ್ಕಾರವನ್ನು ಕಿತ್ತೆಸೆಯುವುದು ನಿಶ್ಚಿತ ಎಂದು ಕಾಂಗ್ರೆಸ್ ಪಕ್ಷ ಭವಿಷ್ಯ ನುಡಿದಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷಗಳ ಅಧಿಕಾರಾವಧಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಕಟುವಾಗಿ ವಾಗ್ದಾಳಿ ನಡೆಸಿದೆ.

ಪ್ರಮುಖವಾಗಿ ಕರ್ನಾಟಕದ ಚುನಾವಣಾ ಗೆಲುವನ್ನೇ ಅಸ್ತ್ರವಾಗಿ ಬಳಸಿರುವ ಕಾಂಗ್ರೆಸ್, ನರೇಂದ್ರ ಮೋದಿ ಅವರ 9 ವರ್ಷದ ವೈಫಲ್ಯದಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ ಎಂದು ಛೇಡಿಸಿದೆ.

ನರೇಂದ್ರ ಮೋದಿಯವರ ಸರ್ಕಾರ ಒಂಭತ್ತು ವರ್ಷಗಳ ಅವಧಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಒಂಬತ್ತು ವರ್ಷಗಳ ಅವಧಿ ದೇಶಕ್ಕೆ ಕರಾಳ ದಿನವನ್ನೇ ತಂದಿದೆ. ನರೇಂದ್ರ ಮೋದಿಯವರ ಸರ್ಕಾರವು ಜನತೆಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಯೇ ಇಲ್ಲ ಎಂದು ಕಿಡಿಕಾರಿದೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ ಆದ್ಮೇಲೆ ಸರ್ಕಾರ ನಡೆಯುತ್ತೋ, ಇಲ್ವೋ? : ಹೆಚ್.ಡಿ ಕುಮಾರಸ್ವಾಮಿ ಟಕ್ಕರ್

ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ

ಆರ್ಥಿಕ ಯೋಜನೆಗಳು, ವಿದೇಶಾಂಗ ವ್ಯವಹಾರ ಮತ್ತು ಗಡಿ ವಿವಾದಗಳ ವಿಷಯದಲ್ಲೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೆ ನರೇಂದ್ರ ಮೋದಿ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ. ಇದೇ ಕಾರಣಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ ಎಂದು ಕುಟುಕಿದೆ.

ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ

ಇನ್ನೂ, 2014ರ ಮೇ 26ರಂದು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. 2019ರ ಮೇ 30ರಂದು ಪ್ರಧಾನಮಂತ್ರಿ ಮತ್ತು ಅವರ ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ನಡೆದಿತ್ತು. ಮೇ 30ಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 9 ವರ್ಷ ಪೂರ್ಣಗೊಳಿಸಲಿದೆ.

RELATED ARTICLES

Related Articles

TRENDING ARTICLES