Saturday, November 2, 2024

ಗಾಯಕ್ವಾಡ್ ಅರ್ಧಶತಕ, ಗುಜರಾತ್ ಗೆಲುವಿಗೆ 173 ರನ್ ಟಾರ್ಗೆಟ್

ಬೆಂಗಳೂರು : ಐಪಿಎಲ್-2023ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 173 ರನ್ ಗಳ ಸವಾಲಿನ ಟಾರ್ಗೆಟ್ ನೀಡಿದೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತ ಚೆನ್ನೈ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು.

ಆರಂಭಿಕರಾದ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಕಾನ್ವೆ ಉತ್ತಮ ಜೊತೆಯಾಟ ನೀಡಿದರು. ಋತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನೊಂದಿಗೆ 60 ಸಿಡಿಸಿದರು. ಕಾನ್ವೆ 34 ಎಸೆತಗಳಲ್ಲಿ 40 ರನ್ ಗಳಿಸಿದರು.

ನಂತರ ಕ್ರೀಸ್ ಗೆ ಬಂದ ಯಾರೂ ತಂಡಕ್ಕೆ ಆಸರೆಯಾಗಲಿಲ್ಲ. ಭರವಸೆಯ ಬ್ಯಾಟರ್ ಶಿವಂ ದುಬೆ(01), ಅಜಿಂಕ್ಯಾ ರಹಾನೆ(17), ಅಂಬಟಿ ರಾಯುಡು(17), ಜಡೇಜಾ(22), ನಾಯಕ ಎಂ.ಎಸ್ ಧೋನಿ(01), ಮೋಯಿನ್ ಅಲಿ(9) ರನ್ ಗಳಿಸಿದರು. ಗುಜರಾತ್ ಪರ ಮೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ತಲಾ 2 ಪಡೆದರು. ದರ್ಶನ್, ನೂರ್ ಅಹಮ್ಮದ್, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

ರಾಯುಡು, ಧೋನಿ ವೈಫಲ್ಯ

ಚೆನ್ನೈ ತಂಡದ ಆಪತ್ಭಾಂದವರಾದ ನಾಯಕ ಎಂ.ಎಸ್ ಧೋನಿ ಹಾಗೂ ಅಂಬಟಿ ರಾಯುಡು ತವರು ಅಂಗಳದಲ್ಲೇ ಅಬ್ಬರಿಸಲಿಲ್ಲ. ಇದಲ್ಲದೆ, ಈ ಆವೃತ್ತಿಯಲ್ಲಿ ಇಬ್ಬರ ಬ್ಯಾಟ್ ಸದ್ದು ಮಾಡಿಲ್ಲ. ತಂಡ ಸಂಕಷ್ಟದಲ್ಲಿರುವಾಗ ಒಮ್ಮೆಯೂ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಇನ್ನೂ ಧೋನಿ ನಾಯಕರಾಗಿ ಸಫಲರಾಗಿದ್ದಾರೆ. ಆದರೆ, ಬ್ಯಾಟರ್ ಆಗಿ ಸತತ ವೈಫಲ್ಯ ಕಂಡಿದ್ದಾರೆ. ತವರು ಅಭಿಮಾನಿಗಳ ಮುಂದೆಯೇ ಧೋನಿ ಬ್ಯಾಟ್ ಮಂಕಾಗಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ.

RELATED ARTICLES

Related Articles

TRENDING ARTICLES