Monday, December 23, 2024

ಮಾರ್ಟಿನ್ ಸಾಂಗ್ಸ್ ಶೂಟ್ ಗಾಗಿ ಧ್ರುವ ‘ಹೇರ್ ಸ್ಟೈಲ್, ಮೈಕಟ್ಟು’ ಚೇಂಜ್

ಬೆಂಗಳೂರು : ಟೀಸರ್​ನಿಂದ ಸಿಕ್ಕಾಪಟ್ಟೆ ಮಸಲತ್ತು ಮಾಡಿದ ಮಾರ್ಟಿನ್, ಇದ್ದಕ್ಕಿದ್ದಂತೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಜೊತೆ ಡಬ್ಬಿಂಗ್ ಕಾರ್ಯಗಳು ಮುಗಿದರೂ ಸಹ, ನಾಲ್ಕು ಹಾಡುಗಳ ಶೂಟಿಂಗ್ ಬ್ಯಾಲೆನ್ಸ್ ಉಳಿಸಿಕೊಂಡಿದೆ ಟೀಂ.

ರಿಲೀಸ್ ಡೇಟ್ ಅನೌನ್ಸ್ ಮಾಡದೆ, ಶೂಟಿಂಗ್ ಅಖಾಡಕ್ಕೂ ಇಳಿಯದೆ ಸಿನಿಮಾ ತಂಡ ಸೈಲೆಂಟ್ ಆಗಿತ್ತು. ಇತ್ತ, ಸಿನಿಮಾ ತಡ ಆಗ್ತಿರೋದ್ಯಾಕೆ ಅಂತಾ ಕಾದು ಕುಳಿತ ಧ್ರುವ ಸರ್ಜಾ ಅಭಿಮಾನಿಗಳಿಗೆ ಇದೀಗ ಲೇಟೆಸ್ಟ್ ಅಪ್ಡೇಟ್ ಕೊಟ್ಟಿದೆ ಚಿತ್ರತಂಡ.

ಅದ್ಧೂರಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಭರ್ಜರಿ ಸಿನಿಮಾಗಳಿಂದ ಬಹದ್ದೂರ್ ಗಂಡು ಅನಿಸಿಕೊಂಡ ಧ್ರುವ ಸರ್ಜಾ, ಹ್ಯಾಟ್ರಿಕ್ ಹಿಟ್ ಸಿನಿಮಾಗಳ ಸರದಾರನಾಗಿಯೂ ಮಿಂಚಿದರು. ಪೊಗರ್ದಸ್ತ್ ಸಿನಿಮಾದಿಂದ ಪಡ್ಡೆ ಹುಡ್ಗರ ನಿದ್ದೆ ಕೆಡಿಸಿದ್ದ ಧ್ರುವ, ಇದೀಗ ಮಾರ್ಟಿನ್ ಆಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುತ್ತಿದ್ದಾರೆ.

84ಕ್ಕೂ ಹೆಚ್ಚು ಮಿಲಿಯನ್ ವೀವ್ಸ್​

ನೋಡುಗರಿಗೆ ಮಸ್ತ್ ಮನರಂಜನೆ ಕೊಡುವುದರ ಜೊತೆಗೆ ಪೇಟ್ರಿಯಾಟಿಸಂ ಹೆಚ್ಚಿಸುವ ಈ ಸಿನಿಮಾದಲ್ಲಿ ಇಂಡೋ-ಪಾಕ್ ಕ್ಲ್ಯಾಶ್​​ನ ಎಳೆ ಕೂಡ ಇರಲಿದೆ. ಟೀಸರ್ ಸುಮಾರು 84ಕ್ಕೂ ಅಧಿಕ ಮಿಲಿಯನ್ ವೀವ್ಸ್​ನಿಂದ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ. ಎ.ಪಿ ಅರ್ಜುನ್ ನಿರ್ದೇಶನ, ಉದಯ್ ಕೆ ಮೆಹ್ತಾ ನಿರ್ಮಾಣದ ಈ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ತಯಾರಾಗುತ್ತಿದೆ.

ಟೀಸರ್​ ಗಮ್ಮತ್ತಿಗೆ ಸಿನಿ ದುನಿಯಾ ದಂಗು

ಪಾಕ್ ಜೈಲಲ್ಲಿ ಖೈದಿಯಾಗಿ ಕಾಣಸಿಗೋ ನಾಯಕನಟನ ಜೊತೆ ಇಂಟರ್​ನ್ಯಾಷನಲ್ ಬಾಡಿ ಬಿಲ್ಡರ್ಸ್​ ಕಾಣಿಸಿಕೊಂಡಿದ್ದು, ಟೀಸರ್​ನಲ್ಲಿರೋ ಗಮ್ಮತ್ತಿಗೆ ಇಡೀ ಇಂಡಿಯನ್ ಸಿನಿಮಾ ದಂಗಾಗಿದೆ. ಅದರಲ್ಲೂ ಧ್ರುವ ಹಾರ್ಡ್​ ವರ್ಕ್​ ಹಾಗೂ ಡೆಡಿಕೇಷನ್​ಗೆ ಫಿದಾ ಆಗಿರೋ ಸಿನಿಪ್ರಿಯರು, ಭರ್ಜರಿ ಹುಡ್ಗನ ಫ್ಯಾನ್ ಫಾಲೋಯಿಂಗ್ ಹೆಚ್ಚಾಗುವಂತೆ ಮಾಡಿದೆ.

