ಬೆಂಗಳೂರು : ಸಚಿವ ಸಂಪುಟ ರಚನೆ ಬಗ್ಗೆ ಒಂದೆಡೆ ದೆಹಲಿಯಲ್ಲಿ ಸರಣಿ ಸಭೆ ನಡೆಯುತ್ತಿದ್ದು, ಮತ್ತೊಂದೆಡೆ ನೂತನ ಸಚಿವರ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಹೌದು, ಇದೇ ಮೇ 27ರಂದು ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪ್ರಮಾಣವಚನ ಜರುಗಲಿದೆ. ಒಟ್ಟು 24 ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯ ಸರ್ಕಾರದ ಮನವಿ ಮೇರೆಗೆ ಪ್ರಮಾಣವಚನ ಸಮಾರಂಭಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದು, ಎಐಸಿಸಿ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಆದರೆ, ಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ .
ಈಗಾಗಲೇ 18 ಹೊಸ ಸಚಿವರ ಪಟ್ಟಿ ಸಿದ್ದವಾಗಿದ್ದು ಮತ್ತೆ ಕೆಲವು ಶಾಸಕರ ಆಯ್ಕೆ ಬಗ್ಗೆ ವರಿಷ್ಠರ ಜೊತೆ ಮಾತುಕತೆ ಮುಂದುವರಿದಿದೆ. ಮೊದಲ ಹಂತದಲ್ಲಿ 8 ಮಂದಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ : ಈ.. ಸರ್ಕಾರ ಹೋಗುವ ದಾರಿ ನೋಡಿದ್ರೆ, ಬಹಳ ದಿನ ಉಳಿಯಲ್ಲ : ಬೊಮ್ಮಾಯಿ ಲೇವಡಿ
ಇವರೇ ಸಂಭವನೀಯ ಸಚಿವರು
ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್, ಬಸವರಾಜ ರಾಯರೆಡ್ಡಿ, ಹೆಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಎಸ್.ಎಸ್ ಮಲ್ಲಿಕಾರ್ಜುನ್, ಬೈರತಿ ಸುರೇಶ್, ಕೃಷ್ಣಬೈರೇಗೌಡ, ರಹೀಂಖಾನ್, ಅಜಯ್ಸಿಂಗ್, ಪುಟ್ಟರಂಗಶೆಟ್ಟಿ, ನರೇಂದ್ರಸ್ವಾಮಿ, ಡಾ.ಎಂ.ಸಿ ಸುಧಾಕರ್, ಹೆಚ್.ಕೆ ಪಾಟೀಲ್, ಚಲುವರಾಯಸ್ವಾಮಿ, ಡಿ.ಸುಧಾಕರ್, ನಾಗೇಂದ್ರ ಅಥವಾ ಕೆ.ಎನ್.ರಾಜಣ್ಣ