Wednesday, January 22, 2025

ಇಂಥ 100 ಡಿಕೆಶಿಗಳು ಬಂದ್ರು ಏನು ಮಾಡೋಕಾಗಲ್ಲ : ಶಾಸಕ ಯತ್ನಾಳ್

ಬೆಂಗಳೂರು : ಇಂತಹ ನೂರು ಡಿ.ಕೆ ಶಿವಕುಮಾರ್ ಗಳು ಬಂದ್ರು ಏನು ಆಗೋದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಡಿಕೆಶಿಗೆ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ? ಹಸರೀಕರಣ ಮಾಡಿ ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಎಂದು ಗುಡುಗಿದ್ದಾರೆ.

ಕೇಸರಿಯಲ್ಲಿ ಈ ಧರ್ಮದ ದೇಶದ ಸಂಕೇತವಿದೆ. ಪೊಲೀಸರು ಕೇಸರಿ ಶಾಲು ಹಾಕ್ಕೊಂಡ್ರೆ ತಪ್ಪೇನಿದೆ? ಕೇಸರಿಯನ್ನು ವಿರೋಧ ಮಾಡಿದ್ರೆ ಉಳಿಗಾಲವಿಲ್ಲ. ಕೆಲ ಗ್ಯಾರಂಟಿ ಕಾರ್ಡಗಳಿಂದ ಆರಿಸಿ ಬಂದಿದ್ದಾರೆ. ಶೀಘ್ರದಲ್ಲೇ ಗ್ಯಾರಂಟಿ ಕಾರ್ಡ್ಗಳು ಮುಗಿಯುತ್ತವೆ ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್ ನವ್ರು ಬಹಳ ಸಾಚಾನಾ?

2024ಕ್ಕೆ ಮತ್ತೆ ನರೇಂದ್ರ ಮೋದಿ ಅವರ ದೇಶದ ಪ್ರಧಾನಿಯಾಗಲಿದ್ದಾರೆ. ದೇಶ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿ.ಕೆ ಶಿವಕುಮಾರ್ ಗಳು ಬಂದ್ರು ಏನು ಆಗೋದಿಲ್ಲ. ಡಿಕೆಶಿ ಜೈಲಿಗೆ ಮೇಕೆದಾಟು ಹೋರಾಟ ಮಾಡಿ ಹೋಗಿದ್ರಾ? ಕಾಂಗ್ರೆಸ್ ನವರು ಏನು ಬಹಳ ಸಾಚಾ ಇದ್ದಾರ? ನೊಡೋಣ ಇದೀಗ ಪೊಲೀಸ್ ಠಾಣೆಗಳು ಹೇಗೆ ಕೆಲಸ ಮಾಡ್ತಾವೆ ಅಂತ‌ ಎಂದು ಸವಾಲೆಸೆದಿದ್ದಾರೆ.

ಇದನ್ನೂ ಓದಿ : ನಾನೇನು ‘ಮುಸ್ಲಿಮರ ಆಸ್ತಿ’ ಕಸಿದುಕೊಂಡಿಲ್ಲ : ಶಾಸಕ ಯತ್ನಾಳ್

ಇವ್ರಿಂದ ಪಾಕಿಸ್ತಾನ ಜಂಡಗಳು ಹಾರಾಡ್ತಿವೆ

ಕಾಂಗ್ರೆಸ್ ಬಂದ ಮೇಲೆ ದೇಶ ದ್ರೋಹಿ ಚಟುವಟಿಕೆಗಳು ಹೆಚ್ಚಾಗ್ತಿವೆ. ಪಾಕಿಸ್ತಾನ ಜಂಡಗಳು ಹಾರಾಡುತ್ತಿವೆ. ರಾಜ್ಯದಲ್ಲಿ ಬಿಜೆಪಿ ಮುಗಿದು ಹೋಗಿಲ್ಲ. ನಾವು ಹೋರಾಡ ಮಾಡ್ತೀವಿ. 66 ಶಾಸಕರು ವಿರೋಧ ಪಕ್ಷದಲ್ಲಿದ್ದೀವಿ‌. ಐದು ವರ್ಷ ಅವರು ಏನ್ಮಾಡಿದ್ರು ನಡೆಯುತ್ತೆ ಅನ್ನೋದಿಲ್ಲ ಎಂದು ಶಾಸಕ ಯತ್ನಾಳ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಏನಾಯಿತು ಗೊತ್ತಲ್ವಾ?

ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. 135 ಅಲ್ಲ, 200 ಸೀಟು ಬಂದ್ರು ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ ಏನಾಯಿತು ಅನ್ನೋದು ಗೊತ್ತಲ್ವಾ. ಇವರ ದುರಹಂಕಾರ, ಭ್ರಷ್ಟಾಚಾರ, ಗೂಂಡಾಗಿರಿ. ಲೋಕಸಭೆವರೆಗೂ ಗ್ಯಾರಂಟಿ ಕಾರ್ಡ್ ಇರುತ್ತೆ. ನಂತರ ವಾರಂಟಿ ಮುಗಿಯುತ್ತೆ ಎಂದು ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

RELATED ARTICLES

Related Articles

TRENDING ARTICLES