Wednesday, January 22, 2025

ಮನೆಗೆ ಬಾರದ ಗಂಗೆ : ಕಲುಷಿತ ನೀರನ್ನೇ ಬಸಿದು ಕುಡಿಯುತ್ತಿರುವ ಗ್ರಾಮಸ್ಥರು

ಬೆಂಗಳೂರು : ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಜನರು ಹಳ್ಳದ ನೀರನ್ನೇ ಬಸಿದು ಕುಡಿಯುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಜಲಜೀವನ್ ಮಿಷನ್ ಕಾಮಗಾರಿ ವೇಳೆ ಗ್ರಾಮಕ್ಕೆ ಸರಬರಾಜಾಗುವ ನೀರಿನ ಪೈಪ್ ಲೈನ್ ವಿದ್ಯುತ್ ಕೇಬಲ್ ತುಂಡಾಗಿದೆ. ಇದರಿಂದ ಹಳ್ಳದ ನೀರನ್ನು ಕುಡಿಯುತ್ತಿರುವ ಕಳವಳಕಾರಿ ಘಟನೆ ಬೆಳಕಿಗೆ ಬಂದಿದೆ.

ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದ ತಪ್ಪಲಿನ ಆನೆಹೊಲ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ನಡೆಸುವಾಗ ಪೈಪ್ ಲೈನ್ ಒಡೆದು ಕುಡಿಯುವ ನೀರು ಸರಬರಾಜು ಆಗದಿರುವುದರಿಂದ ಗ್ರಾಮದ ಸಮೀಪ ಇರುವ ಹಳ್ಳದ ಕಲುಷಿತ ನೀರನ್ನೇ ಬಸಿದು ಗ್ರಾಮಸ್ಥರು ಬಳಸುತ್ತಿದ್ದಾರೆ.

ಇದನ್ನೂ ಓದಿ : ಭಾರೀ ಮಳೆಯಿಂದ ರಾಜ್ಯದ ಈ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಆನೆಹೊಲ ಗ್ರಾಮದಲ್ಲಿ 200 ಮನೆಗಳಿದ್ದು 400 ಹೆಚ್ಚು ಜನಸಂಖ್ಯೆ ಇದೆ. ಕಳೆದ 8 ದಿನಗಳಿಂದಲೂ ಕುಡಿಯುವ ನೀರು ಸರಬರಾಜು ಆಗದ ಹಿನ್ನೆಲೆ ಹಳ್ಳದ ನೀರನ್ನು ಬಸಿದು ಮಹಿಳೆಯರು ಮನೆಗೆ ಹೊತ್ತು ತರುವ ಪರಿಸ್ಥಿತಿ ಉದ್ಭವಿಸಿದೆ.

ಗ್ರಾಮದ ಸಮೀಪ ಹರಿಯುತ್ತಿರುವ ಕರಡಿ ಶೀಳು ಹಳ್ಳ ಎಂಬಲ್ಲಿಂದ ಮಹಿಳೆಯರು ಬಟ್ಟೆ ಮೂಲಕ ನೀರನ್ನು ಬಸಿದು ತರುತ್ತಿದ್ದು, ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ.

RELATED ARTICLES

Related Articles

TRENDING ARTICLES