ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡೇ ಮಾಡ್ತೀವಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಎಲ್ಲವನ್ನೂ ಮತ್ತೊಮ್ಮೆ ವಾಪಸ್ ತಂದು ಪರಿಷ್ಕರಣೆ ಮಾಡೇ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಕರ್ನಾಟಕವನ್ನ ನಂಬರ್ 1 ಮಾಡುತ್ತೇವೆ. ಯಾವುದೇ ಸಂಘಟನೆ, ಯಾವುದೇ ಸಮುದಾಯಕ್ಕೆ ಸೇರಿರಲಿ. ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದ್ರೆ ಕಡಿವಾಣ ಹಾಕುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ : ಟಿಪ್ಪು ಜಯಂತಿ ಆಚರಿಸದಿರಲು ಕಾಂಗ್ರೆಸ್ ಸರ್ಕಾರ ನಿರ್ಧಾರ
ವೋಟ್ ಮೂಲಕ ನೀವು ತೋರಿಸಿಕೊಳ್ಳಿ
ಇಡೀ ಪೊಲೀಸ್ ಇಲಾಖೆಯನ್ನ ಕೇಸರೀಕರಣ ಮಾಡಲು ಬಿಜೆಪಿ ಹೊರಟಿದೆ. ಹೀಗಾಗಿ, ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಾಕೀತು ಮಾಡಿದ್ದಾರೆ. ನಿಮಗೆ ವೈಯಕ್ತಿಕ ರಾಜಕೀಯ ಏನಾದ್ರು ಇರಲಿ. ಅದನ್ನು ಮತದಾನದ ಮೂಲಕ ನೀವು ತೋರಿಸಿಕೊಳ್ಳಿ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ಸೀಕರಣ ಅಂದ್ರೆ ಬಸವ ತತ್ವ
ಕಾಂಗ್ರೆಸ್ಸೀಕರಣ ಅಂದ್ರೆ ಬಸವ ತತ್ವ. ಕಾಂಗ್ರೆಸ್ಸೀಕರಣ ಅಂದ್ರೆ ಗುರು ನಾರಾಯಣ ತತ್ವ. ಸಂವಿಧಾನವನ್ನು ಅನುಷ್ಠಾನಕ್ಕೆ ತರುವುದು ಕಾಂಗ್ರೆಸ್ಸೀಕರಣ. ನಾವು ಕಾನೂನು ಚೌಕಟ್ಟಿನಿಂದಲೇ ಕೆಲಸ ಮಾಡೋದು. ನಾಗಪುರದಿಂದ ಆದೇಶ ಮಾಡಿಸಿಕೊಂಡು ಬರುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.