Wednesday, January 22, 2025

ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ಇನ್ನಿಲ್ಲ

ಬೆಂಗಳೂರು : ಕನ್ನಡದ ಸೂಪರ್ ಹಿಟ್ ಚಿತ್ರ ಅಮೃತವರ್ಷಿಣಿಯಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಬಹುಭಾಷಾ ನಟ ಶರತ್ ಬಾಬು (71) ನಿಧನರಾಗಿದ್ದಾರೆ.

1951ರಲ್ಲಿ ಆಂಧ್ರಪ್ರದೇಶದಲ್ಲಿ ಶರತ್ ಬಾಬು ಜನಿಸಿದ್ದರು. ಅವರು ಸುಮಾರು 4 ದಶಕಗಳಿಂದ ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

ಕನ್ನಡದ 20ಕ್ಕೂ ಹೆಚ್ಚು ಚಿತ್ರಗಳು ಸೇರಿದಂತೆ ಈವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ ಶರತ್ ಬಾಬು ಅವರು ಬಣ್ಣ ಹಚ್ಚಿದ್ದರು. ನಟ ಶರತ್ ಬಾಬು ನಿಧನದಿಂದ ಭಾರತೀಯ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ನಟ-ನಟಿಯರು, ನಿರ್ದೇಶಕ, ನಿರ್ಮಾಪಕರು ಹಾಗೂ ಗಣ್ಯರು ಕಂಬನಿ ಮಿಡಿದ್ದಾರೆ.

ಇದನ್ನೂ ಓದಿ : ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗಶೆಟ್ಟಿ ಹೃದಯಾಘಾತದಿಂದ ನಿಧನ

ಬೆಂಗಳೂರಿನಲ್ಲಿ ಚಿಕಿತ್ಸೆ

ಶರತ್ ಬಾಬು ಅವರನ್ನು ಏಪ್ರಿಲ್​ನ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಸ್ವಲ್ಪ ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದ್​ಗೆ ಕರೆದೊಯ್ಯಲಾಗಿತ್ತು. ಬಳಿಕ ಅಲ್ಲಿ ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೈದರಾಬಾದ್​ನ ಗಚ್ಚಿಬೌಲಿಯ ಎಐಜಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯು ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ವೈದ್ಯರ ಸತತ ಪ್ರಯತ್ನಗಳು ಫಲನೀಡದೆ ಶರತ್ ಬಾಬು ನಿಧನರಾಗಿದ್ದಾರೆ.

ಕನ್ನಡದಲ್ಲಿ ನಟಿಸಿದ ಚಿತ್ರಗಳು

ಪಂಚಭಾಷಾ ತಾರೆಯಾಗಿದ್ದ ನಟ ಶರತ್ ಬಾಬು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇವರು ಕನ್ನಡದಲ್ಲಿ ನಟಿಸಿದ್ದ ಚಿತ್ರಗಳು ಈ ಕೆಳಕಂಡಂತಿವೆ.

  • ಅಮೃತವರ್ಷಿಣಿ
  • ತುಳಸಿದಳ
  • ರಣಚಂಡಿ
  • ಶಕ್ತಿ
  • ಕಂಪನ
  • ಗಾಯ
  • ಉಷಾ
  • ಹೃದಯ ಹೃದಯ
  • ನೀಲ
  • ಓ ಪ್ರಿಯತಮನಮ್ ಯಜಮಾನ್ರು
  • ಬೃಂದಾವನ
  • ಆರ್ಯನ್
  • ಪ್ರೀತಿಗಾಗಿ

 

RELATED ARTICLES

Related Articles

TRENDING ARTICLES