Monday, December 23, 2024

2000 ರೂ. ನೋಟಿಗಾಗಿ ಕಿರಿಕ್ : ರೈತನ ಮೇಲೆ ಹಲ್ಲೆಗೆ ಮುಂದಾದ ಕ್ಯಾಶಿಯರ್

ಬೆಂಗಳೂರು : 2 ಸಾವಿರ ಮುಖಬೆಲೆಯ ನೋಟು​​​ ಬ್ಯಾನ್​ ಮಾಡಿರುವುದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ರೈತರಿಗೂ ಈ ಬಿಸಿ ತಟ್ಟಿದೆ.

ರಸಗೊಬ್ಬರ ಅಂಗಡಿಯಲ್ಲಿ ರೈತರೊಬ್ಬರು ನೀಡಿದ್ದ 2 ಸಾವಿರ ರೂಪಾಯಿ ನೋಟನ್ನು ತೆಗೆದುಕೊಳ್ಳದೇ ಕ್ಯಾಶಿಯರ್​ ವಾಗ್ವಾದ ನಡೆಸಿದ್ದಾರೆ. ಈ ಘಟನೆ ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿಯ ರಸಗೊಬ್ಬರ ಖರೀದಿ ಕೇಂದ್ರದಲ್ಲಿ ನಡೆದಿದೆ.

ದೇಶದಲ್ಲಿ 2 ಸಾವಿರ ಮುಖಬೆಲೆಯ ನೋಟುಗಳು ಹಿಂಪಡೆಯುವ ನಿರ್ಧಾರ ಜಾರಿಯಾದಾಗಿನಿಂದ ಜನಸಾಮಾನ್ಯರಿಗೆ ಆತಂಕದ ಜೊತೆ ಗೊಂದಲ ಏರ್ಪಟ್ಟಿದೆ. ರಸಗೊಬ್ಬರ ಖರೀದಿ ಕೇಂದ್ರದಲ್ಲಿ ಅಂಗಡಿ ಮಾಲೀಕ ಮತ್ತು ರೈತನ ಮಧ್ಯೆ ಜಟಾಪಟಿ ನಡೆದಿದೆ.

ಇದನ್ನೂ ಓದಿ : ಮತ್ತೆ ನೋಟು ಬ್ಯಾನ್..! : 2,000 ನೋಟು ಚಲಾವಣೆ ಕುರಿತು ಮಹತ್ವದ ನಿರ್ಧಾರ

ರೈತನ ಮೇಲೆ ಹಲ್ಲೆಗೆ ಯತ್ನ

ರಸಗೊಬ್ಬರ ಖರೀದಿಸಿ ರೈತರೊಬ್ಬರು ಎರಡು ಸಾವಿರ ನೋಟು ನೀಡಿದ್ದಾರೆ. ಆದರೆ, ಅಂಗಡಿ ಕ್ಯಾಶಿಯರ್ ಎರಡು ಸಾವಿರ ನೋಟು ಸ್ವೀಕರಿಸಲು ನಿರಾಕರಿಸಿದ್ದಾರೆ. 2 ಸಾವಿರ ರೂಪಾಯಿ ನೋಟು ಏಕೆ ಸ್ವೀಕರಿಸುತ್ತಿಲ್ಲ ಎಂದು ರೈತ ಪ್ರಶ್ನಿಸಿದ್ದಕ್ಕೆ ಮ್ಯಾನೇಜರ್​ ಜೊತೆ ಮಾತನಾಡಿ ಎಂದಿದ್ದಾರೆ.

ಮಾತಿಗೆ ಮಾತು ಬೆಳೆದು ಕ್ಯಾಶಿಯರ್​ ರೈತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ರೈತ ಮತ್ತು ಕ್ಯಾಶಿಯರ್ ನಡುವಿನ ಮಾತಿನ ಚಕಮಕಿ ಮೊಬೈಲ್‌ನಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES