Wednesday, January 22, 2025

ಬೆಂಗಳೂರು ಪೊಲೀಸರಿಗೆ ಡಿಜಿಪಿ ಅಲೋಕ್ ಮೋಹನ್ ಹೊಸ ಟಾಸ್ಕ್

ಬೆಂಗಳೂರು : ರಾಜ್ಯ ರಾಜಧಾನಿ ಪೊಲೀಸರಿಗೆ ನೂತನ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್ ಅವರು ಹೊಸ ಟಾಸ್ಕ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿ ಅಲೋಕ್ ಮೋಹನ್, ಬೆಂಗಳೂರು ಸಿಟಿಗೆ ರಿವ್ಯೂ ಮಾಡಿದ್ದೇವೆ ಎಂದು ಹೇಳಿದ್ದಾರೆ.

ರೌಡಿ ಆಕ್ಟವಿಟಿ ಝೀರೋ ಟೋಲೋರೆಂಟ್ ಆಗಬೇಕು. ಡ್ರಗ್ಸ್ ಬಗ್ಗೆ ಹೊಸ ಸ್ಟ್ರಾಟರ್ಜಿ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಜನಸ್ನೇಹಿ ಪೊಲೀಸಿಂಗದ ಆಗಬೇಕು. ಜನರ ಜೊತೆ ಬಿಹೇವಿಯರ್ ಸರಿ ಮಾಡಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ನೂತನ ಡಿಜಿಪಿಯಾಗಿ ಅಲೋಕ್‌ ಮೋಹನ್‌ ಅಧಿಕಾರ ಸ್ವೀಕಾರ

ಲಾ ಆ್ಯಂಡ್ ಆರ್ಡರ್ ಸರಿಯಾಗಿ ಇರಬೇಕು

ಕ್ಲಬ್ ಸೇರಿದಂತೆ ಯಾವುದೆ ಇಲ್ಲೀಗಲ್ ಆಕ್ಟಿವಿಟೀಸ್ ಇದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ‌ಫಿಜಿಕಲ್ ಫಿಟ್ನೇಸ್ ಬಗ್ಗೆ ನಾವು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಲಾ ಆ್ಯಂಡ್ ಆರ್ಡರ್ ಸರಿಯಾಗಿ ಇರಬೇಕು. ಯಾವ ರೀತಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಅಲೋಕ್ ಮೋಹನ್ ಹೇಳಿದ್ದಾರೆ‌.

ಸ್ಪಾಟ್ ಗೆ ಹೋಗ್ಲೇಬೇಕು

ಜನಸ್ನೇಹಿ ಪೊಲೀಸಿಂಗ್ ಬಗ್ಗೆ ನಾವು ಈಗ ಎಲ್ಲಾ ಪೊಲೀಸ್ ಠಾಣೆಗಳಿಗೆ ಬೋರ್ಡ್ ಕೂಡ ಹಾಕುತ್ತೇವೆ. ದೂರು ತೆಗೆದುಕೊಳ್ಳದೆ ಇದ್ದರೆ ಯಾರಿಗೆ ದೂರು ನೀಡಬೇಕು ಎಂದು ಎಲ್ಲಾ ಸ್ಟೇಷನ್ ಗೆ ಎಸಿಪಿ ದಿನ ಚೆಕ್ ಮಾಡಬೇಕು. ಡಿಸಿಪಿ ಅಟ್ಲೀಸ್ಟ್ ಒಂದು ಸ್ಟೇಷನ್ ಗೆ ವಿಸಿಟ್ ಮಾಡ್ತಾರೆ. ಕಮೀಷನರ್ ಕೂಡ ವಿಸಿಟ್ ಮಾಡ್ತಾರೆ. ‌ನಾನು ಕೂಡ ವಿಸಿಟ್ ಮಾಡ್ತಿನಿ. ಏನಾದರೂ ಇಂಪಾರ್ಟ್ಮೆಂಟ್ ಇದ್ದಾಗ ಸ್ಪಾಟ್ ಗೆ ಹೋಗ್ಲೇಬೇಕು ಎಂದು ತಾಕೀತು ಮಾಡಿದ್ದಾರೆ.

RELATED ARTICLES

Related Articles

TRENDING ARTICLES