Wednesday, January 22, 2025

ಈ.. ಸಿಎಂ 5 ವರ್ಷ ಅಧಿಕಾರದಲ್ಲಿ ಇರ್ತಾರಾ ಅನ್ನೋದೇ ಡೌಟು : ಬಿ.ವೈ ವಿಜಯೇಂದ್ರ

ಬೆಂಗಳೂರು : ಈ.. ಸಿಎಂ ಐದು ವರ್ಷ ಅಧಿಕಾರದಲ್ಲಿ ಇರುತ್ತಾರಾ ಎಂಬ ಸಂದೇಹ ಮೂಡಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಕೈ ಬಿಟ್ಟಿರೋದು ತಡವಾಗಿಯಾದರೂ ಕಾಂಗ್ರೆಸ್ ಗೆ ಜ್ಞಾನೋದಯವಾಗಿದೆ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತಿನ ಭರಾಟೆಯಲ್ಲಿ ಕೇಸರಿ ಉಲ್ಲೇಖ ಮಾಡಿದ್ದಾರೆ. ತ್ರಿವರ್ಣ ಧ್ವಜದಲ್ಲಿ ಕೇಸರಿ ಇದೆ. ಹನುಮನ ಬಣ್ಣ ಕೇಸರಿ. ಆದರೆ, ಕಾಂಗ್ರೆಸ್ ನಾಯಕರು ತಾವು ಇಡೀ ದೇಶದಲ್ಲಿ ಅಧಿಕಾರಕ್ಕೆ ಬಂದಿರುವಂತ ಭ್ರಮೆಯಲ್ಲಿದ್ದಾರೆ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ರಾಹುಲ್ ಪ್ರಧಾನಿಯಾಗಿದ್ರೆ ‘ಪಾಕಿಸ್ತಾನಕ್ಕೂ ಮುಂಚೆ ಭಾರತ ದಿವಾಳಿ’ಯಾಗುತ್ತಿತ್ತು : ಬಿ.ವೈ ವಿಜಯೇಂದ್ರ

ಉಚಿತ ಗ್ಯಾರಂಟಿ ಕಾರ್ಡ್ ಇರಲಿ, ಈ ಸಿಎಂ ಐದು ವರ್ಷ ಅಧಿಕಾರದಲ್ಲಿ ಇರುತ್ತಾರಾ? ಎಂಬ ಸಂದೇಹ ಮೂಡಿದೆ. ದಾರಿಲಿ ಹೋಗುವವರಿಗೆಲ್ಲ ಗ್ಯಾರಂಟಿ ಕಾರ್ಡ್ ಕೊಟ್ಟು ಮತ ಯಾಚನೆ ಮಾಡಿಲ್ವಾ. ಈಗಲೇ‌ಮುನ್ಸೂಚನೆ ಕಾಣಿಸುತ್ತಿದೆ ಎಂದು ಬಿ.ವೈ ವಿಜಯೇಂದ್ರ ಛೇಡಿಸಿದ್ದಾರೆ.

ಇದು ಡಬ್ಬಲ್ ಸ್ಟೇರಿಂಗ್ ಸರ್ಕಾರ. ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ಒಂದು, ಡಿಸಿಎಂ ಡಿ.ಕೆ ಶಿವಕುಮಾರ್ ಕೈಯಲ್ಲಿ ಒಂದು ಸ್ಟೇರಿಂಗ್ ಇದೆ. ಬಸ್ ಯಾವ ಕಡೆ ಹೋಗುತ್ತೋ ಗೊತ್ತಿಲ್ಲ. ದೇವರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES