ಬೆಂಗಳೂರು : ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ಐಪಿಎಲ್-2023 ಕ್ವಾಲಿಫೈಯರ್-1ರ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಗುಜರಾತ್ ನಾಯಕ ಪಾಂದ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚೆನ್ನೈ ತವರು ಅಂಗಳವಾದ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಈ ಪಂದ್ಯ ಗೆಲ್ಲುವ ತಂಡ ನೇರವಾಗಿ ಫೈನಲ್ ಗೆ ಲಗ್ಗೆ ಇಡಲಿದೆ. ಸೋತ ತಂಡವು ಎಲಿಮಿನೇಟರ್ ಗೆದ್ದ ತಂಡದ ಜೊತೆ ಕ್ವಾಲಿಫೈಯರ್-2ರಲ್ಲಿ ಸೆಣಸಲಿದೆ.
ಚೆನ್ನೈ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ನಾಯಕ ಧೋನಿ ಹಾಗೂ ರವೀಂದ್ರ ಜಡೇಜಾ ಕೊನೆಯ ಓವರ್ ಗಳಲ್ಲಿ ಅಬ್ಬರಿಸುವ ಮೂಲಕ ಮ್ಯಾಚ್ ಫಿನಿಶ್ ಮಾಡುತ್ತಿದ್ದಾರೆ.
🚨 Toss Update 🚨@gujarat_titans win the toss and elect to field first against @ChennaiIPL.
Follow the match ▶️ https://t.co/LRYaj7cLY9 #TATAIPL | #Qualifier1 | #GTvCSK pic.twitter.com/Bhj5g0Gv30
— IndianPremierLeague (@IPL) May 23, 2023
ಸಾಹ, ಗಿಲ್ ಸ್ಫೋಟಕ ಬ್ಯಾಟಿಂಗ್
ಹಾಲಿ ಚಾಂಪಿಯನ್ಸ್ ಗುಜರಾತ್ ಈ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಲೀಗ್ ಹಂತದಲ್ಲಿ 14 ಪಂದ್ಯ ಆಡಿರುವ ಗುಜರಾತ್ ಕೇವಲ ನಾಲ್ಕು ಪಂದ್ಯ ಸೋತು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಪಾಂಡ್ಯ ಪಡೆ ಬಲಿಷ್ಠವಾಗಿದೆ. ಆರಂಭಿಕ ಬ್ಯಾಟರ್ ಸಾಹ, ಗಿಲ್ ಸ್ಫೋಟಕ ಪ್ರದರ್ಶನ ಗುಜರಾತ್ ಗೆ ಆನೆಬಲ ನೀಡುತ್ತಿದೆ. ನಾಯಕ ಪಾಂಡ್ಯ, ಮಿಲ್ಲರ್, ವಿಜಯ್ ಶಂಕರ್, ತೇವಾಟಿಯ, ರಶೀದ್ ಖಾನ್ ಆರ್ಭಟಿಸುತ್ತಿದ್ದಾರೆ.
ಇದನ್ನೂ ಓದಿ : Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿದ ಕಿಂಗ್ ಕೊಹ್ಲಿ
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಎಂ.ಎಸ್ ಧೋನಿ(ನಾಯಕ/ವಿ.ಕೀ), ಋತುರಾಜ್ ಗಾಯಕ್ವಾಡ್, ಕಾನ್ವೆ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
The Playing XIs are IN!
What are your thoughts on the two sides for #Qualifier1?
Follow the match ▶️ https://t.co/LRYaj7cLY9#TATAIPL | #GTvCSK pic.twitter.com/yXcivEGKdu
— IndianPremierLeague (@IPL) May 23, 2023
ಗುಜರಾತ್ ಟೈಟಾನ್ಸ್ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ, ಶುಭ್ಮನ್ ಗಿಲ್, ದಾಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