ಅಂದಹಾಗೆ ಮಾರ್ಟಿನ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಂತೆ ಮತ್ತೊಂದು ಮೆಗಾ ಮೂವಿಗೆ ಕೈ ಹಾಕಿದ ಧ್ರುವ, ಜೋಗಿ ಪ್ರೇಮ್ ಜೊತೆ ಕೆಡಿಯಲ್ಲಿ ಬ್ಯುಸಿ ಆದರು. ಅದಕ್ಕಾಗಿ ಜಿಮ್​ನಲ್ಲಿ ಬೆವರಿಳಿಸಿ, ವೆಯ್ಟ್ ಕೂಡ ಲಾಸ್ ಮಾಡಿಕೊಂಡರು. ಕಂಪ್ಲೀಟ್ ಲುಕ್ ಕೂಡ ಬದಲಿಸಿ, ರೆಟ್ರೋ ಲುಕ್​ಗೆ ಇಳಿದ್ರು. ಆದ್ರೀಗ ಮಾರ್ಟಿನ್ ಚಿತ್ರದ ಟಾಕಿ ಪೋರ್ಷನ್ ಮುಗಿದು, ಡಬ್ಬಿಂಗ್ ಕೂಡ ಆಲ್ಮೋಸ್ಟ್ ಕಂಪ್ಲೀಟ್ ಎನ್ನಲಾಗುತ್ತಿದೆ. ಆದರೆ, ಹಾಡುಗಳ ಶೂಟಿಂಗ್ ಮಾತ್ರ ಹಾಗೆಯೇ ಪೆಂಡಿಂಗ್ ಉಳಿದಿದೆ.

ದುಬಾರಿ ಸೆಟ್​​ಗಳಲ್ಲಿ ಹಾಡುಗಳ ಚಿತ್ರೀಕರಣ

ಮಣಿಶರ್ಮಾ ಸಂಗೀತ ಸಂಯೋಜನೆಯ ನಾಲ್ಕು ಹಾಡುಗಳ ಪೈಕಿ ಮೂರನ್ನು ದುಬಾರಿ ಸೆಟ್​​ಗಳಲ್ಲಿ ಹಾಗೂ ಒಂದನ್ನ ಔಟ್​ಡೋರ್​​ನಲ್ಲಿ ಚಿತ್ರಿಸೋ ಯೋಜನೆಯಲ್ಲಿದೆ ಟೀಂ. ಆದರೆ, ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡದೆ, ಹೀಗೆ ಪೋಸಗ್ಟ್ ಪ್ರೊಡಕ್ಷನ್ ಕಾರ್ಯಗಳು ಮುಗೀತಾ ಬಂದರೂ ಸಹ ಹಾಡುಗಳ ಶೂಟಿಂಗ್ ಬ್ಯಾಲೆನ್ಸ್ ಉಳಿಸಿಕೊಂಡಿರೋದ್ಯಾಕೆ ಅನ್ನೋದು ಎಲ್ಲರ ಪ್ರಶ್ನೆ. ಅದಕ್ಕೆ ಉತ್ತರ ಧ್ರುವ ವೆಯ್ಟ್ ಲಾಸ್ ಆಗಿರೋದು ಹಾಗೂ ಹೇರ್​ಸ್ಟೈಲ್ ಬದಲಿಸಿರೋದು.

ಹೌದು, ಈಗ ಮತ್ತೆ ತೂಕ ಹೆಚ್ಚಿಸಿಕೊಳ್ಳೋ ಕಾರ್ಯದಲ್ಲಿರೋ ಧ್ರುವ ಸರ್ಜಾ, ಮಗಳ ಫೋಟೋಸ್ ಹಾಗೂ ವಿಡಿಯೋಸ್​ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ಮೂಲಕ ಫ್ಯಾಮಿಲಿಮ್ಯಾನ್ ಆಗಿದ್ದಾರೆ. ಸದ್ಯದಲ್ಲೇ ಮಾರ್ಟಿನ್ ಸೆಟ್​ಗೆ ಎಂಟ್ರಿ ಕೊಡಲಿರೋ ಌಕ್ಷನ್ ಪ್ರಿನ್ಸ್, ಹಾಡುಗಳ ಚಿತ್ರೀಕರಣ ಮುಗಿಸುತ್ತಿದ್ದಂತೆ ಮೋಸ್ಟ್ ಎಕ್ಸ್​ಪೆಕ್ಟೆಡ್ ಮಾರ್ಟಿನ್ ರಿಲೀಸ್ ಡೇಟ್ ಘೋಷಿಸಲಿದ್ದಾರೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES