Wednesday, January 22, 2025

60ನೇ ವಯಸ್ಸಿನಲ್ಲಿ 2ನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ

ಬೆಂಗಳೂರು : ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ 2ನೇ ಬಾರಿ ಹಸೆಮಣೆ ಏರಿದ್ದಾರೆ.

ಹೌದು, ಅಸ್ಸಾಂ ಮೂಲದ ರೂಪಾಲಿ ಎಂಬುವವರ ಜೊತೆ ನಟ ಆಶಿಶ್ ವಿದ್ಯಾರ್ಥಿ ಇಂದು ಬೆಳಗ್ಗೆ ಎರಡನೇ ಮದುವೆಯಾಗಿದ್ದಾರೆ. ರೂಪಾಲಿ ಬರುವಾ ಫ್ಯಾಷನ್ ಉದ್ಯಮಿಯಾಗಿದ್ದಾರೆ.

ಕುಟುಂಬದ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಕೋಲ್ಕತ್ತಾದಲ್ಲಿ ಈ ಮದುವೆ ಸಮಾರಂಭ ನೆರವೇರಿದೆ. ಈ ಹಿಂದೆ ಆಶಿಶ್ ಗಾಯಕಿ ಮತ್ತು ರಂಗಭೂಮಿ ಕಲಾವಿದೆ ರಾಜೋಶಿ ಅವರ ಜೊತೆ ಆಶಿಶ್ ವಿದ್ಯಾರ್ಥಿ ವಿವಾಹವಾಗಿದ್ದರು.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

ನಟ ಆಶಿಶ್ ವಿದ್ಯಾರ್ಥಿ ಅವರು ಜೂನ್ 19,1962ರಲ್ಲಿ ದೆಹಲಿಯಲ್ಲಿ ಜನಿಸಿದರು. 1986ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ ಹಾಗೂ ಬೆಂಗಾಲಿ ಸೇರಿದಂತೆ ಸುಮಾರು 11 ಭಾಷೆಯಲ್ಲಿ ನಟಿಸಿದ್ದಾರೆ. ಬಹುತೇಕ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿದ್ಯಾರ್ಥಿ, ಈವರೆಗೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : ಜಪಾನ್ ‘ಲೈಫ್ ಸ್ಟೈಲ್ ಮ್ಯಾಗಜಿನ್’ನಲ್ಲಿ ಎನ್​ಟಿಆರ್​, ಚೆರ್ರಿ

ಕೋಟಿಗೊಬ್ಬ ಚಿತ್ರದಲ್ಲಿ ನಟನೆ

ಇನ್ನೂ ಕನ್ನಡದಲ್ಲಿ ದಿವಂಗತ ಡಾ.ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ ಅದ್ಭುತವಾಗಿ ನಟಿಸಿದ್ದಾರೆ. ಎಕೆ-47, ನಂದಿ, ದುರ್ಗಿ, ಸುಂಟರಗಾಳಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಪೊಲೀಸ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ ಅವರು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಬಳಿಕ ಮಾತನಾಡಿರುವ ಅವರು, ನನ್ನ ಜೀವನದ ಈ ಘಟ್ಟದಲ್ಲಿ ರೂಪಾಲಿಯನ್ನು ಕೈಹೊಡಿಯುತ್ತಿರುವುದು ಒಂದು ವಿಶೇಷವಾದ ಭಾವನೆ. ನಾವು ಸಂಜೆ ಒಂದು ಸಣ್ಣ ಗೆಟ್ ಟು ಗೆದರ್ ನಡೆಯಲಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES